ಕಲಬುರುಗಿ: ಸೂರಜ್ ರೇವಣ್ಣ ಪ್ರಕರಣ ಇದೆಲ್ಲವೂ ವಿಚಿತ್ರ, ವಿಕೃತವಾದ ಅಸಹ್ಯ ಪಡುವ ಪ್ರಕರಣಗಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಕಲಬುರುಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಜ್ವಲ್, ಸೂರಜ್, ಯಡಿಯುರಪ್ಪ ಯಾರದ್ರೂ ಆಗಿರಬಹುದು, ಏನು ನಡೆಯುತ್ತದೆ ಅಂತ ಗೊತ್ತಾಗುತ್ತಿಲ್ಲ. ಆಶ್ಚರ್ಯ ಏನು ಅಂದ್ರೆ, ಯಾರು ಈ ಪ್ರಕರಣದಲ್ಲಿದ್ದಾರೆ ಅವರಿಗೆ ಏನು ಅನ್ನಿಸುತ್ತಿಲ್ಲ. ಎಲ್ಲರೂ ಬೇರೆಯವರ ರಾಜೀನಾಮೆ ಕೇಳುತ್ತಿದ್ದಾರೆ. ಮೊದಲು ಅವರು ಆತ್ಮಾವಲೋಕನಾ ಮಾಡಿಕೊಳ್ಳುತ್ತಿಲ್ಲ. ಅವರದ್ದು ದೊಡ್ಡ ಮನೆ ಎಲ್ಲರೂ ಅಧಿಕಾರದಲ್ಲಿದ್ದಾರೆ. ಅವರ ಮೇಲೆ ಏನು ಜವಾಬ್ದಾರಿ ಇದೆ, ಸಮಾಜಕ್ಕೆ ಏನಂತ ಮೆಸೇಜ್ ಕಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಲ್ಲದೆ ಕುಮಾರಸ್ವಾಮಿ ರಾಜೀನಾಮೆ ಅವರ ವಿವೇಚನೆಗೆ ಬಿಟ್ಟ ವಿಚಾರ. ಲಕ್ಷಾಂತರ ಜನ ಕಾರ್ಯಕರ್ತರು ಇದ್ದಾರೆ. ಅವರನ್ನು ನಂಬಿಕೊಂಡು ಎನ್.ಡಿ.ಎ ನಡೆಯುತ್ತಿದೆ. ಕುಮಾರಸ್ವಾಮಿ, ದೇವೇಗೌಡರು, ರೇವಣ್ಣರ ಬಗ್ಗೆ ಮಾತನಾಡಲು ಹೋಗಲ್ಲ.
ಅವರ ಸ್ವಂತ ವಿವೇಚನೆ, ಅವರೇ ಆತ್ಮಾವಲೋಕನೆ ಮಾಡಿಕೊಂಡು ಏನು ಮಾಡುತ್ತಾರೆ ಅವರಿಗೆ ಬಿಟ್ಟಿದ್ದು ಎಂದರು. ಜೊತೆಗೆ ಈ ವಿಚಾರದಲ್ಲಿ ಬಿಜೆಪಿಯವರ ಸ್ಮಶಾನ ಮೌನಾ ಯಾಕೆ ಗೊತ್ತಾಗುತ್ತಿಲ್ಲ. ಮಿಕ್ಕಿದ ಟೈಮಲ್ಲಿ ಭೇಟಿ ಪಡಾವೋ ಬಚಾವೋ ಅಂತ ಮಾತಾಡುತ್ತಾರೆ. ಪ್ರಧಾನಿಯವರು ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಸಂವಿಧಾನಕ್ಕೆ ತಲೆಬಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ. ಆದರೆ ಸಂವಿಧಾನ ಕಾನೂನು ಉಲ್ಲಂಘನೆ ಆದಾಗ ಮಾತಾಡಲ್ಲ ಎಂದು ಮೋದಿ ವಿರುದ್ಧವೂ ಕಿಡಿಕಾರಿದರು.
ಬಜೆಟ್ ಪೂರ್ವ ಸಭೆಯಲ್ಲಿ ಪ್ರಸ್ತಾಪಗೊಂಡ ಹಸಿರು ಗೋಡೆ ಯೋಜನೆ ರಾಜ್ಯದ ಪರಿಸರ ರಕ್ಷಣೆಗೆ ಆಪದ್ಬಾಂಧವನಂತಿದೆ. ಉತ್ತರ ಕರ್ನಾಟಕದಲ್ಲಿ ಮರುಭೂಮೀಕರಣ ತಡೆಗಟ್ಟಲು…
ದೇಶಕ್ಕೇ ಮಾದರಿಯಾಗಿರುವ ಮೈಸೂರನ್ನು ನಿರ್ಮಿಸಿದ ಮೈಸೂರು ಸಂಸ್ಥಾನದ ಮಹಾರಾಜರುಗಳು ಅನುಸರಿಸಿದ ಯೋಜನೆಗಳ ಮಾದರಿಯಲ್ಲೇ, ಗ್ರೇಟರ್ ಮೈಸೂರನ್ನು ನಿರ್ಮಾಣ ಮಾಡಬೇಕು ಎಂದು…
ಪ್ರತಿನಿತ್ಯ ನಗರದ ವಿವಿಧ ವೃತ್ತಗಳ ಸಿಗ್ನಲ್ ಬಳಿ ಕಾಯುವ ವಾಹನ ಸವಾರರು ೧೦೦ ಸೆಕೆಂಡಿಗಿಂತಲೂ ಹೆಚ್ಚು ಕಾಲ ನಿಂತರೆ ನಮ್ಮ…
ಮೈಸೂರು ನಗರದ ಸುತ್ತಮುತ್ತ ಇರುವ ವಿವಿಧ ದೇವಾಲಯಗಳನ್ನು ನಿರ್ವಹಿಸುತ್ತಿರುವ ಟ್ರಸ್ಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಹುಂಡಿಯ ಹಣ ಹಾಗೂ ಭಕ್ತರು ನೀಡುವ…
ಕೆಟ್ಟು ೨-೩ ತಿಂಗಳಾದರೂ ದುರಸ್ತಿ ಭಾಗ್ಯವಿಲ್ಲ; ಬೇಗ ರಿಪೇರಿ ಮಾಡಿಸಲು ನಾಗರಿಕರ ಆಗ್ರಹ ಚಾಮರಾಜನಗರ: ನಗರದಲ್ಲಿ ನೈರ್ಮಲ್ಯ ಕಾಪಾಡಲು ನಗರಸಭೆಯು…
ಚಿರಂಜೀವಿ ಸಿ. ಹುಲ್ಲಹಳ್ಳಿ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಆಯೋಜಿಸಿರುವ ವಿಶೇಷ ರಿಯಾಯಿತಿ ಪುಸ್ತಕ ಮಾರಾಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…