ರಾಜ್ಯ

ಸೂರಜ್ ರೇವಣ್ಣ ಪ್ರಕರಣ: ಇದೆಲ್ಲವೂ ವಿಚಿತ್ರ, ವಿಕೃತವಾದ, ಅಸಹ್ಯ ಪಡುವ ಪ್ರಕರಣಗಳು: ಪ್ರಿಯಾಂಕ್ ಖರ್ಗೆ

ಕಲಬುರುಗಿ: ಸೂರಜ್ ರೇವಣ್ಣ ಪ್ರಕರಣ ಇದೆಲ್ಲವೂ ವಿಚಿತ್ರ, ವಿಕೃತವಾದ ಅಸಹ್ಯ ಪಡುವ ಪ್ರಕರಣಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಕಲಬುರುಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಜ್ವಲ್, ಸೂರಜ್, ಯಡಿಯುರಪ್ಪ ಯಾರದ್ರೂ ಆಗಿರಬಹುದು, ಏನು ನಡೆಯುತ್ತದೆ ಅಂತ ಗೊತ್ತಾಗುತ್ತಿಲ್ಲ. ಆಶ್ಚರ್ಯ ಏನು ಅಂದ್ರೆ, ಯಾರು ಈ ಪ್ರಕರಣದಲ್ಲಿದ್ದಾರೆ ಅವರಿಗೆ ಏನು ಅನ್ನಿಸುತ್ತಿಲ್ಲ. ಎಲ್ಲರೂ ಬೇರೆಯವರ ರಾಜೀನಾಮೆ ಕೇಳುತ್ತಿದ್ದಾರೆ. ಮೊದಲು ಅವರು ಆತ್ಮಾವಲೋಕನಾ ಮಾಡಿಕೊಳ್ಳುತ್ತಿಲ್ಲ. ಅವರದ್ದು ದೊಡ್ಡ ಮನೆ ಎಲ್ಲರೂ ಅಧಿಕಾರದಲ್ಲಿದ್ದಾರೆ. ಅವರ ಮೇಲೆ ಏನು ಜವಾಬ್ದಾರಿ ಇದೆ, ಸಮಾಜಕ್ಕೆ ಏನಂತ ಮೆಸೇಜ್ ಕಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅಲ್ಲದೆ ಕುಮಾರಸ್ವಾಮಿ ರಾಜೀನಾಮೆ ಅವರ ವಿವೇಚನೆಗೆ ಬಿಟ್ಟ ವಿಚಾರ. ಲಕ್ಷಾಂತರ ಜನ ಕಾರ್ಯಕರ್ತರು ಇದ್ದಾರೆ. ಅವರನ್ನು ನಂಬಿಕೊಂಡು ಎನ್.ಡಿ.ಎ ನಡೆಯುತ್ತಿದೆ. ಕುಮಾರಸ್ವಾಮಿ, ದೇವೇಗೌಡರು, ರೇವಣ್ಣರ ಬಗ್ಗೆ ಮಾತನಾಡಲು ಹೋಗಲ್ಲ.

ಅವರ ಸ್ವಂತ ವಿವೇಚನೆ, ಅವರೇ ಆತ್ಮಾವಲೋಕನೆ ಮಾಡಿಕೊಂಡು ಏನು ಮಾಡುತ್ತಾರೆ ಅವರಿಗೆ ಬಿಟ್ಟಿದ್ದು ಎಂದರು. ಜೊತೆಗೆ ಈ ವಿಚಾರದಲ್ಲಿ ಬಿಜೆಪಿಯವರ ಸ್ಮಶಾನ ಮೌನಾ ಯಾಕೆ ಗೊತ್ತಾಗುತ್ತಿಲ್ಲ. ಮಿಕ್ಕಿದ ಟೈಮಲ್ಲಿ ಭೇಟಿ ಪಡಾವೋ ಬಚಾವೋ ಅಂತ ಮಾತಾಡುತ್ತಾರೆ. ಪ್ರಧಾನಿಯವರು ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಸಂವಿಧಾನಕ್ಕೆ ತಲೆಬಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ. ಆದರೆ ಸಂವಿಧಾನ ಕಾನೂನು ಉಲ್ಲಂಘನೆ ಆದಾಗ ಮಾತಾಡಲ್ಲ ಎಂದು ಮೋದಿ ವಿರುದ್ಧವೂ ಕಿಡಿಕಾರಿದರು.

andolana

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

11 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

15 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

15 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

15 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

15 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

15 hours ago