ಶಿವಮೊಗ್ಗ : ಮೈಸೂರು ದಸರ ನಂತರ ಆನೆಗಳ ಮೂಲಕ ನಗರದಲ್ಲಿ ಜಂಬೂಸವಾರಿ ಮಾಡುವಂತಹ ದೃಶ್ಯ ಕಂಡು ಬರುವುದು ಶಿವಮೊಗ್ಗದಲ್ಲಿ ಮಾತ್ರ.
ದಶಕಗಳ ಹಿಂದಿನಿಂದಲೂ ಅದ್ದೂರಿ ದಸರಾ ಆಚರಣೆ ಮಾಡಿಕೊಂಡು ಬರುತ್ತಿರುವ ಶಿವಮೊಗ್ಗ ನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಕೆಲ ವರ್ಷಗಳಿಂದ ದಸರಾ ಉತ್ಸವಕ್ಕೆ ಸಮೀಪದ ಸಕ್ರೆಬೈಲು ಆನೆ ಬಿಡಾರದಿಂದ ಆನೆಗಳನ್ನ ಕರೆಯಿಸಿ ಮೆರವಣಿಗೆ ಮಾಡಿಸುತ್ತಿದೆ.
ಇಲ್ಲಿಯೂ ಉತ್ಸವ ಮೂರ್ತಿಯನ್ನ ಮರದ ಅಂಬಾರಿಯಲ್ಲಿ ಹೊತ್ತು ಆನೆಗಳು ಇಂದು ಸಾಗಬೇಕಿತ್ತು. ಆದರೆ ಅರಣ್ಯ ಇಲಾಖೆಯ ಹೊಣೆಗೇಡಿತನದಿಂದ ಉತ್ಸವದಲ್ಲಿ ಭಾಗಿಯಾಗಲು ಬಂದಂತಹ ನೇತ್ರಾವತಿ ಆನೆ ಕಳೆದ ರಾತ್ರಿಯೇ ಹೆಣ್ಣು ಮರಿಗೆ ಜನ್ಮ ನೀಡಿದೆ. ಜಂಬೂ ಸವಾರಿಯೂ ರದ್ದಾಗಿದೆ.
ಉತ್ಸವ ಮೂರ್ತಿಯನ್ನ ತೆರೆದ ವಾಹನದಲ್ಲಿ ಸಾಗಿಸಲು ಸಿದ್ಧತೆ ನಡೆದಿದೆ. ಶಿವಮೊಗ್ಗ ದಸರಾ ಉತ್ಸವಕ್ಕೆ ಪಾಲ್ಗೊಳ್ಳಲು ಅನುಭವಿ ಆನೆ ಸಾಗರ ಜೊತೆ ನೇತ್ರಾವತಿ ಹಾಗೂ ಹೇಮಾವತಿ ಎಂಬ ಎರಡು ಆನೆಗಳನ್ನ ಅಣಿಮಾಡಲಾಗಿತ್ತು. ಸಾಗರ್ ಅಂಬಾರಿ ಹೊತ್ತರೆ, ಎರಡು ಆನೆಗಳು ಜೊತೆ ಸಾಗಬೇಕಿತ್ತು.
ಶಿವಮೊಗ್ಗ ನಗರದಿಂದ ಹದಿನೈದು ಕಿಲೋಮೀಟರ್ ದೂರದ ಸಕ್ರೆಬೈಲು ಆನೆ ಬಿಡಾರದಲ್ಲೇ ಈ ಸೂಚಿತ ಆನೆಗಳಿಗೆ ಹದಿನೈದು ದಿನ ತಾಲೀಮು ನಡೆಸಿ, ಕೆಲ ದಿನಗಳ ಹಿಂದೆ ನಗರಕ್ಕೆ ಕರೆತರಲಾಗಿತ್ತು. ವಾಸವಿ ಶಾಲಾ ಆವರಣದಲ್ಲಿ ಆನೆಗಳ ಆರೈಕೆ ನಡೆಸಲಾಗಿತ್ತು. ವೈಭವದ ದಸರಾ ತೋರಿಸಲು ಪಾಲಿಕೆಯಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಅದೃಷ್ಟವೆಂಬಂತೆ ಸುಮಾರು ಮೂವತ್ತು ವರ್ಷದ ಹೆಣ್ಣಾನೆ ನೇತ್ರಾವತಿ ಆರೋಗ್ಯವಂತ ಹೆಣ್ಣು ಮರಿಗೆ ಜನ್ಮ ನೀಡಿದೆ.
