ಧಾರವಾಡ : ಜಿಲ್ಲೆಯ ನವಲಗುಂದ ತಾಲ್ಲೂಕ್ಕಿನ ಅಮರಗೋಳದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಳೆಯಿಂದಾಗಿ ಶಾಲೆಯಿಂದ ಹೊರಬರಲಾಗದೆ ಮಳೆಯಲ್ಲಿ ಸಿಲುಕ್ಕಿದ್ದರು ಈ ವೇಳೆ ಬೆಳವಟಗಿ ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿಗಳು ಸೇರದಂತೆ ಗ್ರಾಮಸ್ಥರ ನೆರೆವಿನಿಂದ ಸತತ 5 ಗಂಟೆಗಳ ಕಾರ್ಯಾಚರಣೆ ನಡೆಸಿ ಟ್ರ್ಯಾಕ್ಟರ್ ಮೂಲಕ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.
ನೆನ್ನೆ ಮಧ್ಯಾಹ್ನ ಆರಂಭವಾದ ಮಳೆಯು ಸಂಜೆಯಾದರು ನಿಲ್ಲದೆ ಶಾಲೆಯ ಸುತ್ತಮುತ್ತಲೆಲ್ಲ ನೀರಿನಿಂದ ಆವರಿಸಿತು ಹೀಗಾಗಿ ವಿದ್ಯಾರ್ಥಿಗಳು ಶಾಲೆಯ ಕೊಠಡಿಗಳಲ್ಲೇ ಸಿಲುಕಿಕೊಂಡಿದ್ದಾರೆ. ಈ ಮಾಹಿತಿಯನ್ನು ಅರಿತ ವಿದ್ಯಾರ್ಥಿಗಳ ಪೋಷಕರು ಗ್ರಾಮ ಪಂಚಾಯಿತಿಯ ನರೆವಿನಿಂದ ಗ್ರಾಮಸ್ಥರೊಡಗೂಡಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.