ರಾಜ್ಯ

ಪಾಕ್‌ ಪರ ಘೋಷಣೆ ಕೂಗಿದವರನ್ನು ಜೈಲಿಗೆ ಹಾಕಲು ಅಂಜಿಕೆ ಏಕೆ?; ಪ್ರತಾಪ್‌ ಸಿಂಹ

ಮೈಸೂರು: ವಿಧಾನ ಸೌಧದ ಮುಂಭಾಗ ಪಾಕಿಸ್ತಾನ್‌ ಜಿಂದಾಬಾಜ್‌ ಎಂದು ಘೊಷಣೆ ಕೂಗಿದವರನ್ನು ಜೈಲಿಗೆ ಹಾಕಲು ಹಿಂಜರಿಕೆ ಯಾಕೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಒಸಾಮ ಬಿನ್‌ ಲಾಡೆನ್‌, ಮುಲ್ಲಾ, ಉಮರ್‌ ಆಳ್ವಿಕೆಯಿದ್ದು, ಬಾಂಬ್‌ ಹಾಕುವವರಿಗೆ ಅವರು ರಕ್ಷಣೆ ಕೊಟುತ್ತಾರೆ ಹೊರತು, ಬಂಧಿಸುವ ಕೆಲಸ ಮಾಡುವುದಿಲ್ಲ. ಕರ್ನಾಟಕದಲ್ಲಿ ನಡೆಯುತ್ತಿರುವುದು ಇದೇ.

ಈ ಸಂಬಂಧದಲ್ಲಿ ರಾಜ್ಯ ಬಿಜೆಪಿ ಸೋಷಿಯಲ್‌ ಮೀಡಿಯಾದಲ್ಲಿ ಎಫ್‌ಎಸ್‌ಎಲ್‌ ಮಾಹಿತಿ ನೀಡಿದ್ದರು, ಅದನ್ನು ತಿರುಚಲಾಗಿದೆ ಎಂದು ಹೇಳಿಕೆ ನೀಡಿ ಲಜ್ಜೆಗಟ್ಟು ಡಿಫೆಂಡ್‌ ಮಾಡುವು ಅವಶ್ಯಕತೆ ಏನಿದೆ. ಯಾರು ಪಾಕಿಸ್ತಾನ್‌ ಜಿಂದಾಬಾಜ್‌ ಎಂದು ಹೇಳುತ್ತಾನೋ ಅವನನ್ನು ಒಳಗೆ ಹಾಕಲು ಸರ್ಕಾರಕ್ಕೆ ಅಂಜಿಕೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರು ಮುಸ್ಲಿಮರ ಕೈ ಕಡೆದರೂ ಅವರು ಸಿದ್ದರಾಮಯ್ಯ ಅವರಿಗೆ ಮತ ಹಾಕುತ್ತಾರೆ. ಆದರೂ ಮತ್ತೇಕೆ ಸಿಎಂ ಅವರ ರಕ್ಷಣೆ ಮಾಡಲು ಹೊರಟಿದ್ದಾರೆ? ಇದೇ ರೀತಿ ಮುಂದುವರಿದರೆ ಕರ್ನಾಟಕ ಯಾವ ಸ್ಥಿತಿಗೆ ಬರುತ್ತೆ ಯೋಚನೆ ಮಾಡಿ. ಕರ್ನಾಟಕ ಸಭ್ಯ ರಾಜಕಾರಣ ಮತ್ತು ಕಾನೂನು ವ್ಯವಸ್ಥೆಗೆ ಹೆಸರುವಾಗಿಯಾಗಿದೆ. ಇಲ್ಲಿ ಅವರಿಗೆ ಸಹಾಯ ಮಾಡುವುದು ಸರಿಯಲ್ಲ.

