ಸಕ್ಕರೆ ನಿಯಂತ್ರಣ ಕಾಯಿದೆ ತಿದ್ದುಪಡಿ ಯತ್ನ ಕೈಬಿಡಬೇಕು: ಕುರುಬೂರು

ಮೈಸೂರು: ಹದಿನಾಲ್ಕು ದಿನಗಳಲ್ಲಿ ಕಬ್ಬು ಬೆಳೆಗಾರರ ಹಣವನ್ನು ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕೆಂಬ ಕೇಂದ್ರ ನೀತಿ ಆೋಂಗ ಸಕ್ಕರೆ ನಿಯಂತ್ರಣ ಕಾಯಿದೆ ತಿದ್ದುಪಡಿ ಮಾಡಿ 60 ದಿನಗಳ ಕಾಲ ಸಮಯ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ತನ್ನ ಕ್ರಮವನ್ನು ಪುನರ್ ಪರಿಶೀಲಿಸಬೇಕು. ತಪ್ಪಿದ್ದಲ್ಲಿ ದೇಶಾದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ನೀತಿ ಆಯೋಗ ಸಕ್ಕರೆ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದೆ. ಈ ಮೂಲಕ ರೈತರ ಮರಣ ಶಾಸನ ಬರೆಯಲು ಕೇಂದ್ರ ಸರ್ಕಾರ ಹೊರಟಿದೆ. ಪ್ರಸ್ತುತ ಕಾರ್ಖಾನೆಗೆ ಕಬ್ಬು ಸಾಗಾಣಿಕೆ ಮಾಡಿದ ಬಳಿಕ 14 ದಿನಗಳ ಒಳಗೆ ಒಂದೇ ಕಂತಿನಲ್ಲಿ ಹಣ ನೀಡಬೇಕು. ಇಲ್ಲದಿದ್ದರೆ ವಿಳಂಬವಾದಲ್ಲಿ ಶೇ.15ರಷ್ಟು ಬಡ್ಡಿ ಸೇರಿಸಿಕೊಡಬೇಕೆಂಬ ನಿಯಮವಿದೆ. ಹೀಗಿದ್ದರೂ ಕೆಲವು ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಕಬ್ಬಿನ ಹಣ ನೀಡದೇ ಸತಾಯಿಸಿ ವಿಳಂಬವಾಗಿ ನೀಡುವ ಮೂಲಕ ವಂಚಿಸುತ್ತಿದ್ದಾರೆ ಎಂದು ದೂರಿದರು.

ಹೀಗಿರುವಾಗ ಕೇಂದ್ರ ಸರ್ಕಾರ ಸಕ್ಕರೆ ನಿಯಂತ್ರಣ ಕಾ್ಂದೆು ೧೯೬೬ ತಿದ್ದುಪಡಿ ಮಾಡಿ ಕಬ್ಬಿನ ಹಣ ನೀಡಲು ೬೦ ದಿನಗಳ ತನಕ ಕಾಲಾವಕಾಶ ನೀಡುವುದು. ಮೂರು ಕಂತುಗಳಲ್ಲಿ ನೀಡಬುಹುದು ಎಂಬ ನೂತನ ತಿದ್ದುಪಡಿ ಜಾರಿಗೆ ತರಲು ಹೊರಟಿದೆ. ಯಾವುದೇ ಕಾರಣಕ್ಕೆ ಈ ಕಾ್ಂದೆುಗೆ ತಿದ್ದುಪಡಿ ತರಬಾರದು. ರಾಜ್ಯ ಸರ್ಕಾರ ಇದಕ್ಕೆ ತಡೆ ಹಾಕಬೇಕು. ರೈತದ್ರೋಹಿ ಕಾರ್ಯವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಈ ಬಗ್ಗೆ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ನಗರಾಧ್ಯಕ್ಷ ದೇವೇಂದ್ರಕುಮಾರ್, ರೈತ ಮುಖಂಡ ಶಿವರುದ್ರಪ್ಪ ಹಾಜರಿದ್ದರು.

× Chat with us