ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿಗೆ ನಟ ದರ್ಶನ್, ಪವಿತ್ರಾಗೌಡ ಮತ್ತು ಸಹಚರರು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಫೋಟೊಗಳು ದತ್ತಾಂಶ ಮರು ಸಂಗ್ರಹದ ವೇಳೆ ಲಭ್ಯವಾಗಿವೆ. ಆರೋಪಿಗಳ ಕ್ರೌರ್ಯ ಅನಾವರಣವಾಗಿದೆ.
ದೋಷಾರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ರೇಣುಕಸ್ವಾಮಿ ಕೈಮುಗಿದು ಬೇಡಿಕೊಳ್ಳುತ್ತಿರುವ ಹಾಗೂ ನಿತ್ರಾಣಗೊಂಡು ಅಂಗಾತ ಮಲಗಿರುವ ಫೋಟೊಗಳು ಲಭ್ಯವಾಗಿವೆ. ಈ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಅನೇಕರ ವಿರುದ್ಧ ಪ್ರಬಲ ಸಾಕ್ಷ್ಯಗಳು ಸಿಕ್ಕಿದಂತೆ ಆಗಿದೆ.
ಪಟ್ಟಣಗೆರೆ ಶೆಡ್ನಲ್ಲಿ ಕೊಲೆ ಮಾಡುವ ಸಂದರ್ಭದಲ್ಲಿ ತೆಗೆದ ಫೋಟೊ ಇದಾಗಿದೆ. ಮೈಮೇಲೆ ಗಾಯದ ಗುರುತುಗಳಿವೆ. ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ಇನ್ನ ಮುಂದೆ ಪವಿತ್ರಾಗೆ ಸಂದೇಶ ಕಳುಹಿಸುವುದಿಲ್ಲ. ತಪ್ಪಾಯಿತು ಬಿಡಿ ಎಂದು ಪರಿಪರಿಯಾಗಿ ಕ್ಷಮೆ ಕೋರಿದ್ದರೂ ಆರೋಪಿಗಳ ಮನಸ್ಸು ಕರಗಿರಲಿಲ್ಲ. ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು ಎಂದು ಗೊತ್ತಾಗಿದೆ. ಈ ಅಂಶಗಳನ್ನೂ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕೃತ್ಯದ ವೇಳೆ ಪವಿತ್ರಾಗೌಡ ವ್ಯವಸ್ಥಾಪಕ ಕೆ. ಪವನ್ ಫೋಟೊ ತೆಗೆದು ಅದನ್ನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ವಿನಯ್ ಹಾಗೂ ದರ್ಶನ್ ಆಪ್ತ, ಸಾಫ್ಟ್‌ವೇರ್ ಎಂಜಿನಿಯರ್ ಪ್ರದೂಷ್ ಅವರ ಐಫೋನ್‌ಗೆ ಕಳುಹಿಸಿದ್ದರು. ರೇಣುಕಸ್ವಾಮಿ ಮೃತಪಟ್ಟ ನಂತರ ಫೋಟೊ ಡಿಲೀಟ್ ಮಾಡಿ ಸಾಕ್ಷ್ಯ ನಾಶ ಪಡಿಸಿದ್ದರು. ದತ್ತಾಂಶ ಮರು ಸಂಗ್ರಹದ ವೇಳೆ ಆ ಫೋಟೊ ಲಭ್ಯ ಆಗಿವೆ.
ಬೆಂಗಳೂರು : ಇಂದು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಇದೇ ಮೊದಲ ಬಾರಿಗೆ ಶೇ.94.10ರಷ್ಟು ಫಲಿತಾಂಶ ಪ್ರಕಟವಾಗಿದೆ.…
ಬೆಂಗಳೂರು : 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ದಾಖಲೆಯ ಫಲಿತಾಂಶ ಬಂದಿದೆ. ಶಿಕ್ಷಣ ಸಚಿವ…
ಬೆಂಗಳೂರು : 2026ನೇ ಸಾಲಿನ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳ ಫಲಿತಾಂಶದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ.…
ಬೆಂಗಳೂರು : 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು ಬುಧವಾರ (ಏಪ್ರಿಲ್ 23) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ…
ಕೈಗಾರಿಕೆಗಳ ತ್ಯಾಜ್ಯ, ಒಳಚರಂಡಿ ನೀರು ಸೇರಿ ಸ್ನಾನಘಟ್ಟದ ನೀರು ಕಲ್ಮಶ, ಸ್ನಾನ ಮಾಡುವ ಭಕ್ತರಿಗೆ ರೋಗದ ಭೀತಿ ಎಸ್.ಎಸ್.ಭಟ್ ನಂಜನಗೂಡು…
ಸಾಲಿಗ್ರಾಮ : ಪಟ್ಟಣದ ಹೊರವಲಯದಲ್ಲಿ ಕಾರುಗಳ ಮುಖಾಮುಖಿ ಡಿಕ್ಕಿಯಾಗಿ ಇಬ್ಬರ ಸಾವಿಗೀಡಾಗಿ, ಮೂವರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಪಟ್ಟಣದಿಂದ ಕೇರಳಾಪುರಕ್ಕೆ…