ಬೆಂಗಳೂರು : ಸ್ಪೀಕರ್ ಯು.ಟಿ ಖಾದರ್ ಅವರಿಗೆ ಅವರ ತಪ್ಪಿನ ಅರಿವಾಗಿದೆ. ಅದಕ್ಕಾಗಿ ಬಂದು ರಾಜ್ಯಪಾಲರ ಭೇಟಿ ಮಾಡಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಿಗೆ ಎಲ್ಲಾ ವರದಿ ಕೊಟ್ಟಿದ್ದೇವೆ. ಸೂಕ್ತ ಡೈರೆಕ್ಷನ್ ಕೊಡೋದಾಗಿ ಹೇಳಿದ್ದಾರೆ ಎಂದರು.
ರಾಜ್ಯಪಾಲರಿಗೆ ಗೊತ್ತಾಗಿದೆ. ಮುಂದೆ ಏನು ಮಾಡಬೇಕು ಅಂತ ಅವರು ನಿರ್ಧಾರ ಮಾಡುತ್ತಾರೆ. ನಾವು ನಿನ್ನೆಯೇ ಹೇಳಿದ್ದೆವು. ರಾಜ್ಯಪಾಲರ ಭೇಟಿ ಮಾಡುತ್ತೇವೆ ಅಂತ. ನಾಳೆಯೂ ಸದನಕ್ಕೆ ಹೋಗಲ್ಲ. ಜೆಡಿಎಸ್ ಕೂಡ ಭಾಗಿಯಾಗುತ್ತಿದೆ ಎಂದು ಹೇಳಿದರು.