ರಾಜ್ಯ

ಪಿಎಸ್‌ಐ ಮರುಪರೀಕ್ಷೆ ಮತ್ತೆ ಲೀಕ್?‌ ದಾಖಲಾಯಿತು ದೂರು

ಈ ಹಿಂದೆ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದ್ದ ಕಾರಣದಿಂದ ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಇದೇ ತಿಂಗಳ 23ರಂದು ಪಿಎಸ್‌ಐ ಮರುಪರೀಕ್ಷೆ ನಡೆಯಬೇಕಿತ್ತು. ಆದರೆ ಇದೀಗ ಈ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಹ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಪರೀಕ್ಷೆ ಬರೆಯಬೇಕಿರುವ ಹಲವು ಅಭ್ಯರ್ಥಿಗಳಿಂದ ಕೇಳಿಬಂದಿದೆ.

ಇಂಟೆಲಿಜೆನ್ಸ್‌ ವಿಭಾಗದ ಸಬ್‌ ಇನ್ಸ್‌ಪೆಕ್ಟರ್‌ ಲಿಂಗಯ್ಯ ಮಾತನಾಡಿರುವ ಆಡಿಯೊದಲ್ಲಿ ಈ ಪ್ರಶ್ನೆ ಪತ್ರಿಕೆಗಳ ಕುರಿತು ಹೇಳಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್‌ ಒಂದು ವೈರಲ್‌ ಆಗಿದೆ. ಈ ಆಡಿಯೊದಲ್ಲಿ ಇಂದು ( ಜನವರಿ 20 ) ಹಾಗೂ ನಾಳೆ ( ಜನವರಿ 21 ) ನಡೆಯಲಿರುವ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗಳ ಸಿಇಟಿ ಪರೀಕ್ಷೆಯ ಪತ್ರಿಕೆಗಳ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಇದೇ ಆಡಿಯೊದಲ್ಲಿ ಜನವರಿ 23ರಂದು ನಡೆಯಲಿರುವ ಪಿಎಸ್‌ಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಗ್ಗೆ ಸಹ ಮಾತನಾಡಿದ್ದಾರೆ ಎಂದೂ ಸಹ ಆರೋಪ ಕೇಳಿಬಂದಿದೆ.

ದೂರು ನೀಡಿದ ಅಭ್ಯರ್ಥಿಗಳಲ್ಲಿ ಒಬ್ಬರಾದ ಶಾಂತಕುಮಾರ್‌ ಎಂಬುವವರು ಮಾಧ್ಯಮಗಳ ಜತೆ ಮಾತನಾಡಿ 1.60 ಲಕ್ಷ ಅಭ್ಯರ್ಥಿಗಳು ಕಮರ್ಷಿಯಲ್ ಟ್ಯಾಕ್ಸ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಆ ಪ್ರಶ್ನೆ ಪತ್ರಿಕೆಯನ್ನೂ ನಾವೇ ಕೊಡುತ್ತೇವೆ. ಉದ್ಯೋಗವನ್ನೂ ಕೊಡಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜೊತಗೆ, ಪಿಎಸ್‌ಐ ಪರೀಕ್ಷೆಗೂ ಸಹಾಯ ಮಾಡುತ್ತೇವೆ. ಅದರ ಪ್ರಶ್ನೆಪತ್ರಿಕೆಯನ್ನೂ ಕೊಡುತ್ತೇವೆ. ಪಿಎಸ್ ಎಕ್ಸಾಂ ಅನ್ನೂ ಬರೆಸುತ್ತೇವೆ. ಕೆಪಿಎಸ್‌ಸಿ ಬೋರ್ಡ್ ಕಚೇರಿ ಮುಂದೆ ಪರೀಕ್ಷಾ ಅಭ್ಯರ್ಥಿಗಳಿಗೆ ಪ್ರವೇಶವಿಲ್ಲ. ಆದರೆ, ಅವರ ಪೋಷಕರನ್ನು ಒಳಗೆ ಕರೆಸಿಕೊಂಡು ಮಾತನಾಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಆಡಿಯೋನಲ್ಲಿ ಪಿಇಸ್ಐ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪವನ್, ರಜತ್ ಎಂಬುವರ ಹೆಸರುಗಳು ಕೇಳಿಬಂದಿದೆ. ಪ್ರಶ್ನೆಪತ್ರಿಕೆ ನೀಡಲು, ಪರೀಕ್ಷೆಗೆ ಸಹಾಯ ಮಾಡಲು ಹಾಗೂ ಪೋಸ್ಟಿಂಗ್ ಕುರಿತ ಸಹಾಯ ಮಾಡಲು 80 ಲಕ್ಷ ರೂ ಬೇಡಿಕೆಯನ್ನು ಅಭ್ಯರ್ಥಿಗಳ ಮುಂದಿಟ್ಟಿದ್ದಾರೆ. ಕೆಲವು ರಾಜಕಾರಣಿಗಳ ಹೆಸರನ್ನೂ ಆಡಿಯೋ ಕ್ಲಿಪ್ ನಲ್ಲಿ ಬಳಕೆ ಮಾಡಲಾಗಿದೆ. ಹಾಗಾಗಿ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದೂ ಸಹ ಶಾಂತಕುಮಾರ್‌ ಹೇಳಿದ್ದಾರೆ.

andolana

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

4 hours ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

6 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

6 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

10 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

15 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

15 hours ago