ರಾಜ್ಯ

ವರಿಷ್ಠರೇ ಎಲ್ಲಾ ಮಾಡೋದಾದ್ರೆ ನೀವೇನು ಬೆರಳು ಚೀಪ್ತಿದ್ರಾ : ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು : ಬಿಜೆಪಿಯವರುಮಾತಿಗೆ ಮುಂಚೆ ವರಿ‌ಷ್ಠರು ಅಂತಾರೆ. ಎಲ್ಲವನ್ನೂ ವರಿಷ್ಠರೇ ಮಾಡೋದಾದ್ರೆ ನೀವೇನು ಬೆರಳು ಚೀಪ್ತಾ ಇದ್ರಾ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮಾತಿಗೆ ಮುಂಚೆ ವರಿಷ್ಠರು ಅಂತಾರೆ. ಹಾಗಿದ್ರೆ ರಾಜ್ಯ ನಾಯಕರಿಗೆ ಬೆಲೆ ಇಲ್ವಾ? ಎಲ್ಲವನ್ನೂ ವರಿಷ್ಠರೇ ಮಾಡ್ತಾರೆ ಅಂದ್ರೆ ನೀವೇನು ಬೆರಳು ಚೀಪ್ತಾ ಇದ್ರಾ? ಬಿಜೆಪಿಯವರೇ 50 ಜನ ಬರೋದಕ್ಕೆ ರೆಡಿ ಇದ್ದಾರೆ ನೆನಪಿಡಿ, ನಿಮ್ಮ ಎಲ್ಲ ಸಮಸ್ಯೆ ಸರಿಮಾಡಿಕೊಂಡು ಬೆಳಗಾವಿ ಅಧಿವೇಶನಕ್ಕೆ ಬರಲಿ ಎಂದು ಕುಟುಕಿದ್ದಾರೆ.

ಸಿಎಂ ಡಿಕೆಶಿ ಆಗುವುದಾದರೇ ಹೆಚ್‌ಡಿಕೆ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಚ್‌ಡಿಕೆ ಮತ್ತು ಜೆಡಿಎಸ್ ಬೆಂಬಲ ಕೇಳಿದ್ದು ಯಾರು? ಸಿಎಂ ಯಾರಾಗ್ತಾರೆ ಅನ್ನೋದನ್ನ ಕಟ್ಟಿಕೊಂಡು ಅವರಿಗೇನಾಗಬೇಕು? ಬಹುತೇಕ ಈಗಾಗಲೇ ಜೆಡಿಎಸ್-ಬಿಜೆಪಿ ವಿಲೀನ ಆಗಿದೆ. ನಮಗಂತೂ ಅವರ ಅವಶ್ಯಕತೆಯಿಲ್ಲ. ಅವರ ಅಸ್ತಿತ್ವಕ್ಕೆ ಏನು ಬೇಕಾದ್ರೂ ಹೇಳಿಕೊಳ್ಳಲಿ. ಜೆಡಿಎಸ್ ಬಳಿ ಯಾವುದೇ ವಿಷಯಗಳಿಲ್ಲ. ಮೊದಲು ಭ್ರಷ್ಟಾಚಾರ ವಿಚಾರ ಮಾತನಾಡಿದ್ರು. ಆಮೇಲೆ ಪೆನ್‌ಡ್ರೈವ್‌ ಅವರ ಜೇಬಿನಲ್ಲೇ ಉಳಿಯಿತು. ಮೊದಲು ಅವರ ಮನೆಯ ಗೊಂದಲಗಳನ್ನು ನಿವಾರಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಪದೇ ಪದೇ ಕಲಬುರಗಿ ಜನ ಯಾಕೆ ಆರಿಸಿ ಕಳಿಸಿದ್ದಾರೆ? ಕೆಲಸ ಮಾಡದೇ ಜನ ಸುಮ್ಮನೆ ಆಯ್ಕೆ ಮಾಡಿ ಕಳುಹಿಸ್ತಾರಾ? ಜೆಡಿಎಸ್‌ನವರಿಗೆ ಕೇಳಿ ಜನರು ನಮಗೆ ವೋಟು ಹಾಕ್ತಾರಾ? ನಾನು ಏನೇನು ಮಾಡಿದ್ದೀನಿ ಅಂತ ಬೇಕಿದ್ದರೆ ಕುಮಾರಸ್ವಾಮಿನಾ ಕರೆದುಕೊಂಡು ಹೋಗಿ ತೋರಿಸ್ತೀನಿ. ಲೋಕಸಭೆ ಚುನಾವಣೆ ಮುಗಿದ ಬಳಿಕ ಬಿಜೆಪಿ-ಜೆಡಿಎಸ್‌ನಲ್ಲಿ ಯಾರೂ ಉಳಿಯಲ್ಲ. ಇನ್ನೂ 5 ತಿಂಗಳು ಟೈಂ ಕೊಡ್ತೀನಿ 50 ಜನ ಶಾಸಕರನ್ನ ಕರೆದುಕೊಂಡು ಹೋಗಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.