ಸಿಎಂ ಅವರು ಪಾಕ್‌ ಪರ ಘೋಷಣೆ ಕೂಗಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಹೇಳಿರುವುದು ಸ್ವಾಗತಾರ್ಹ. ಅದು ಕೇವಲ ಮಾತಿನಲ್ಲಿರದೇ ಕೃತಿಯಲ್ಲು ಅದನ್ನು ತೋರಿ ಎಂದು ಸಂಸದ ಪ್ರತಾಪ್‌ ಸಿಂಹ ಮನವಿ ಮಾಡಿದರು.

andolana

Recent Posts

ಇಂದಿನಿಂದ ಟೋಲ್‌ಗಳಲ್ಲಿ ಕ್ಯಾಷ್‌ ಇಲ್ಲ ; ಡಿಜಿಟಲ್‌ ಪಾವತಿ ಮಾತ್ರ.

ಬೆಂಗಳೂರು : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ಧಾರದಂತೆ, ಇಂದಿನಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು…

26 mins ago

ಓದುಗರ ಪತ್ರ: ಫಲಪ್ರದವಾಗಲಿ ಮಾತುಕತೆ!

ಕೊನೆಗೂ ಘೋಷಣೆಯಾಗಿದೆ ತಾತ್ಕಾಲಿಕ ಕದನ ವಿರಾಮ ತೆರೆಬಿದ್ದಿದೆ ಕೊಲ್ಲಿ ಯುದ್ಧಕೆ ನಿಟ್ಟುಸಿರು ಬಿಟ್ಟಿದೆ ಜನಜಗ! ಸಿಟ್ಟು ಸೆಡವು ಬದಿಗಿರಿಸಿ ನಡೆಯಲಿ…

3 hours ago

ಓದುಗರ ಪತ್ರ: ಆಟೋ ಗ್ಯಾಸ್ ಅಭಾವ ಕೃತಕವೋ? ನೈಜವೋ?

ಕೊಲ್ಲಿ ಯುದ್ಧದ ನೆಪದಲ್ಲಿ ಬಂಡವಾಳಶಾಹಿಗಳು  ಕೆಜಿಗೆ ರೂ. ೮೯ ಇದ್ದ  ಆಟೋ ಗ್ಯಾಸ್ ಗ್ಯಾಸ್ ಅನ್ನು ರೂ. ೧೭೦ಕ್ಕೆ ಮಾರುತ್ತಾ…

3 hours ago

ಓದುಗರ ಪತ್ರ: ಯುದ್ಧ ಪೂರ್ಣ ನಿಲ್ಲಲಿ, ಶಾಂತಿ ನೆಲೆಸಲಿ

ಇರಾನ್ ಮೇಲೆ ಇಸ್ರೇಲ್-ಅಮೆರಿಕ ಕಳೆದ ೪೦ ದಿನಗಳಿಂದ ನಡೆಸುತ್ತಿದ್ದ ಯುದ್ಧಕ್ಕೆ   ಅಲ್ಪ ವಿರಾಮವನ್ನು ಘೋಷಿಸಲಾಗಿದೆ.  ಈ  ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಯ…

3 hours ago

ಓದುಗರ ಪತ್ರ: ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್  ಸೌಲಭ್ಯ ಕಲ್ಪಿಸಿ

ಮೈಸೂರು ಜಿಲ್ಲೆಯ ಸರಗೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದ್ದರೂ ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೧೦೮ ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೇ ತುರ್ತು ಸಂದರ್ಭದಲ್ಲಿ…

3 hours ago

‘ದುರಂಧರ್’- ನಾಯಕ ಗುಪ್ತಚರನಲ್ಲ, ಯೋಧನೂ ಅಲ್ಲ!’

ಹಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಚಾಡ್ ಸ್ಟಹೆಲ್ಸ್ಕಿ ನಿರ್ದೇಶನದ john wick" ಸರಣಿ ಚಿತ್ರಗಳಲ್ಲಿನ ಅಂತ್ಯವಿಲ್ಲದ ಶವಗಳ ಎಣಿಕೆ, ಕ್ವೆಂಟಿನ್ ಟರೆಂಟಿನೋ…

4 hours ago