ಡಾ.ಎಚ್ಸಿಎಂ, ರಾಜಶೇಖರಮೂರ್ತಿ ಅವರನ್ನೇ ಹೆಚ್ಚು ಗೆಲ್ಲಿಸಿದ ತಿ.ನರಸೀಪುರದಲ್ಲೀಗ ಯುವ ಹವಾ
ಎಂ.ನಾರಾಯಣ
ತಿ.ನರಸೀಪುರ: ದಕ್ಷಿಣ ಭಾರತದ ಕುಂಭಮೇಳ ಕ್ಷೇತ್ರ, ದಕ್ಷಿಣ ಕಾಶಿ, ಪ್ರಾಂಗ, ತ್ರಿವೇಣಿ ಸಂಗಮ ಎಂದೆಲ್ಲಾ ಹೆಸರು ಪಡೆದಿರುವ ತಿರುಮಕೂಡಲು ನರಸೀಪುರ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿಯೂ ಮಹತ್ವ ಪಡೆದಿದೆ.
ಇಲ್ಲಿ ಡಾ. ಎಚ್.ಸಿ.ಮಹದೇವಪ್ಪ ೫ ಬಾರಿ ಆ್ಂಕೆುಗೊಂಡರೆ, ಸತತವಾಗಿ ನಾಲ್ಕು ಬಾರಿ ಎಂ. ರಾಜಶೇಖರಮೂರ್ತಿ ಅವರು ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.
೧೯೫೨ ರಲ್ಲಿ ನಂಜನಗೂಡು ತಾಲ್ಲೂಕಿನ ಬಿಲಿಗೆರೆ ಹಾಗೂ ಛತ್ರ ಹೋಬಳಿ, ನಂತರ ೧೯೭೮ರಲ್ಲಿ ತಿ. ನರಸೀಪುರ ತಾಲ್ಲೂಕಿನ ಕಸಬ ಹಾಗೂ ಮೂಗೂರು ಹೋಬಳಿ ಮತ್ತು ಪಟ್ಟಣ ಒಳಗೊಂಡಂತೆ ತಿ. ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.
ತಿ. ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ೨೦೦೮ ರಲ್ಲಿ ಬನ್ನೂರು ವಿಧಾನಸಭಾ ಕ್ಷೇತ್ರವನ್ನು ವಿಲೀನಗೊಳಿಸಿ, ಬಿಳಿಗೆರೆ, ಕಸಬಾ ಹಾಗೂ ಛತ್ರ ಹೋಬಳಿಯನ್ನು ನೂತನ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿ, ತಿ. ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಬನ್ನೂರು, ತಲಕಾಡು, ಸೋಸಲೆ, ಮೂಗೂರು ಹೋಬಳಿ ಹಾಗೂ ಪಟ್ಟಣವನ್ನು ಸೇರಿಸಿ ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರವನ್ನು ಪುನರ್ ವಿಂಗಡಿಸಲಾಯಿತು.
ಬಿಜೆಪಿ, ಜನತಾ ಪಕ್ಷ, ಜನತಾದಳ, ಜಾ.ದಳ ಪಕ್ಷಗಳ ಅಭ್ಯರ್ಥಿಗಳನ್ನು ಆ್ಂಕೆು ವಾಡಿರುವ ಮತದಾರರು ಈ ಕ್ಷೇತ್ರದಲ್ಲಿ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ೮ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ೩ ಬಾರಿ ಜನತಾ ಪಕ್ಷದ ಅಭ್ಯರ್ಥಿಗಳನ್ನು, ೧ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಹಾಗೂ ೨ ಬಾರಿ ಜಾ.ದಳ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಪ್ರಸ್ತುತ ಜಾ.ದಳದ ಎಂ.ಅಶ್ವಿನ್ ಕುಮಾರ್ ಶಾಸಕರಾಗಿದ್ದಾರೆ. ಎಸ್. ಶ್ರೀನಿವಾಸ ಅಯ್ಯಂಗಾರ್, ಪಿ.ವೆಂಕಟರಮಣ, ವಿ. ವಾಸುದೇವ, ಹೆಜ್ಜಿಗೆ ಎಂ. ಶ್ರೀನಿವಾಸ್ಂಯು, ಡಾ. ಎನ್.ಎಲ್.ಭಾರತೀಶಂಕರ್ ಅವರು ಶಾಸಕರಾಗಿ ಆಯ್ಕೆಗೊಂಡಿದ್ದಾರೆ.
ತಿ. ನರಸೀಪುರ ಪ್ರವಾಸೋದ್ಯಮ ಕ್ಷೇತ್ರವಾಗಿ ಘೋಷಣೆಯಾಗಬೇಕು ಎಂಬ ಒತ್ತಾಯ ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಇತ್ತೀಚೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಮಹಿಳಾ ಪದವಿ ಕಾಲೇಜು, ನೂತನ ಕಪಿಲಾ ಹಾಗೂ ಕಾವೇರಿ ಸೇತುವೆಗಳ ನಿರ್ಮಾಣ, ಸಾರ್ವಜನಿಕ ಆಸ್ಪತ್ರೆ, ಮಿನಿ ವಿಧಾನಸೌಧ, ಕೆಎಸ್ಐಸಿ, ವಿದ್ಯೋದಯ ಶಿಕ್ಷಣ ಸಂಸ್ಥೆಗಳು ಈ ಕ್ಷೇತ್ರದ ಪ್ರಮುಖ ಭಾಗವಾಗಿವೆ. ಪಟ್ಟಣದ ಪ್ರಮುಖ ರಸ್ತೆಗಳು, ಒಳಚರಂಡಿ, ಖಾಸಗಿ ಬಸ್ ನಿಲ್ದಾಣ, ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಕಾವೇರಿ, ಕಪಿಲ ನದಿಗಳ ಹಳೆಯ ಸೇತುವೆಗಳ ದುರಸ್ತಿ ಕಾರ್ಯ ನಡೆಯಬೇಕಾಗಿದೆ.
