ಏರ್‌ಪೋರ್ಟ್‌ಗಳಲ್ಲಿ ಕೊವಿಡ್ ಪರೀಕ್ಷೆಗಳಿಗೆ ದರ ನಿಗದಿ

ಬೆಂಗಳೂರು: ಏರ್‌ಪೋರ್ಟ್‌ಗಳಲ್ಲಿ ಕೊವಿಡ್ ಪರೀಕ್ಷೆಗಳಿಗೆ ದರ ನಿಗದಿ ಮಾಡಲಾಗಿದೆ. ICMR ಪ್ರಮಾಣಿತ ಕೊವಿಡ್ ಪರೀಕ್ಷೆಗಳಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ದರ ನಿಗದಿಗೊಳಿಸಿ ಆರೋಗ್ಯ ಇಲಾಖೆಯಿಂದ ಆದೇಶ ನೀಡಲಾಗಿದೆ. ಆರ್‌ಟಿಪಿಸಿಆರ್ ಟೆಸ್ಟ್‌ಗೆ 500 ರೂಪಾಯಿ ನಿಗದಿ ಮಾಡಲಾಗಿದ್ದು, ಅಬಾಟ್ ಐಡಿ ಟೆಸ್ಟ್‌ಗೆ 3,000 ರೂಪಾಯಿ ನಿಗದಿ ಮಾಡಲಾಗಿದೆ. ಥರ್ಮೋ ಫಿಶರ್ ಅಕ್ಯುಲಾ ಟೆಸ್ಟ್‌ಗೆ 1,500 ರೂಪಾಯಿ, ಟಾಟಾ ಎಂಡಿ3 ಜೆನ್ ಫಾಸ್ಟ್‌ ಟೆಸ್ಟ್‌ಗೆ 1,200 ರೂಪಾಯಿ ಹಾಗೂ ಸೆಫೀಡ್ಸ್‌ಜೀನ್ ಎಕ್ಸ್‌ಪರ್ಟ್ ಟೆಸ್ಟ್‌ಗೆ 2,750 ರೂಪಾಯಿ ನಿಗದಿಪಡಿಸಲಾಗಿದೆ.

ಕರ್ನಾಟಕ ಕೊರೊನಾ ಪ್ರಕರಣಗಳ ವಿವರ
ಕರ್ನಾಟಕ ರಾಜ್ಯದಲ್ಲಿ ಇಂದು (ಡಿ. 7) ಹೊಸದಾಗಿ 299 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,98,699 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,53,327 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,243 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 7,100 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

× Chat with us