ಕೋಲಾರದಲ್ಲಿ ಅದ್ಧೂರಿ ಸ್ವಾಗತ, ದೇಗುಲ, ಚರ್ಚ್, ದರ್ಗಾಕ್ಕೆ ಭೇಟಿ
ಕೋಲಾರ/ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಕ್ತ ಕ್ಷೇತ್ರದ ಹುಡುಕಾಟದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ‘ಚಿನ್ನದ ಗಣಿ’ ಕೋಲಾರದ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಬೆಂಬಲಿಗರು, ಕಾರ್ಯಕರ್ತರು ಮತ್ತು ಹಿತೈಷಿಗಳ ಒತ್ತಾಯದ ಮೇರೆಗೆ ಈ ನಿರ್ಧಾರಕ್ಕೆ ಬಂದಿರುವ ಸಿದ್ದರಾಮಯ್ಯ ಕ್ಷೇತ್ರ ಪರಿಶೀಲನೆಗಾಗಿ ಭಾನುವಾರ ಬೆಳಿಗ್ಗೆ ಕೋಲಾರಕ್ಕೆ ಭೇಟಿ ನೀಡಿದ್ದರು.
ಮತ್ತೆ ನಾನು ಇಲ್ಲಿಗೆ ನಾಮಪತ್ರ ಸಲ್ಲಿಸಲು ಬರುತ್ತೇನೆ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿನ್ನದ ನಾಡು ಕೋಲಾರದಿಂದ ಸ್ಪರ್ಧಿಸುವ ಸುಳಿವನ್ನು ಕೊಟ್ಟಿದ್ದಾರೆ. ಈ ಮೂಲಕ ಕಳೆದ ಹಲವು ತಿಂಗಳಿನಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸಿದ್ದರಾಮಯ್ಯ ಅವರ ಸ್ಪರ್ಧೆ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಸ್ವತಃ ಅವರೇ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ವಿಶೇಷ ಹೈಟೆಕ್ ಬಸ್ನಲ್ಲಿ ಕೋಲಾರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಂಯು ಅವರಿಗೆ ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ಕಾರ್ಯಕರ್ತರು, ಮುಖಂಡರು ಮಾಲಾರ್ಪಣೆ ಮಾಡಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜೈಘೋಷ ಹಾಕಿದರು. ಮೊದಲು ಸಿದ್ದರಾಮಯ್ಯ ಕೋಲಾರ ನಗರದ ಶಕ್ತಿ ದೇವತೆ ಕೋಲಾರಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಕೋಲಾರ ಮೆಥೋಡಿಸ್ಟ್ ಚರ್ಚ್, ಕ್ಲಾಕ್ಟವರ್ ಬಳಿ ಕುತುಬ್ ಶಾ ದರ್ಗಾಕ್ಕೆ ಭೇಟಿ ನೀಡಿದ್ದರು. ನಂತರ ಕಾಲೇಜು ವೃತ್ತದಲ್ಲಿ ವಾಲ್ಮಿಕಿ ಮಹರ್ಷಿ ಪ್ರತಿಮೆ, ಇಟಿಸಿಎಂ ಸರ್ಕಲ್ನಲ್ಲಿರುವ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ವಾಡಿದರು. ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಪ್ರತಿಮೆ, ಕೈವಾರ ತಾತಯ್ಯ ವಿಗ್ರಹಕ್ಕೂ ಮಾಲಾರ್ಪಣೆ ಮಾಡಿದರು.
ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ಕೃಷ್ಣ ಬೈರೇಗೌಡ, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾುಂಣಸ್ವಾಮಿ, ಶರತ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ನಸೀರ್ ಅಹ್ಮದ್ ಜೊತೆಗಿದ್ದರು.
ಕೋಲಾರಕ್ಕೆ ಹೊರಡುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಎಲ್ಲರೂ ಒಟ್ಟಾಗಿ ಹೋಗಬೇಕು. ಆ ಕಾರಣಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದೇವೆ. ಕೋಲಾರದವರು ನನ್ನನ್ನು ಕರೆಯುತ್ತಿದ್ದಾರೆ. ಅಲ್ಲಿ ಶ್ರೀನಿವಾಸ್ ಗೌಡ ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ, ನೀವು ಸ್ಪರ್ಧಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲಿ ಪರಿಶೀಲನೆ ಮಾಡಲು ಕೋಲಾರಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು.
ವಿಶೇಷ ಹೈಟೆಕ್ ಬಸ್
ಹೈಟೆಕ್ ಬಸ್ನಲ್ಲಿ ವಿಶೇಷ ಲೈಟಿಂಗ್, ಲಿಫ್ಟ್, ಬಾತ್ರೂಮ್, ಮೀಟಿಂಗ್ ಮಾಡುವ ವ್ಯವಸ್ಥೆಯಿದ್ದು, ಚಾಲಕ ಹೊರತುಪಡಿಸಿ ಆರು ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಇದೆ. ಏರ್ ಕಂಡೀಷನ್, ಮೂರು ಎಲ್ಇಡಿ ಟಿವಿ, ಡೈನಿಂಗ್ ಟೇಬಲ್, ಹ್ಯಾಂಡ್ ವಾಶ್ಗೆ ಸಿಂಕ್, ವಿಶ್ರಾಂತಿಗೆ ಬೆಡ್, ಮೊಬೈಲ್ ಚಾರ್ಜಿಂಗ್, ಇಂಟರ್ನೆಟ್, ವೈಫೈ ಕನೆಕ್ಷನ್ ವ್ಯವಸ್ಥೆ ಇದೆ. ಬಸ್ ಮೇಲೆ ನಿಂತು ಭಾಷಣ ಮಾಡಲು ಲಿಫ್ಟ್ ವ್ಯವಸ್ಥೆಯಿದೆ. ಇದೇ ಬಸ್ನಲ್ಲಿ ರಾಜ್ಯ ಸುತ್ತಲು ಸಿದ್ದರಾಮಯ್ಯ ಯೋಜನೆ ಮಾಡಿಕೊಂಡಿದ್ದಾರೆ.