ರಾಜ್ಯ

ಮಹಾತ್ಮ ಗಾಂಧೀಜಿ ವಸ್ತ್ರೋದ್ಯಮ ಯೋಜನೆ ಜಾರಿಗೊಳಿಸುವಂತೆ ಸಿಎಂಗೆ ಮನವಿ ಪತ್ರ: ರಂಗಕರ್ಮಿ ಪ್ರಸನ್ನ

ಬೆಂಗಳೂರು: ಮಹಾತ್ಮ ಗಾಂಧಿಜಿ ವಸ್ತ್ರೋದ್ಯಮ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಗಾಂಧಿವಾದಿ ಮತ್ತು ರಂಗಕರ್ಮಿ ಪ್ರಸನ್ನ ಎಂಬುವವರು ಮನವಿ ಪತ್ರ ಬರೆದಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿರುವ ಶಿವಮೊಗ್ಗ ಜಿಲ್ಲೆ ಹೆಗ್ಗೋಡು ಶ್ರಮಜೀವಿ ಆಶ್ರಮದ ಗಾಂಧಿವಾದಿ ಪ್ರಸನ್ನ ಅವರು ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಬಜೆಟ್‌ ಮಂಡನೆ ವೇಳೆ ಘೋಷಿಸಲಾಗಿತ್ತು. ಆದರೆ ಈ ಯೋಜನೆ ಚಾಲನೆಗೆ ಬಾರದೆ ನೆನೆಗುದಿಗೆ ಬಿದ್ದಿದೆ. ಅಲ್ಲದೇ ಈ ಯೋಜನೆಯು ಕರ್ನಾಟಕದಲ್ಲಿ ಗಾಂಧಿವಾದಿಗಳ ಕನಸಾಗಿದೆ ಹಾಗೂ ಗ್ರಾಮೀಣ ಬಡಜನತೆಯ ಬಡತನ ನಿವಾರಣೆಗಿರುವ ಒಂದು ಶಾಶ್ವತ ಪರಿಹಾರ ಕಾರ್ಯಕ್ರಮವಾಗಿದೆ. ವಸ್ತ್ರೋದ್ಯಮ ಎಂಬ ಸೀಮಿತ ಹೆಸರು ಈ ಯೋಜನೆಗೆ ಅಂಟಿಕೊಂಡಿದ್ದರೂ ಸಹ ಇದು ಎಲ್ಲ ಕುಶಲಕರ್ಮಿ ಕ್ಷೇತ್ರಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ, ಪುನರುಜ್ಜೀವನ ನೀಡಬಲ್ಲ, ಆದರೆ ಆದರೆ ಸರ್ಕಾರದ ಬೊಕ್ಕಸಕ್ಕೆ ವಿಪರೀತ ಹೊರೆಯೂ ಆಗಲಾರದ, ಒಂದು ಚುರುಕಾದ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

ಬಡಜನತೆಗೆ ರಿಸರ್ವೇಶನ್ ನೀಡುವುದು ಅಥವಾ ಗ್ಯಾರಂಟಿ ನೀಡುವುದು ಒಳ್ಳೆಯ ಕೆಲಸವೇ ಹೌದಾದರೂ ಸಮಸ್ಯೆಗೆ ಅದೊಂದು ತಾತ್ಕಾಲಿಕ ಪರಿಹಾರ ಮಾತ್ರ. ಇನ್ನು ರಾಜಕೀಯವಾಗಿ ನೋಡುವುದಾದರೆ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸರಕಾರದ ವಿಶೇಷ ಛಾಪು ಮೂಡಿಸಲಾರವು. ತಮ್ಮ ವಿರೋಧಿಗಳು ತಮಗಿಂತಲೂ ಮಿಗಿಲಾಗಿ ಗ್ಯಾರಂಟಿ ಒದಗಿಸಲು ತುದಿಗಾಲ ಮೇಲೆ ನಿಂತಿರುವುದು ಈಗ ಸ್ಪಷ್ಟವಿದೆ. ಈ ಎಲ್ಲ ಉತ್ತಮಾಂಶಗಳ ನಡುವೆಯೂ ಮಹಾತ್ಮಗಾಂಧಿ ವಸ್ತ್ರೋದ್ಯಮ ಯೋಜನೆಯು ನೆನೆಗುದಿಗೆ ಬಿದ್ದಿದೆ. ಕಳೆದೆರಡು ವರ್ಷಗಳಿಂದ ಜನತೆಯ ಪರವಾಗಿ ನಾವುಗಳು ಅದೆಷ್ಟೋ ಬಾರಿ ಅಲೆದಾಡಿದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆಯಿರುವಂತೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