ನಾಳೆ: ಮಡಿಕೇರಿ ವಿಧಾನಸಭಾ ಕ್ಷೇತ್ರ
ಅಪ್ಪನೋ- ಮಗನೋ: ಕ್ಷೇತ್ರದಲ್ಲಿ ಹೆಚ್ಚಿದ ಕುತೂಹಲ
ಕ್ಷೇತ್ರದಲ್ಲಿ ೨೦೨೩ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸ್ಪರ್ಧೆ ಜೋರಾಗಿದೆ. ಜಾ.ದಳದಲ್ಲಿ ಹಾಲಿ ಶಾಸಕ ಎಂ.ಅಶ್ವಿನ್ ಕುಮಾರ್ ಅವರಿಗೆ ಟಿಕೆಟ್ ಭರವಸೆ ಸಿಕ್ಕಿದೆ. ಕಾಂಗ್ರೆಸ್ ಹಾಗೂ ಬಿಜೆಪಿುಂಲ್ಲಿ ಟಿಕೆಟ್ಗಾಗಿ ಬೇಡಿಕೆ ಹೆಚ್ಚಾಗಿದೆ. ಬಿಜೆಪಿುಂಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಮಾಜಿ ಶಾಸಕ ಡಾ. ಎನ್.ಎಲ್.ಭಾರತಿ ಶಂಕರ್, ಗ್ರಾವಾಂತರ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ವಕೀಲ ಎಂ.ದಾಸಯ್ಯ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಎಂ.ರೇವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಕಳೆದ ಬಾರಿ ಸ್ಪರ್ಧಿಸಿದ್ದ ಎಸ್. ಶಂಕರ್, ಪುರಸಭಾ ಸದಸ್ಯ ಅರ್ಜುನ್ ರಮೇಶ್, ಮುಖಂಡರಾದ ಎಸ್.ಅರವಿಂದ್, ಸಾವ್ರಾಟ್ ಸುಂದರೇಶನ್ ಸ್ಪರ್ಧಿಸಲು ಟಿಕೆಟ್ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಲೋಕಸಭಾ ಸದಸ್ಯ ವಿ.ಶ್ರೀನಿವಾಸ್ ಪ್ರಸಾದ್ರವರ ಪುತ್ರಿ ಪ್ರತಿಮಾ ಕೂಡ ಸ್ಪರ್ಧಿಸಬಹುದು ಎನ್ನುವ ಚರ್ಚೆಗಳು ಕಮಲ ಪಾಳಯದಲ್ಲಿದೆ.
ಡಾ.ಎಚ್.ಸಿ.ಮಹದೇವಪ್ಪ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ತಮ್ಮ ಮಗ ಸುನಿಲ್ ಬೋಸ್ಗಾಗಿ ರಾಜಕೀಯ ಭವಿಷ್ಯ ಕಲ್ಪಿಸಿಕೊಡಬೇಕೆಂಬ ಆಶಯ ಅವರಿಗಿದೆ. ಹೀಗಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ತಾವು ಸ್ಪರ್ಧೆ ಬುಂಸಿ ಅರ್ಜಿ ಸಲ್ಲಿಸಿ, ತಮ್ಮ ಪುತ್ರ ಸುನಿಲ್ ಬೋಸ್ಗೆ ತಿ. ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲು ಮುಂದಾಗಿದ್ದಾರೆ. ಪುತ್ರನಿಗಾಗಿ ತ್ಯಾಗ ಮಾಡಿ ತಾವು ಬೇರೆ ಕ್ಷೇತ್ರ ನೋಡಿಕೊಳ್ಳುವರೋ, ಮಗನೇ ತಂದೆಗಾಗಿ ಹಿಂದೆ ಸರಿಯುವರೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಸುನಿಲ್ ಬೋಸ್ ಈಗಾಗಲೇ ತಮ್ಮ ತಂದೆ ಮಹದೇವಪ್ಪನವರೊಂದಿಗೆ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.
ಇದಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಕಾಂಗ್ರೆಸ್ ಯುವ ಮುಖಂಡ ಎಂ.ನೂತನ್, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ದಿ. ಮಂಜುನಾಥ್ರವರ ಪುತ್ರ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಪ್ರಫುಲ್ ಕೂಡ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ತಿ. ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗಳು ಆಯ್ಕೆಯಾಗದಿರುವುದು ಅಭಿವೃದ್ಧಿಯಲ್ಲಿ ಹಿನ್ನಡೆಯಾಗಲು ಕಾರಣವಾಗಿದೆ. ೧೯೫೨ ರಿಂದ ಇಲ್ಲಿಯವರೆಗೂ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಹಲವಾರು ಮಂದಿ ಶಾಸಕರಾಗಿದ್ದಾರೆ, ಅದರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಡಾ. ಎಚ್ ಸಿ ಮಹದೇವಪ್ಪ ಜೊತೆಗೂಡಿ ಮಾಡಿರುವ ಅಭಿವೃದ್ದಿಯೇ ಹೆಚ್ಚು. ಕ್ಷೇತ್ರವನ್ನು ಪ್ರವಾಸೋದ್ಯಮ ಸ್ಥಳವೆಂದು ಘೋಷಿಸಬೇಕು. ನಾವು ಇನ್ನೂ ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆ ಕೇಳುವಂಥ ಸ್ಥಿತಿಯಲ್ಲಿದ್ದೇವೆ.
-ಷಣ್ಮುಖ ಸ್ವಾಮಿ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರು ತಿ. ನರಸೀಪುರ.