ರಾಜ್ಯ

ಎಸ್‌ಸಿಎಸ್‌ಪಿ ಅನುದಾನ :ತ್ವರಿತ ಗುರಿ ಸಾಧನೆಗೆ ಮಹದೇವಪ್ಪ ಸೂಚನೆ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶನಿವಾರ ವಿಧಾನಸೌಧದಲ್ಲಿ SCSP ನೋಡಲ್ ಅಧಿಕಾರಿಗಳ ಸಭೆ ನಡೆಸಿ, ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಗದಿತ ಅವಧಿಯ ಒಳಗಾಗಿ SCSP ಅನುದಾನವನ್ನು ಬಳಸಿಕೊಂಡು ಪರಿಶಿಷ್ಟರ ಅಭಿವೃದ್ಧಿಗೆ flag ship ಯೋಜನೆಗಳನ್ನು ರೂಪಿಸಬೇಕೆಂದು ಸೂಚಿಸಿದರು.

ಸಹಕಾರಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟರ ನೊಂದಾವಣೆ ಮಾಡಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ SCSP ಹಣವನ್ನು ಪಡೆಯುವ ಇಲಾಖೆಗಳು ಸುಮ್ಮನೇ ಹಣ ಖರ್ಚು ಮಾಡದೇ ಸೂಕ್ತ ರೀತಿಯಲ್ಲಿ ಯೋಜನೆಗಳನ್ನು ಮಾಡುವ ಮೂಲಕ ಪರಿಶಿಷ್ಟ ಸಮುದಾಯದ ಹಣ ಸದ್ಬಳಕೆಯತ್ತ ಗಮನ ಹರಿಸಬೇಕೆಂದು ತಿಳಿಸಿದರು.

ಅಧಿಕಾರಿಗಳು ಮೌಲ್ಯಮಾಪನದ ಕಡೆ ಹೆಚ್ಚು ಗಮನ ಹರಿಸಿ, ವಸತಿ ಇಲ್ಲದ ಜನರು ಎಷ್ಟು ಮಂದಿ ಇದ್ದಾರೆ, ಕೃಷಿಯಲ್ಲಿ ತೊಂದರೆ ಅನುಭವಿಸುತ್ತಿರುವ ಪರಿಶಿಷ್ಟ ಸಮುದಾಯದವರು ಎಷ್ಟು ಮಂದಿ ಇದ್ದಾರೆ ಮತ್ತು ಯಾರಿಗೆಲ್ಲಾ ನಾವು ಉದ್ಯಮಗಳನ್ನು ಮಾಡಲು, ಕೌಶಲ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂಬುದರ ಕುರಿತು ಅಧಿಕಾರಿ ಮಿತ್ರರು ನೇರವಾಗಿ ಜನರ ಬಳಿ ಹೋಗಿ ವಾಸ್ತವಗಳನ್ನು ಅರಿಬೇಕೆಂದು ತಿಳಿಸಿದರು.

ಇನ್ನು ಪರಿಶಿಷ್ಟ ಸಮುದಾಯದವರಿಗೆ ಮನೆ ಕಟ್ಟಲು 5 ಲಕ್ಷ ರೂಪಾಯಿಯ unit fund ಅನ್ನು ನಿಗದಿಗೊಳಿಸುವ ಕುರಿತು ಕ್ಯಾಬಿನೆಟ್ ನಲ್ಲಿ ಚರ್ಚಿಸುವುದಾಗಿ ಹೇಳಿದರು.

ಉನ್ನತ ಶಿಕ್ಷಣ ಮಾಡುತ್ತಿರುವ ಮಕ್ಕಳಿಗೆ ತೊಂದರೆ ಆಗದ ರೀತಿಯಲ್ಲಿ ಅವರಿಗೆ ಬರಬೇಕಾದ ವಿದ್ಯಾರ್ಥಿ ವೇತನವನ್ನು ನಿಗದಿತ ಸಮಯಕ್ಕೆ ಕಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಸಂದರ್ಭದಲ್ಲಿ ಕೆಲವೊಂದು ಗೊಂದಲ ಉಂಟಾಗಿದ್ದು, ಈ ಗೊಂದಲವನ್ನು ಶೀಘ್ರದಲ್ಲಿ ಪರಿಹಾರ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.

ಇನ್ನು ಸರ್ಕಾರದ ಎಲ್ಲಾ ಇಲಾಖೆಗಳೂ ಕೂಡಾ ಪರಿಶಿಷ್ಟರ ಹಣವನ್ನು ಸಾಮಾಜಿಕ ಖರ್ಚು ( Social Expenditure) ಎಂದು ಭಾವಿಸದೇ ಅದನ್ನು ಸಾಮಾಜಿಕ ಹೂಡಿಕೆ ( Social Investment ) ಆಗಿ ವಿನಿಯೋಗಿಸಿದರೆ ಮಾತ್ರ ಪರಿಶಿಷ್ಟರ ಏಳಿಗೆ ಸಾಧ್ಯ ಎಂಬುದಾಗಿ ತಿಳಿದರು.

