ಬೆಂಗಳೂರು: ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಇದೀಗ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.
ಈ ಹಿಂದೆ ಅಂದರೆ 2015ರಿಂದ 2020ರವರೆಗೆ ನಡೆದ ಪಿಎಸ್ಐ ನೇಮಕಾತಿಯಲ್ಲೂ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಿಐಡಿ ಪತ್ತೆಹಚ್ಚಿದೆ.
ವಿಶೇಷವೆಂದರೆ ಪ್ರಸ್ತುತ ಜೈಲು ಪಾಲಾಗಿರುವ ಪ್ರಕರಣದ ಪ್ರಮುಖ ಆರೋಪಿಗಳಾದ ಡಿವೈಎಸ್ಪಿ ಶಾಂತಕುಮಾರ್, ಮುಖ್ಯಪೇದೆ ಶ್ರೀಧರ್ ಹಾಗೂ ರಾಜಕೀಯ ಪಕ್ಷವೊಂದರ ಪ್ರಮುಖ ನಾಯಕ ರುದ್ರಗೌಡ ಪಾಟೀಲ್ ಇದರ ಸೂತ್ರದಾರರು ಎಂಬುದನ್ನು ಉಲ್ಲೇಖಿಸಲಾಗಿದೆ.
ಕಳೆದ ವರ್ಷ ನಡೆದ 545 ಪಿಎಸ್ಐ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಕಾರಣಕ್ಕೆ ಸಿಐಡಿ ತನಿಖಾ ತಂಡ ಅನೇಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿತ್ತು.
ಈ ಪ್ರಕರಣದ ಕಿಂಗ್ಪಿನ್ ಎಂದೇ ಹೇಳಲಾಗುತ್ತಿರುವ ಡಿವೈಎಸ್ಪಿ ಶಾಂತಕುಮಾರ್ ತನಿಖಾ ತಂಡದ ಮುಂದೆ ಕೆಲವು ಸೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.
2015-16ರಲ್ಲಿ 233, 2017-18ರಲ್ಲಿ 164 ಹಾಗೂ 2019-20ರಲ್ಲಿ 200 ಪಿಎಸ್ಐಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಹೀಗೆ ನೇಮಕವಾಗಿ ಪ್ರಸ್ತುತ ಕರ್ತವ್ಯದಲ್ಲಿರುವ ಭ್ರಷ್ಟಾಚಾರ ನಡಿಸಿ ನೇಮಕವಾಗಿದ್ದಾರೆ ಎಂಬ ಅಂಶವನ್ನು ಸಿಐಡಿ ಪತ್ತೆ ಮಾಡಿದೆ.
ರುದ್ರಗೌಡ, ಶಾಂತಕುಮಾರ್ ಮತ್ತು ಶ್ರೀಧರ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದ ಸಂದರ್ಭದಲ್ಲಿ ಬ್ಲೂಟೂತ್ ಮೂಲಕ ಅಕ್ರಮ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾರೆ.
ಇದೀಗ ಕರ್ತವ್ಯದಲ್ಲಿರುವ 9 ಮಂದಿ ಪಿಎಸ್ಐಗಳನ್ನು ಸಹ ಸಿಐಡಿ ಬಂಸಿದ್ದು, ಈ ಹಿಂದೆ ನಡೆದ ಮೂರು ಅವಯ ನೇಮಕಾತಿ ಪ್ರಕ್ರಿಯೆ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದೆ.