ರಾಜ್ಯ

ಇಂದಿರಾಗಾಂಧಿ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ : ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಡಾಲ್ಛ್ ಹಿಟ್ಲರ್‌ಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಗಿಳಿದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ಬಿಜೆಪಿ ಕಚೇರಿಯ ಬಳಿ ಪ್ರತಿಭಟನೆಗಿಳಿದಿದ್ದರು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ, ಭಾರತದಲ್ಲಿನ ರಾಷ್ಟ್ರೀಯ ತುರ್ತು ಪರಿಸ್ಥಿತಿ ಕುರಿತು ಗ್ರಾಫಿಕ್ಸ್ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಈ ವಿಡಿಯೋ ಸಂಬಂಧ ಬಿಜೆಪಿ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್ .ಮನೋಹರ್ ಅವರು ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಇಂದಿರಾ ಗಾಂಧಿ ಬಗ್ಗೆ ಹಾಕಿರುವ ಅವಹೇಳನಕಾರಿ ಪೋಸ್ಟ್ ಸಮಾಜದಲ್ಲಿ ಗಲಭೆಯುಂಟಾಗಿ, ಧರ್ಮಗಳ ಮಧ್ಯೆ ವೈರತ್ವವನ್ನುಂಟು ಮಾಡುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಅವರು, ಕೆಲವು ದೂರುಗಳ ಆಧಾರದ ಮೇಲೆ ಅಥವಾ ಜನರಲ್ಲಿ ದ್ವೇಷವನ್ನು ಉಂಟುಮಾಡುವ ಕೆಲವು ವಿಷಯಗಳಿದ್ದರೆ ಸ್ವಯಂ ಪ್ರೇರಿತವಾಗಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆ. ಅನೇಕ ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ನಾಯಕನನ್ನು ಯಾರಾದರೂ ದೂಷಿಸಲು ಪ್ರಯತ್ನಿಸಿದರೆ ಮತ್ತು ಆ ಸಮಯದಲ್ಲಿನ ಸಕಾರಾತ್ಮಕ ಬೆಳವಣಿಗೆಯನ್ನು ಕೆಲವರು ಆಕ್ಷೇಪಿಸದರೆ, ಜನರು ವಿರೋಽಸುತ್ತಾರೆಂದು ಹೇಳಿದ್ದಾರೆ.

ವಿವಾದ ಏನು?
ಬುಧವಾರ ಕರ್ನಾಟಕ ರಾಜ್ಯ ಬಿಜೆಪಿ ಪಕ್ಷದ ಅಽಕೃತ ಎಕ್ಸ್ ಖಾತೆಯಲ್ಲಿ ಸಂಜೆ ೩.೫೪ಗಂಟೆಗೆ ಇಂದಿರಾ ಇಂಡಿಯಾ ಇಂದಿರಾ ಎಂದು ಬರೆದು, ೦.೩೮ ನಿಮಿಷಗಳ ವಿಡಿಯೋವನ್ನು ಅಪ್‌ಲೋಡ್ ಮಾಡಿ, ಸದರಿ ವಿಡಿಯೋದಲ್ಲಿ ಭಾರತದ ತುರ್ತು ಪರಿಸ್ಥಿತಿ ಸಮಯಕ್ಕೆ ಸಂಬಂಽಸಿದ್ದಾಗಿದ್ದು, ಸದರಿ ವಿಡಿಯೋದಲ್ಲಿ ಇಂದಿರಾಗಾಂಽಯವರ ಫೋಟೋವನ್ನು ಹಿಟ್ಲರ್ ರೀತಿ ಗ್ರಾಫಿಕ್ಸ್ ಮಾಡಲಾಗಿದೆ.

ಆಂದೋಲನ ಡೆಸ್ಕ್

Recent Posts

ಕೊಲಂಬಿಯಾದಲ್ಲಿ 125 ಸೈನಿಕರಿದ್ದ ಮಿಲಿಟರಿ ವಿಮಾನ ಪತನ: 66 ಮಂದಿ ದುರ್ಮರಣ

ಬೊಗೋಟಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಟೇಕಾಫ್‌ ಕೆಲ ಸಮಯದಲ್ಲಿ ಪತನಗೊಂಡು 66 ಜನರು ಸಾವನ್ನಪ್ಪಿರುವ ಘಟನೆ ಕೊಲಂಬಿಯಾದಲ್ಲಿ…

37 mins ago

ಓದುಗರ ಪತ್ರ: ಕಲ್ಲಾಗದಿರು ಮಳೆಯೇ!

ಬಾ ಮಳೆಯೇ ಬಾ.. ನೊಂದು - ಬೆಂದು ಬಸವಳಿದ ರೈತನ ಬಾಳಿಗೆ ಹೂವಾಗಿ ಬಾ ಕಾದ ಭೂತಾಯ ಒಡಲಿಂಗೆ ಹನಿ…

1 hour ago

ಓದುಗರ ಪತ್ರ: ಬೆರಳಚ್ಚು ಕಡ್ಡಾಯಗೊಳ್ಳಲಿ

ಪಡಿತರ ಮತ್ತು ಪಿಂಚಣಿಗೆ ಬಯೋಮೆಟ್ರಿಕ್ ಕಡ್ಡಾಯವಿರುವಾಗ ಚುನಾವಣೆಯಲ್ಲಿ ಇದಕ್ಕೇಕೆ ವಿನಾಯಿತಿ? ಭಾರತದಂತಹ ವಿಶಾಲ ದೇಶದಲ್ಲಿ. ಶೇ.೨೦ ರಿಂದ ೨೨ ರಷ್ಟು…

1 hour ago

ಓದುಗರ ಪತ್ರ: ಒಂದನೇ ತರಗತಿ ಪ್ರವೇಶಕ್ಕೆ ಹಿಂದಿನ ಪದ್ಧತಿಯೇ ಸೂಕ್ತ

ಒಂದನೇ ತರಗತಿ ಪ್ರವೇಶಕ್ಕೆ ಜೂನ್ ೧ಕ್ಕೆ ೬ ವರ್ಷ ಕಡ್ಡಾಯಗೊಳಿಸಿರುವ ನಿಯಮವು, ಕೇವಲ ಕೆಲವೇ ದಿನಗಳ ಅಂತರವಿರುವ ಮಕ್ಕಳ ಒಂದು…

1 hour ago

ಓದುಗರ ಪತ್ರ: ಎಚ್.ಡಿ.ದೇವೇಗೌಡ ಪತ್ರ ಬರೆದಿರುವುದು ಶ್ಲಾಘನೀಯ

ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರ ನಡವಳಿಕೆಯನ್ನು ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇತ್ತೀಚೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ…

1 hour ago

ಓದುಗರ ಪತ್ರ: ರಜೆ ಸಮಯ ಮಕ್ಕಳಿಗೆ ಉಪಯುಕ್ತವಾಗಲಿ

ಬೇಸಿಗೆಯ ರಜೆ ಎಂದರೆ ಮಕ್ಕಳಿಗೆ ಸಂತೋಷದ ಕಾಲ. ಶಾಲೆಯ ಒತ್ತಡದಿಂದ ದೂರವಾಗಿ ಆಟ-ಪಾಠಗಳಲ್ಲಿ ತೊಡಗಿಸಿಕೊಳ್ಳುವ ಸಮಯ. ಆದರೆ ಇತ್ತೀಚಿನ ದಿನಗಳಲ್ಲಿ…

1 hour ago