ತಾವು ರಾಜಕೀಯ ಇಚ್ಛಾಶಕ್ತಿಯ ಒತ್ತಾಸೆ ನೀಡಿ ಯೋಜನೆಯು ಶೀಘ್ರವಾಗಿ ಹಾಗೂ ಸಮರ್ಪಕವಾಗಿ ಕಾರ್ಯಗತವಾಗುವಂತೆ ಮಾಡುತ್ತೀರಿ ಎಂಬ ನಂಬಿಕೆ ಇದ್ದು, ರಾಜ್ಯದ ಎಲ್ಲಾ ಗ್ರಾಮೀಣ ಕಾರ್ಯಕರ್ತರು ಹಾಗೂ ಗಾಂಧಿವಾದಿಗಳ ಪರವಾಗಿ, ನಾನು ಪತ್ರವನ್ನು ತಮಗೆ ಬರೆಯುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆಯ ವಿವರ

ಕೊಡಗು: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 37 ಮಿ.ಮೀ. ಮಳೆಯಾಗಿದೆ. ಕಳೆದ…

15 hours ago

ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ

ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಂದು 2,858.45…

15 hours ago

ತಮಿಳುನಾಡಿಗೆ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಹರಿಸಿ – CWRC ಶಿಫಾರಸು ಎತ್ತಿಹಿಡಿದ CWMA

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ, ಅಂದರೆ CWRCಯ ಶಿಫಾರಸನ್ನು ಕಾವೇರಿ ನೀರು…

15 hours ago

ಓದುಗರ ಪತ್ರ: ಭವಿಷ್ಯದ ಬೆಳಕಾಗಲಿ!

ಭವಿಷ್ಯದ ಬೆಳಕಾಗಲಿ! ಎಲ್ಲರ ಒಳಗೊಳ್ಳುವ ಎಲ್ಲರ ಹಿತ ಅಭ್ಯುದಯದ ಹೊಸ ದೇಶ ಕಟ್ಟುವುದಾಗಿ ಗುಡುಗುತಿದೆ ಜೆನ್ ಝೀ ಪಡೆ! ಈ…

18 hours ago

ಓದುಗರ ಪತ್ರ: ಓದುಗರ ಪತ್ರ ಚಾಮುಂಡಿಬೆಟ್ಟ: ನೋ-ಫ್ಲೈಝೋನ್ ಆಗಲಿ

ತಿರುಪತಿಯ ಮಾದರಿಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೂ ನೋ -ಫ್ಲೈಝೋನ್ ಘೋಷಣೆಗೆ ಗಂಭೀರವಾಗಿ ಪರಿಶೀಲಿಸುವಂತೆ ಸಂಸದ ಯದುವೀರ್ ಅವರು ಕೇಂದ್ರ ನಾಗರಿಕ ವಿಮಾನಯಾನ…

18 hours ago

ಓದುಗರ ಪತ್ರ: ಪ್ರೇಕ್ಷಕರ ಆಸಕ್ತಿಗೆ ತಕ್ಕಂತೆ ಕಾರ್ಯಕ್ರಮ ಆಯೋಜಿಸಿ

ಈ ವರ್ಷದ ನಾಡ ಹಬ್ಬ ದಸರಾದಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗೋಷ್ಠಿಯ ಉಪಸಮಿತಿಯವರು ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಪ್ರಧಾನ ಕವಿಗೋಷ್ಠಿ, ಯುವ…

18 hours ago