ಮೈಸೂರು: ಮೀಸಲಾತಿ ಕುರಿತಂತೆ ಅನೇಕ ಸಮಾಜಗಳು ಮನವಿ ಪತ್ರಗಳನ್ನು ಕೊಟ್ಟಿದ್ದಾರೆ. ಮೀಸಲಾತಿ ಜಾರಿ ಕುರಿತಂತೆ ಗಡುವು ನೀಡಿರುವುದು ನನಗೆ ಗೊತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಗಾಗಿ ಎಲ್ಲ ಸಮಾಜಗಳಿಂದ ಬೇಡಿಕೆ ಬರುತ್ತಿದೆ. ರಾಜ್ಯದ ಜನರ ಹಿತ ಚಿಂತನೆ ಮಾಡುವ ನನಗೆ ಇಂತಹ ಒತ್ತಡ ಬರುವುದು ಸಹಜ. ಅದನ್ನು ಎದುರಿಸಲಾಗುವುದು ಎಂದು ಹೇಳಿದರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಭತ್ತ ಖರೀದಿ ಕೇಂದ್ರ ತೆರೆಯಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅದೊಂದು ತಪ್ಪು ಕಲ್ಪನೆಯಾಗಿದೆ. ಗಂಗಾವತಿ, ಸಿಂಧನೂರು, ಮಂಡ್ಯ, ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಭತ್ತ ಬೆಳೆಯುವ ಕಾರಣ ರಾಜ್ಯಾದ್ಯಂತ ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.