ರಾಜ್ಯ

ರಾಜ್ಯಸಭಾ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ !

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕರ್ನಾಟಕರಿಂದ ನಾರಾಯಣ ಕೃಷ್ಣಸಾ ಭಾಂಡಗೆ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.

ನಾರಾಯಣ ಕೃಷ್ಣಸಾ ಭಾಂಡಗೆ ಬಾಗಲಕೋಟೆಯ ಆರ್.ಎಸ್.ಎಸ್. ಕಾರ್ಯಕರ್ತರಾಗಿದ್ದಾರೆ. ರಾಮ ಮಂದಿರ ಹೋರಾಟ, ಕಾಶ್ಮೀರ ತಿರಂಗ ಹೋರಾಟ ಸೇರಿ ಬಿಜೆಪಿಯ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. 8-10 ಬಾರಿ ಜೈಲಿಗೆ ಹೋಗಿ ಬಂದಿದ್ದ ಅವರು 2010 ರಿಂದ 16 ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು.

ಜೊತೆಗೆ ಬಿಹಾರದಲ್ಲಿ ಡಾ.ಧರ್ಮಶೀಲಾ ಗುಪ್ತಾ ಹಾಗೂ ಡಾ.ಭೀಮಸಿಂಗ್​ ಸೇರಿ ಇಬ್ಬರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದ್ದು, ಇನ್ನುಳಿದಂತೆ ಛತ್ತೀಸ್​ಗಢದಲ್ಲಿ ರಾಜಾ ದೇವೇಂದ್ರಪ್ರತಾಪ್​ ಸಿಂಗ್​, ಹರಿಯಾಣದಲ್ಲಿ ಸುಭಾಷ್​ ಬಾರ್ಲಾಗೆ ಹಾಗೂ ಉತ್ತರ ಪ್ರದೇಶದಲ್ಲಿ ಆರ್​.ಪಿ.ಎನ್​ ಸಿಂಗ್​ಗೆ ಟಿಕೆಟ್ ನೀಡಲಾಗಿದೆ.

1.ಧರ್ಮಶೀಲಾ ಗುಪ್ತಾ: ಬಿಹಾರ
2.ಡಾ.ಭೀಮ್ ಸಿಂಗ್: ಬಿಹಾರ
3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್
4.ಸುಭಾಷ್ ಬರಲಾ: ಹರಿಯಾಣ
5.ನಾರಾಯಾಣ ಭಾಂಡಗೆ: ಕರ್ನಾಟಕ
6.ಆರ್​​ಪಿಎನ್​​​ ಸಿಂಗ್: ಉತ್ತರ ಪ್ರದೇಶ
7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ
8.ಚೌಧರಿ ತೇಜ್​ವೀರ್ ಸಿಂಗ್: ಉತ್ತರ ಪ್ರದೇಶ
9.ಸಾಧನಾ ಸಿಂಗ್: ಉತ್ತರ ಪ್ರದೇಶ
10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ
11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ
12.ನವೀನ್ ಜೈನ್: ಉತ್ತರ ಪ್ರದೇಶ
13.ಮಹೇಂದ್ರ ಭಟ್: ಉತ್ತರಾಖಂಡ್
14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

5 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

5 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

5 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

5 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

6 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

6 hours ago