ಬೆಂಗಳೂರು: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಾಗ, ರಾಷ್ಟ್ರ ರಕ್ಷಣೆ ಮಾಡುವಾಗ ಮತ್ತು ಇತರೆ ಸಂದರ್ಭದಲ್ಲಿ ಕರ್ತವ್ಯ ನಿರತರಾಗಿರುವ ವೇಳೆ ಪ್ರಾಣ ತ್ಯಾಗ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು
ಗೌರವ ಪೂರಕವಾಗಿ ಸ್ಮರಿಸುವ ಪೊಲೀಸ್ ಸಂಸ್ಕರಣಾ ದಿನವನ್ನು ಅ. 21 ರಂದು ಬೆಳಗ್ಗೆ 8-00 ಗಂಟೆಗೆ ಮೈಸೂರು ರಸ್ತೆಯ ಸಿ ಎ ಆರ್ ಕೇಂದ್ರಸ್ಥಾನದಲ್ಲಿ ಆಚರಿಸಲಾಗುತ್ತಿದೆ.
ಕಳೆದ ಸೆ. 1ರಿಂದ ಈ ವರ್ಷದ ಆ.31 ರ ಅವಧಿಯಲ್ಲಿ ಕರ್ತವ್ಯದ ವೇಳೆ ರಾಜ್ಯದಲ್ಲಿ ಒಟ್ಟು 11 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೃತಪಟ್ಟಿರುತ್ತಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಹುತಾತ್ಮರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಗೌರವ ಸಮರ್ಪಿಸಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಸಹಾಯಕ ಸಬ್ ಇನ್ಸ್ಪೆಕ್ಟರ್
ರಾಜು, ಪೇದೆ ಪ್ರಸಾದ್ ಎಸ್ ಅವರು ಸೇರಿ 11 ಹುತಾತ್ಮ ರಿಗೆ ಗೌರವ ಸಲ್ಲಿಸಲಾಗುವುದು.