ಬೆಂಗಳೂರು : ವಿಜಯನಗರ ಆಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA), ಎಫ್.ಎಂ.ಎಸ್.ಸಿ.ಐ ಹಾಗೂ ಇಂಡಿಯಾ ಮೋಟಾರ್ ಸ್ಪೋರ್ಟ್ಸ್‌ನ ವತಿಯಿಂದ ಇಂದಿನಿಂದ(ಜೂ.21) ರ‍್ಯಾಲಿ ಆಫ್ ಬೆಂಗಳೂರು ನಡೆಯುತ್ತಿದ್ದು, ನಾಳೆ ಫೈನಲ್ ಹಣಾಹಣೆ ಇರಲಿದೆ.
ಜೂನ್ 21 ಮತ್ತು 22ರಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಶಕ್ತಿ ಹಿಲ್ ರೆಸಾರ್ಟ್‌ನಲ್ಲಿ ನಡೆಯುತ್ತಿದೆ . ಜೆಕೆ ಟೈರ್ ಮೋಟಾರ್ ಸ್ಪೋರ್ಟ್ ಮತ್ತು ವಂಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್‌ನ ಬೆಂಬಲದಿಂದ ಅನೇಕ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ.
ರ‍್ಯಾಲಿ ಆಫ್ ಬೆಂಗಳೂರು ಸ್ಪರ್ಧಿಗಳ ಪಟ್ಟಿಯನ್ನು INTSDRC-1 (ಒವರ್‌ಆಲ್), INTSDRC-2, ಪ್ರೊ ಸ್ಟಾಕ್, ವುಮೆನ್ಸ್, ಕಪಲ್ (INTSDRC-C), ಮತ್ತು ಕಾರ್ಪೊರೇಟ್ (INTSDRC-Corp) ವರ್ಗಗಳು ಸೇರಿವೆ.
ರ‍್ಯಾಲಿಯಲ್ಲಿ ಭಾಗವಹಿಸುತ್ತಿರುವ ಚಾಲಕರು ಮತ್ತು ಸಿಬ್ಬಂದಿಗೆ ಸಮಗ್ರ ವೈದ್ಯಕೀಯ ನೆರವನ್ನು ಒದಗಿಸಲು ನ್ಯಾನೋ ಆಸ್ಪತ್ರೆಗಳು ಮತ್ತು ಟ್ರೂಸ್ಕ್ಯಾನ್ ಡಯಾಗ್ನೋಸ್ಟಿಕ್ಸ್ ಆರೋಗ್ಯ ಸಂಸ್ಥೆಗಳು ನೆರವಾಗುತ್ತಿವೆ. ಜೊತೆಗೆ ಕೆಫೆ ಪೆಟ್ರಿಕ್ಕೋರ್, ಆಕ್ಟೇನ್‌ಪಿಟ್ಸ್ ಮತ್ತು ಗಿಗಾಬೈಟ್ ಇಂಕ್ (ಟೆಕ್ ಪಾರ್ಟ್‌ನರ್) ಮುಂತಾದ ಪ್ರಮುಖ ಸಹಯೋಗಿಗಳೂ ರ‍್ಯಾಲಿಗೆ ಬೆಂಬಲ ನೀಡುತ್ತಿವೆ.
ದೇಶದ ಅತಿಪುರಾತನ ಮೋಟಾರ್ ಸ್ಪೋರ್ಟ್ಸ್ ಸಂಸ್ಥೆಗಳಲ್ಲಿ ಒಂದಾದ ವಿಜಯನಗರ ಆಟೋಮೋಟಿವ್ ಸ್ಪೋರ್ಟ್ಸ್ ಅಸೋಸಿಯೇಷನ್ (VASA) ಈ ವರ್ಷ ತನ್ನ 30ನೇ ವರ್ಷದ ಸಂಭ್ರಮದಲ್ಲಿದ್ದು, ಈ ರ‍್ಯಾಲಿ ಸಂಸ್ಥೆಯ ಪರಂಪರೆಯ ಹೆಮ್ಮೆಗೂ ಸಾಕ್ಷಿಯಾಗಲಿದೆ.
ಚಾಮರಾಜನಗರ : ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇನ್ನೂ ಒಂದು ಚಿರತೆ ಸೆರೆಯಾಗಿದೆ. ಗ್ರಾಮದ ಮಲ್ಲಣ್ಣ…
ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…
ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…
ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…
ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…
ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…