ಬೆಂಗಳೂರು : ದೇಶದ ಹಿರಿಯ ಶಾಸಕ, ಸೋಲಿಲ್ಲದ ಸರದಾರ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಶಾಮನೂರು ಶಿವಶಂಕರಪ್ಪ ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
10ನೇ ತರಗತಿ ಓದಿದ್ರು, ಶಿಕ್ಷಣ ಸಾಮ್ರಾಜ್ಯ ಕಟ್ಟಿದ್ರು….
ಅನೇಕರಿಗೆ ಸ್ಫೂರ್ತಿಯುತ ಜೀವನ ನಡೆಸಿದ್ದ ಶಿವಶಂಕರಪ್ಪ, 10ನೇ ತರಗತಿವರೆಗೆ ಓದಿದ್ದರೂ ಸಾವಿರಾರು ಡಾಕ್ಟರ್, ಇಂಜಿನಿಯರ್‌ಗಳನ್ನು ಬಾಪೂಜಿ ಸಂಸ್ಥೆಯ ಮೂಲಕ ಸೃಷ್ಟಿಸಿದ್ದರು. ಶಾಮನೂರು ಅವರ ನಿಧನದಿಂದ ಮಧ್ಯ ಕರ್ನಾಟಕದ ಪ್ರಬಲ ಕೊಂಡಿಯೊಂದು ಕಳಚಿದಂತಾಗಿದೆ. ದಾವಣಗೆರೆ ಜಿಲ್ಲೆ ಅಕ್ಷರಶಃ ಅನಾಥವಾಗಿದೆ. ಹತ್ತನೇ ತರಗತಿಯವರೆಗೆ ಓದಿದ್ದ ಹುಡುಗನೊಬ್ಬ, ದಕ್ಷಿಣ ಭಾರತವೇ ತಿರುಗಿ ನೋಡುವಂತಹ ಶಿಕ್ಷಣ ಮತ್ತು ಉದ್ಯಮ ಸಾಮ್ರಾಜ್ಯ ಕಟ್ಟಿ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ತಮ್ಮ 95 ನೇ ವಯಸ್ಸಿನಲ್ಲೂ ಸಾಬೀತುಪಡಿಸಿದ ಚೈತನ್ಯದ ಚಿಲುಮೆ ಶಾಮನೂರು ಶಿವಶಂಕರಪ್ಪ. ಅವರ ನಿಧನದಿಂದ ದಾವಣಗೆರೆ ಮಾತ್ರವಲ್ಲ, ಕರ್ನಾಟಕ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ.
ಕರ್ನಾಟಕದ ಮ್ಯಾಂಚೆಸ್ಟರ್ ಆರ್ಥಿಕತೆ ಕುಸಿಯದಂತೆ ತಡೆದಿದ್ದ ಶಾಮನೂರು…
ಶಾಮನೂರು ಶಿವಶಂಕರಪ್ಪ ಅವರ ಆರಂಭಿಕ ಜೀವನ ತುಂಬಾನೇ ಸಿಂಪಲ್ ಆಗಿತ್ತು. ದಾವಣಗೆರೆಯ ಪ್ರತಿಷ್ಠಿತ ಶಾಮನೂರು ಕುಟುಂಬದ ಶಾಮನೂರು ಕಲ್ಲಪ್ಪ ಮತ್ತು ಸಾವಿತ್ರಮ್ಮ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಇವರು, ಹುಟ್ಟೂರು ದಾವಣಗೆರೆಯಲ್ಲೇ ಶಾಲಾ ಶಿಕ್ಷಣ ಮುಗಿಸಿದರು. 10ನೇ ತರಗತಿಯವರೆಗೆ ಮಾತ್ರ ಓದಿದ್ದ ಇವರು, ಮುಂದೆ ಬ್ಯುಸಿನೆಸ್ ಕ್ಷೇತ್ರಕ್ಕೆ ಇಳಿದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದರು. ಒಂದು ಕಾಲದಲ್ಲಿ ದಾವಣಗೆರೆ ಕಾಟನ್ ಮಿಲ್‌ಗಳಿಗೆ ಫೇಮಸ್ ಆಗಿತ್ತು, ಇದನ್ನು ಕರ್ನಾಟಕದ ಮ್ಯಾಂಚೆಸ್ಟರ್ ಎನ್ನಲಾಗುತ್ತಿತ್ತು. ಆದರೆ, ಯಾವಾಗ ಹತ್ತಿ ಗಿರಣಿಗಳು ಮುಚ್ಚಲ್ಪಟ್ಟವೋ, ಆಗ ದಾವಣಗೆರೆಯ ಆರ್ಥಿಕತೆ ಕುಸಿಯದಂತೆ ತಡೆದವರು ಇದೇ ಶಾಮನೂರು.
ಇದನ್ನು ಓದಿ: ದಿಲ್ಲಿಯಲ್ಲಿ ಮೆಸ್ಸಿ : ಮೋದಿ ಭೇಟಿ ನಿರೀಕ್ಷೆ, ಹ್ಯಾಂಡ್‌ಶೇಕ್‌ಗೆ 1 ಕೋಟಿ ರೂ.!
