ಬಾಗಲಕೋಟೆ: ಹಾಲುಮತ ಸಮುದಾಯದ ಕಾರ್ಯಕ್ರಮದಲ್ಲಿ ಪೇಟ ತೊಡಿಸಲು ಹೋದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸುತ್ತಾರೆ. ಈದ್-ಮಿಲಾದ್ ಪ್ರಯುಕ್ತ ನಡೆದ ಶಾಂತಿ ಸಮಾವೇಶದಲ್ಲಿ ಪೇಟ ತೊಡೆಸಿದರೆ ಖುಷಿಯಾಗಿ ಹಾಕಿಕೊಳ್ಳುತ್ತಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯಾವುದೇ ಶುಭ ಸಮಾರಂಭ ನಡೆಯುವ ಮುನ್ನ ಹಾಲು ಮತದವರನ್ನು ಕರೆಸಿ, ಅವರಿಂದ ಕಂಬಳಿ ಹಾಸಿ, ನೀರಿನ ತಂಬಿಗೆ ಇರಿಸುವ ಮೂಲಕ ಶುಭಾರಂಭ ಮಾಡಲಾಗುತ್ತದೆ. ಅಂತಹ ಪವಿತ್ರ ಸಮುದಾಯದ ಪೇಟವನ್ನು ಅದೇ ಜಾತಿಯಲ್ಲಿ ಹುಟ್ಟಿದ ಸಿದ್ದರಾಮಯ್ಯ ತಿರಸ್ಕರಿಸುತ್ತಾರೆ. ಆದರೆ ಮತಗಳ ಓಲೈಕೆಗಾಗಿ ಅನ್ಯಧರ್ಮಿಯರ ಪೇಟ ಹಾಕಿಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಣೇಶೋತ್ಸವ ಆಚರಣೆಗೆ ನಾನಾ ರೀತಿಯ ಷರತ್ತುಗಳನ್ನು ಹಾಕಲಾಗುತ್ತಿದೆ, ಇದನ್ನು ಒಪ್ಪಲು ಸಾಧ್ಯವಿಲ್ಲ. 2028ಕ್ಕೆ ತಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ವೇಳೆ ಗಣೇಶೋತ್ಸವದ ಮೇಲೆ ಕಲ್ಲು ತೂರುವ ಯಾರಿಗೂ ಉಳಿಗಾಲ ಇರುವುದಿಲ್ಲ. ಗಣೇಶೋತ್ಸವದ ಹಿಂದೆ ಜೆಸಿಬಿ ಸಾಗುತ್ತಿರುತ್ತದೆ. ಕಲ್ಲು ಹೊಡೆದವರ ಮನೆಗೆ ತಕ್ಷಣವೇ ಜೆಸಿಬಿ ನುಗ್ಗಿಸಿ ಧ್ವಂಸಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಈ ಹಿಂದೆ ದೇಶದ ಜನ ಅಟಲ್‍ಬಿಹಾರಿ ವಾಜ್‍ಪೇಯಿ, ನರೆಂದ್ರ ಮೋದಿ ಅವರು ಪ್ರಧಾನಿಗಳಾಬೇಕೆಂದು ಬಯಸಿದ್ದರು. ಅದರಂತೆ ಅವರು ಪ್ರಧಾನಿಗಳಾದರು. ಬಸನಗೌಡ ಪಾಟೀಲ್ ಮುಖ್ಯಮಂತ್ರಿಯಾಗಬೇಕೆಂದು ರಾಜ್ಯದ ಜನ ಮನೆ ಮನೆಗಳಲ್ಲಿ ಮಾತನಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ರಾಜ್ಯದ ಹಿಂದೂಗಳ ಮತಗಳಿಂದ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…
ಹಾಸನ: ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತದೆ? ನಾನು ಅಲ್ಲಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು…
ಬೆಂಗಳೂರು: ವಿಧಾನಮಂಡಲ ವಿಶೇಷ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡದೇ ತೆರಳುತ್ತಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಸದಸ್ಯರು…
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟ ಘಟನೆ…
ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ…
ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್…