ನಿಗದಿತ ಅವಧಿಯಲ್ಲಿ ಹಣ ಖರ್ಚು ಮಾಡದೇ SCSP/TSP ಕಾಯ್ದೆಯ ಆಶಯಗಳನ್ನು ಮರೆತು, ನಿಯಮಬಾಹಿರವಾಗಿ ವರ್ತಿಸಿದರೆ ಮತ್ತು ಅನುದಾವನ್ನು ಬಳಸುವಲ್ಲಿ ನಿರ್ಲಕ್ಷ್ಯ ತೋರಿದರೆ ಸಮಾಜ ಕಲ್ಯಾಣ ಇಲಾಖೆಯು ಸಿಂಗಲ್ ವಿಂಡೋ ಏಜೆನ್ಸಿ ಮೂಲಕ ಖರ್ಚಾಗದ ಹಣವನ್ನು ಹಿಂಪಡೆದು, ಪರಿಶಿಷ್ಟ ಸಮುದಾಯಗಳಿಗೆ ಪೂರಕ ಯೋಜನೆಗಳನ್ನು ನೀಡಲಿದೆ ಎಂಬ ಸಂಗತಿಯನ್ನು ಪ್ರಮುಖವಾಗಿ ತಿಳಿಸಿದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಪೋಕ್ಸೋ ಕೇಸ್‌| ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪಗೆ ಬಿಗ್‌ ರಿಲೀಫ್‌: ‌ಸೆಷನ್ಸ್‌ ಕೋರ್ಟ್‌ ಸಮನ್ಸ್‌ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್‌ ಕೋರ್ಟ್‌ ನೀಡಿರುವ ಸಮನ್ಸ್ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದ್ದು, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ…

28 mins ago

ಕ್ಯಾತಮಾರನಹಳ್ಳಿ ಮಸೀದಿ ಬಂದ್‌ ವಿಚಾರ: ಮೈಸೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ

ಮೈಸೂರು: ಕ್ಯಾತಮಾರನಹಳ್ಳಿ ಮಸೀದಿ ಬಂದ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಸೂಚನೆ ಮೇರೆಗೆ ಇಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ…

40 mins ago

ರಾಜ್ಯ ಸರ್ಕಾರದಿಂದ ವಿಮಾ ಮೊತ್ತ ಏರಿಕೆ ಮಾಡಲು ಚಿಂತನೆ: ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಪಿಎಲ್‌ ಕಾರ್ಡ್‌ ಹೊಂದಿದ ವಿಕಲಚೇತನರಿಗೆ ಮುಂರುವ ದಿನಗಳಲ್ಲಿ ವಿಮಾ ಮೊತ್ತನ್ನು ಐದು ಲಕ್ಷ ರೂ.ಗೆ ಏರಿಕೆ…

55 mins ago

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್:‌ ತಪ್ಪೊಪ್ಪಿಕೊಂಡ ನಟಿ ರನ್ಯಾ ರಾವ್‌

ಬೆಂಗಳೂರು: ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಪಡೆದುಕೊಳ್ಳುತ್ತಿದ್ದು, ಆರೋಪಿ ರನ್ಯಾ ರಾವ್‌ ಈಗ ತಪ್ಪೊಪ್ಪಿಕೊಂಡಿದ್ದಾರೆ ಎಂಬ…

1 hour ago

ಚಂಡೀಗಢ: ಅಪರಿಚಿತ ವ್ಯಕ್ತಿಗಳಿಂದ ಶಿವಸೇನಾ ನಾಯಕನ ಹತ್ಯೆ

ಚಂಡೀಗಢ: ಬೈಕ್‌ನಲ್ಲಿ ಬೆನ್ನಟ್ಟಿ ಶಿವಸೇನಾ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಮೊಗಾದಲ್ಲಿ ನಡೆದಿದೆ. ದಾಳಿಯಲ್ಲಿ ಓರ್ವ ಬಾಲಕ…

1 hour ago

ಅಪ್ಪು ಸಿನಿಮಾ ರಿ-ರಿಲೀಸ್‌: ಅಭಿಮಾನಿಗಳೊಂದಿಗೆ ತನ್ನದೇ ಚಿತ್ರ ವೀಕ್ಷಿಸಿದ ರಕ್ಷಿತಾ

ಬೆಂಗಳೂರು: ದಿವಂಗತ ನಟ ಪುನೀತ್‌ ರಾಜ್‌ ಕುಮಾರ್‌ ಅವರ 50 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಸಿನಿಮಾ ರಿ-ರಿಲೀಸ್‌…

1 hour ago