lokesh

Recent Posts

ಎಐ ಭಾರತದ ಭವಿಷ್ಯ ; ನಿಯಂತ್ರಣ ನಮ್ಮ ಕೈಯಲ್ಲಿರಲಿ : ಪ್ರಧಾನಿ ಮೋದಿ

ಹೊಸದಿಲ್ಲಿ : ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್…

28 mins ago

ಬಂಡೀಪುರ ಸಫಾರಿ ಪರ-ವಿರೋಧ ಜಟಾಪಟಿ ; ರೈತರು, ಸಫಾರಿ ಬೆಂಬಲಿತರು ಪೊಲೀಸರ ವಶಕ್ಕೆ.

ಗುಂಡ್ಲುಪೇಟೆ : ಭಾರತದ ಪ್ರಮುಖ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ಪುನಾರಂಭಗೊಳಿಸುವ ಆದೇಶದ ವಿರುದ್ಧ…

43 mins ago

ಬೂದನೂರು ಉತ್ಸವ : ನಾಳೆಯಿಂದ ಹೆಲಿ ಟೂರಿಸಂ

ಮಂಡ್ಯ : ಬೂದನೂರು ಉತ್ಸವದ ಪ್ರಯುಕ್ತ ಚಿಕ್ಕಮಂಡ್ಯದಲ್ಲಿ ಫೆ.20ರ ಶುಕ್ರವಾರದಿಂದ ಮೂರು ದಿನಗಳ ಕಾಲ ಹೆಲಿ ಟೂರಿಸಂ (ಹೆಲಿಕಾಪ್ಟರ್ ಜಾಯ್…

53 mins ago

ಲಾರಿ-ಬೈಕ್ ಮುಖಾಮುಖಿ ಢಿಕ್ಕಿ ; ಇಬ್ಬರು ಸ್ಥಳದಲ್ಲೇ ಸಾವು

ಹುಣಸೂರು : ಲಾರಿ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲ್ಲೂಕಿನ…

1 hour ago

ಸರ್ಕಾರಕ್ಕೆ ಡೆಡ್‌ಲೈನ್‌ ನೀಡಿ ಮುಷ್ಕರ ವಾಪಾಸ್‌ ಪಡೆದ ಸಾರಿಗೆ ನೌಕರರು

ಬೆಂಗಳೂರು : ಮುಂದಿನ ಮಾರ್ಚ್ ತಿಂಗಳ 2ರೊಳಗೆ ಸರ್ಕಾರ ತಮ್ಮ ಬೇಡಿಕೆ ಈಡೇರಿಸಬೇಕೆಂದು ಗಡುವು ನೀಡಿರುವ ಸಾರಿಗೆ ನೌಕರರು, ಶುಕ್ರವಾರದಿಂದ…

1 hour ago

ಮಾ.23ರಿಂದ ಏ.5 ರವರೆಗೆ ವೈರಮುಡಿ ಬ್ರಹ್ಮೋತ್ಸವ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಮಂಡ್ಯ : ಮಾರ್ಚ್ 23ರಿಂದ ಏಪ್ರಿಲ್ 5ರವರೆಗೆ ವೈರಮುಡಿ ಬ್ರಹ್ಮೋತ್ಸವ 2026 ನಡೆಯಲಿದೆ. ಮಾರ್ಚ್ 28 ಶನಿವಾರದಂದು ವೈರಮುಡಿ ಕಿರೀಟಧಾರಣೆ…

2 hours ago