ಬೆಂಗಳೂರು : ಅಧಿವೇಶನದ ವೇಳೆ ಮಧ್ಯಾಹ್ನದ ಕಿರು ನಿದ್ರೆಗಾಗಿ ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನದ ನಡೆದ ಸಮಯದಲ್ಲಿ ಮಧ್ಯಾಹ್ನ ಊಟದ ನಂತರ ಶಾಸಕರ ಹಾಜರಾತಿ ಕಡಿಮೆ ಆಗುತ್ತಿದೆ. ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ಸ್ಪೀಕರ್ ಯು.ಟಿ ಖಾದರ್ ಹೊಸ ಐಡಿಯಾ ಮಾಡಿದ್ದಾರೆ.
ಲಾಂಜ್ ನಲ್ಲಿ ಕಿರು ನಿದ್ರೆಗಾಗಿ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದ್ದು, ನಾಲ್ಕನೇ ದಿನದ ಅಧಿವೇಶನದಲ್ಲಿ ಸೀಕರ್ ಈ ಬಗ್ಗೆ ಪ್ರಸ್ತಾಪಿಸಿದರು. ವಿಧಾನಸಭೆ ಸದಸ್ಯರಿಗಾಗಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಉತ್ತಮ ಊಟದ ವ್ಯವಸ್ಥೆ ಮಾಡಲಾಗಿದೆ. ಊಟವಾದ ಮೇಲೆ ಕೆಲ ಶಾಸಕರು ಕಿರು ನಿದ್ದೆ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಬರುವುದಿಲ್ಲ. ಇದನ್ನ ತಪ್ಪಿಸಲು ಶಾಸಕರ ಕಿರು ನಿದ್ರೆಗಾಗಿ ಪ್ರಾಯೋಗಿಕವಾಗಿ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಒಂದು ರಿಕ್ಲೈನರ್ ಕುರ್ಚಿ ಹಾಕಲಾಗಿದೆ. ಶಾಸಕರು ಅದರೆ ಮೇಲೆ ನಿದ್ರೆ ಮಾಡಿ ಸದನಕ್ಕೆ ಬರಬಹುದು. ಆ ರಿಕ್ಲೈನರ್ ಕುರ್ಚಿ ನಿಮಗೆ ಸರಿ ಎನಿಸಿದರೆ ಮುಂದಿನ ಅಧಿವೇಶನದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರುತ್ತೇನೆ ಎಂದು ಸದಸ್ಯರಿಗೆ ಹೇಳಿದರು.
ಇದೇ ವೇಳೆ ಶಾಸಕರು ಪಿಎಗಳನ್ನ ವಿಧಾನಸಭೆ ಲಾಂಜ್ ಗೆ ಕರೆದುಕೊಂಡು ಬರಬೇಡಿ. ಶಾಸಕರು ಕೂರಲು ಜಾಗ ಇರಲ್ಲ. ಈ ವಿಚಾರದಲ್ಲಿ ಶಾಸಕರು ಮಾರ್ಷಲ್ ಗಳ ಜೊತೆ ವಾಗ್ವಾದ ಮಾಡಬೇಡಿ ಎಂದು ಸೂಚನೆ ನೀಡಿದರು.
ಮಂಡ್ಯ : ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆಗಾಗಿ ಸೂಕ್ತ ಕ್ರಮಗಳನ್ನು…
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಬೆಂಗಳೂರು : ವಿದ್ಯಾರ್ಥಿಗಳಿಗೆ ಹಿಂದಿ ಪಾಸ್ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ರಾಜ್ಯದಲ್ಲಿ ದ್ವಿಭಾಷಾ ಸೂತ್ರ…
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಆತಂಕ ಸೃಷ್ಠಿಯಾಗಿರುವ ನಡುವೆ ಕೇಂದ್ರ…
ವಾಷಿಂಗ್ಟನ್ : ಇರಾನ್ ಕೋರಿಕೆಯ ಮೇರೆಗೆ ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು 10 ದಿನ ಮುಂದೂಡಿದ್ದೇವೆ ಎಂದು ಅಮೆರಿಕ ಅಧ್ಯಕ್ಷ…