ದುರಾದೃಷ್ಟಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ಹೊಣೆಗೇಡಿತನ ತೀವ್ರ ಮುಜುಗರ ಉಂಟು ಮಾಡಿದೆ. ದುರಂತ ಅಂದ್ರೆ ಅರಣ್ಯಾಧಿಕಾರಿಗಳು ಹಾಗೂ ಸಕ್ರೆಬೈಲು ಆನೆ ಆರೋಗ್ಯ ಕಾಪಾಡುವ ವೈದ್ಯ ವಿನಯ್ ಗೂ ಕೂಡ ಈ ಆನೆ ಎಷ್ಟು ತಿಂಗಳಿಂದ ಗರ್ಭ ಧರಿಸಿತ್ತು ಎಂದು ಗೊತ್ತಿಲ್ಲ. ಸಾಲದು ಎಂಬಂತೆ ಈ ತನಕ ಉನ್ನತ ಮಟ್ಟದಲ್ಲಿ ಆನೆಯ ಗರ್ಭಾವಸ್ಥೆ ಟೆಸ್ಟ್ ಮಾಡುವ ಯಾವುದೇ ಕೆಲಸಕ್ಕೆ ಇಲಾಖೆ ಮುಂದಾಗಿಲ್ಲ. ಇಂತಹ ಯಾವುದೇ ವರದಿಯೂ ಅವರ ಬಳಿ ಇಲ್ಲ.
ಆನೆಯನ್ನ ಹದಿನೈದು ದಿನ ತರಬೇತಿ ಹೆಸರಲ್ಲಿ ಆಯಾಸ ಮಾಡಿಸಿ, ಪಾಲಿಕೆ ಹಣದ ವೈಭೋಗಕ್ಕೆ ಅನಾಗರೀಕ ವರ್ತನೆ ತೋರಿದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದು ಕೆಲ ಘಂಟೆಗಳಲ್ಲಿ, ನೇತ್ರಾವತಿ ಆನೆಯನ್ನ ಸಕ್ರೆಬೈಲು ಕ್ಯಾಂಪ್‌ಗೆ ಶಿಫ್ಟ್ ಮಾಡಿಸಲಾಗಿದೆ. ಉಳಿದೆರಡು ಆನೆಗಳು ಇಲ್ಲೇ ಉಳಿದುಕೊಂಡಿದ್ದು ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತ ವಾಹನದ ಅಕ್ಕ ಪಕ್ಕ ಹೆಜ್ಜೆ ಹಾಕಲಿವೆ.
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ನಂಜೆದೇವಪುರ ಗ್ರಾಮದ ಸುತ್ತಮುತ್ತ ಹುಲಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿಸಲಾಗಿದೆ. ಚಾಮರಾಜನಗರ ತಾಲ್ಲೂಕಿನ…
ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಎಂಬಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳಿನ ಪಂದ್ಯಕ್ಕೆ ಅವಕಾಶ ಇಲ್ಲ ಎಂದು ತಿಳಿದುಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ…
ಮೈಸೂರು: ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯಿಂದ 80 ಸಾವಿರ ರೂ ದೋಚಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ರಮೇಶ್ ಹಾಗೂ…
ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.…
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ವಾರ್ ಬಗ್ಗೆ ನಟ ಕಿಚ್ಚ ಸುದೀಪ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯುದ್ಧಕ್ಕೆ ಸಿದ್ಧ ಮಾತಿಗೆ…
ಮೈಸೂರಿನ ಸುಭಾಷ್ ನಗರದ ೪ನೇ ಮುಖ್ಯರಸ್ತೆಯಲ್ಲಿರುವ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದು, ಗಾಳಿ ಅಥವಾ ಮಳೆಯ ಸಮಯದಲ್ಲಿ ಶಾರ್ಟ್…