ಬೆಂಗಳೂರು: ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ಕಾಂಗ್ರೆಸ್ ಕೊಡುಗೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೇಲ್ ನಲ್ಲಿ ಇದ್ದಾರೆ, ಯುವ ಕಾಂಗ್ರೆಸ್ ನವರು ಬೇಲ್ ನಲ್ಲಿ ಇದ್ದಾರೆ. ಇಲ್ಲಿಯವರೆಗೂ ಹಗರಣ ನಡೆಸಿದ್ದು ಕಾಂಗ್ರೆಸ್, ಭಯೋತ್ಪಾದನೆ ಹಾಗೂ ಭ್ರಷ್ಟಾಚಾರ ಕಾಂಗ್ರೆಸ್ ಕೊಡುಗೆ ಎಂದು ಆರೋಪಿಸಿದರು. ಕಾಂಗ್ರೆಸ್ ಕೊಡುಗೆ ಏನು ದೇಶಕ್ಕೆ? ಸ್ವಾತಂತ್ರ್ಯದ ಹೆಸರಿನಲ್ಲಿ ಕಾಂಗ್ರೆಸ್ ಭಿಕ್ಷೆ ಬೇಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ದೀರ್ಘಾವಧಿಯ ಅಧಿಕಾರ ನಡೆಸಿದ್ದು ಕಾಂಗ್ರೆಸ್. ಮೊದಲ ಪ್ರಧಾನಿ ನೆಹರು ಅವರಿಂದ ಮನಹೋಹನ್ ಸಿಂಗ್ ವರೆಗೆ ಹಲವು ಹಗರಣ ನಡೆದಿದೆ. ಲಾಲ್ಬಹದ್ದೂರ್ ಶಾಸ್ತ್ರಿ ಹೊರತಾಗಿ ಎಲ್ಲ ಕಾಂಗ್ರೆಸ್ ಅವಧಿಯ ಪ್ರಧಾನಿಗಳು ಭ್ರಷ್ಟರು. ಕೆಪಿಸಿಸಿ ಅಧ್ಯಕ್ಷ
ಡಿ ಕೆ ಶಿವಕುಮಾರ್ ಬೇಲ್ ನಲ್ಲಿ ಇದ್ದಾರೆ, ಯುವ ಕಾಂಗ್ರೆಸ್ ನವರು ಬೇಲ್ ನಲ್ಲಿ ಇದ್ದಾರೆ. ಭ್ರಷ್ಟಾಚಾರ ಮಹಾಶಯ ಕಾಂಗ್ರೆಸ್, ಸಿದ್ದರಾಮಯ್ಯ ಮಾಡಿದ ಕಾಂಗ್ರೆಸ್ ಇವಾಗ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದೆ. ಇದು ಭಾರತವನ್ನು ಜೋಡಿಸುವ ಯಾತ್ರೆ ಅಲ್ಲ, ಭಾರತದಿಂದ ಬೇರೆ ಕಡೆ ಓಡಲು ದಾರಿ ಹುಡುಕುವ ಯಾತ್ರೆ ಇದಾಗಿದೆ ಎಂದರು.