ಸಾವಿರಾರು ಜನರಿಗೆ ಉದ್ಯೋಗ
ಭದ್ರಾ ಕಾಲುವೆ ಯೋಜನೆಯ ಲಾಭ ಪಡೆದು, ಕೃಷಿ ಆಧಾರಿತ ಉದ್ಯಮಗಳಿಗೆ ಕೈಹಾಕಿದರು. ಕುಕ್ಕುವಾಡದಲ್ಲಿ ನಷ್ಟದಲ್ಲಿದ್ದ ದಾವಣಗೆರೆ ಶುಗರ್ ಮಿಲ್ಸ್ ಅನ್ನು ಟೇಕ್ ಓವರ್ ಮಾಡಿ, ಅದನ್ನು ಲಾಭದಾಯಕವಾಗಿ ಬದಲಾಯಿಸಿದರು. ನಂತರ 1995ರಲ್ಲಿ ಶಾಮನೂರು ಶುಗರ್ಸ್ ಲಿಮಿಟೆಡ್ ಸ್ಥಾಪಿಸಿ, 1999ರಲ್ಲಿ ಉತ್ಪಾದನೆ ಆರಂಭಿಸಿದರು. ಕೇವಲ ಸಕ್ಕರೆ ಮಾತ್ರವಲ್ಲ, ಡಿಸ್ಟಿಲರಿ ಮತ್ತು ವಿದ್ಯುತ್ ಉತ್ಪಾದನೆಯನ್ನೂ ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿದರು.
ಶಾಮನೂರು ಅವರನ್ನು ಜನ ಪ್ರೀತಿಯಿಂದ ನೆನೆಯುವುದು ಅವರು ಕಟ್ಟಿದ ಶಿಕ್ಷಣ ಸಂಸ್ಥೆಗಳಿಗಾಗಿ. 1958ರಲ್ಲಿ ಧರ್ಮರತ್ನಾಕರ ರಾಜನಹಳ್ಳಿ ಮದ್ದೂರಾಯಪ್ಪ ಸ್ಥಾಪಿಸಿದ್ದ ಬಾಪೂಜಿ ಎಜುಕೇಷನಲ್ ಅಸೋಸಿಯೇಷನ್ ನೇತೃತ್ವವನ್ನು 1972ರಲ್ಲಿ ಶಾಮನೂರು ಶಿವಶಂಕರಪ್ಪ ವಹಿಸಿಕೊಂಡರು. ಅಂದು ಕೇವಲ 5 ಕಾಲೇಜುಗಳಿದ್ದ ಈ ಸಂಸ್ಥೆಯನ್ನು, ಇಂದು 50ಕ್ಕೂ ಹೆಚ್ಚು ಸಂಸ್ಥೆಗಳ ಹೆಮ್ಮರವಾಗಿ ಬೆಳೆಸಿದ್ದಾರೆ. ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಜೆಜೆಎಂ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಫಾರ್ಮಸಿ, ನರ್ಸಿಂಗ್ ಹೀಗೆ ಹತ್ತು ಹಲವು ವೃತ್ತಿಪರ ಕೋರ್ಸ್‌ಗಳನ್ನು ದಾವಣಗೆರೆಗೆ ತಂದರು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಎವಿಕೆ ಮಹಿಳಾ ಕಾಲೇಜನ್ನು ಬಲಪಡಿಸಿದರು, ಅಲ್ಲಿ ಈಗ ವರ್ಷಕ್ಕೆ 3,400ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪದವಿ ಪಡೆಯುತ್ತಿದ್ದಾರೆ. ಕುನಿಬೆಳಕೆರೆ, ಹರಿಹರ, ತೊಲಹುಣಸೆ ಮತ್ತು ಚನ್ನಗಿರಿಯಂತಹ ಗ್ರಾಮೀಣ ಭಾಗಗಳಲ್ಲೂ ಕಾಲೇಜುಗಳನ್ನು ತೆರೆದು ಬಡವರ ಮನೆಬಾಗಿಲಿಗೆ ಶಿಕ್ಷಣ ತಲುಪಿಸಿದ್ದು ಇದೇ ಶಾಮನೂರು ಶಿವಶಂಕರಪ್ಪ.
ಹೀಗೆ ಅನೇಕ ಶಿಕ್ಷಣ ಸಂಸ್ಥೆ, ಸಂಘ ಸಂಸ್ಥೆ ಸೇರಿದಂತೆ ಉದ್ಯಮಗಳನ್ನು ಕಟ್ಟಿ ಇವರು ಮಧ್ಯ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬೆಣ್ಣೆ ನಗರಿ ದಾವಣಗೆರೆಯನ್ನು ವಿದ್ಯಾನಗರಿಯನ್ನಾಗಿ ಮಾರ್ಪಡಿಸಿದ್ದರು.
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…