ಬೆಂಗಳೂರು: ದರ್ಶನ್ ಯಾವತ್ತಿದ್ದರೂ ನನ್ನ ಮಗನೇ, ತಾಯಿ ಮತ್ತು ಮಗನ ಸಂಬಂಧದಲ್ಲಿ ವಿವಾದ ಸೃಷ್ಠಿಸಬೇಡಿ. ನಾನು ಹಂಚಿಕೆ ಮಾಡಿರುವ ಪೋಸ್ಟ್‌ಗೂ ದರ್ಶನ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ವಿವಾದಕ್ಕೆ ತೆರೆ ಎಳೆದಿದ್ದಾರೆ.
ನಟ ದರ್ಶನ್ ಅವರು ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮಗ ವಿನೀಶ್ ಹಾಗೂ ಸುಮಲತಾ ಅಂಬರೀಶ್ ಅವರನ್ನು ಅನ್ ಫಾಲೋ ಮಾಡಿದ ವಿಚಾರ ಹಾಟ್ ಟಾಪಿಕ್ ಆಗಿತ್ತು. ಈ ಬೆನ್ನಲ್ಲೇ ಸುಮಲತಾ ಅವರು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಸುಮಲತಾ ಅವರ ನಡುವಿನ ಸಂಬಂಧ ಸರಿಯಿಲ್ಲ ಎಂಬ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡಿತ್ತು.
ಈ ಕುರಿತು ಸುಮಲತಾ ಅವರು ಪ್ರತಿಕ್ರಿಯೆ ನೀಡಿ, ಇದೆಲ್ಲಾ ಅನಗತ್ಯವಾದ ವಿವಾದ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ನನಗೆ ಅಷ್ಟು ಸಮಯವೂ ಇಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು ಎಂದು ಹೇಳಿದ್ದಾರೆ.
ದರ್ಶನ್ ಅವರು ನಿಜವಾಗಿಯೂ ಯಾರನ್ನೂ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಆದರೆ ಈ ಬಗ್ಗೆ ನನ್ನನ್ನು ಮಾತ್ರ ಯಾಕೆ ಪಾಯಿಂಟ್ ಔಟ್ ಮಾಡುತ್ತಿದ್ದೀರಿ? ಅವರು ಫಾಲೋ ಮಾಡೋದು ಅಥವಾ ಅನ್ ಫಾಲೋ ಮಾಡೋದು ಅವರ ವೈಯಕ್ತಿಕ ಆಯ್ಕೆ. ಆದರೆ ಈ ವಿಚಾರ ನನಗೆ ಈಗ ಗಮನಕ್ಕೆ ಬಂದಿದೆ. ನಾನು ಜನರಲ್ ಆಗಿ ಪೋಸ್ಟ್ ಮಾಡಿದ್ದೇನೆ. ನಾನು ಬರೆದ ಸಾಲುಗಳಲ್ಲ, ಎಲ್ಲೋ ನೋಡಿದ ಪೋಸ್ಟ್ ಹಾಕಿದ್ದೇನಷ್ಟೇ. ಯಾರನ್ನು ಟಾರ್ಗೆಟ್ ಮಾಡಿ, ಯಾರನ್ನು ಉದ್ದೇಶಿಸಿ ಪೋಸ್ಟ್ ಹಾಕಿಲ್ಲ ಎಂದರು.
ಇನ್ನೂ ದರ್ಶನ್ ಬಗ್ಗೆ ನಾನು ನೆಗೆಟಿವ್ ಮಾತನಾಡುತ್ತೇನಾ? ದರ್ಶನ್ ಯಾವಾತ್ತಿದ್ದರೂ ನನ್ನ ಮಗ ಎಂದು ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ಅದು ಅವತ್ತಿಗೂ ಅಷ್ಟೇ, ಇವತ್ತಿಗೂ ಅಷ್ಟೇ. ನನ್ನ ಪ್ರೀತಿ ಮತ್ತು ಅಭಿಮಾನ ಯಾವತ್ತಿಗೂ ಒಂದೇ ತರಹ ಇರುತ್ತದೆ. ಆ ಪೋಸ್ಟ್‌ಗೂ, ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…