ರಾಜ್ಯ

ಹೈಕೋರ್ಟ್‌ನಲ್ಲಿ ಅರ್ಜಿ ವಜಾ : ಪ್ರತಾಪ್‌ ಸಿಂಹ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು : ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದು, ಇದನ್ನು ಪ್ರಶ್ನಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ ಪಿಐಎಲ್​ ಅನ್ನು ಹೈಕೋರ್ಟ್ ವಜಾ ಮಾಡಿದೆ. ಈ ಮೂಲಕ ಪ್ರತಾಪ್ ಸಿಂಹ ಹಾಗೂ ಇತರರಿಗೆ ಹಿನ್ನಡೆಯಾದಂತಾಗಿದೆ. ಇನ್ನು ಕೋರ್ಟ್​ ತೀರ್ಪಿನ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಹಿಂದೂ ವಿಚಾರದಲ್ಲಿ ನ್ಯಾಯ ಸಿಗಬಹದೂ ಎಂದು ನಾನು ಕೋರ್ಟ್ ಗೆ ಹೋಗಿದ್ದೆ. ಆದ್ರೆ, ಸೆಕ್ಯುಲರ್ ಹೆಸರಿನಲ್ಲಿ ಸಣ್ಣ ಪರದೆಯೊಳಗೆ ನನ್ನ ಅರ್ಜಿ ವಜಾ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಉಚ್ಚ ನ್ಯಾಯಾಲಯದ ಬಗ್ಗೆ ಏನನ್ನು ಹೇಳಲ್ಲ. 2023ರ ಜನಸಾಹಿತ್ಯದ ಸಮ್ಮೇಳನದಲ್ಲಿ ಭುವನೇಶ್ವರಿ, ಅರಿಶಿನ ಕುಂಕುಮದ ಬಗ್ಗೆ ತಗಾದೆ ಎತ್ತಿರುವುದನ್ನು ತೋರಿಸಿದ್ವಿ. ಆದರೂ ಸೆಕ್ಯಲರಿಸಮ್ ಹೆಸರಿನಲ್ಲಿ ನಮ್ಮ ವಾದಕ್ಕೆ ಮನ್ನಣೆ ಕೊಟ್ಟಿಲ್ಲ. ಅಭಿಪ್ರಾಯ ಬೇಧ ವ್ಯಕ್ತಪಡಿಸುವ ಹೆಸರಿನಲ್ಲಿ ಅರ್ಜಿ ವಜಾ ಮಾಡಿದ್ದಾರೆ ಎಂದು ಹೇಳಿದರು.

ದಲಿತ ವ್ಯಕ್ತಿಗೆ ಸೇರಿದ ಭೂಮಿಯನ್ನು ಸಿಎಂ ಪತ್ನಿಯ ಸಹೋದರ ಸ್ವಾಧೀನ ಮಾಡಿದ್ರು. ಮೂಡದಲ್ಲಿ ಅರ್ಜಿ ಹಾಕಿ ಬದಲಿ ನಿವೇಷನವನ್ನು ಬೆಲೆ ಬಾಳುವ ಪ್ರದೇಶದಲ್ಲಿ ಪಡೆದಿದ್ದರು. ಪಾಲಿಕೆಗೆ ಸುಳ್ಳು ಹೇಳಿ 14 ಸೈಟು ಹೊಡೆದಿದ್ದು ದಾಖಲೆ ಸಮೇತ ಇತ್ತು. ಆದರೂ 14 ಸೈಟುಗಳ ದರೋಡೆ ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿತ್ತು. ಧರ್ಮಸ್ಥಳ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡಿದ ಸಮೀರ್ ಗೆ ಕೋರ್ಟ್ ನಿರೀಕ್ಷಣಾ ಜಾಮೀನು ಕೊಡುತ್ತೆ. ಮಹೇಶ್ ತಿಮ್ಮರೋಡಿ ವಿರುದ್ಧ ಪ್ರಕರಣ ದಾಖಲಾಗಲ್ಲ. ರಾಷ್ಟ್ರೀಯ ಲಾಂಚನವನ್ನು ಕುಟ್ಟಿ ತೆಗೆಯುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತೀರಾ? ಎಂದು ಪ್ರಶ್ನಿಸಿದರು.

ಬಾನು ಮುಷ್ತಾಕ್ ಅವರನ್ನು ಮುಸ್ಲಿಂ ಎನ್ನುವ ಕಾರಣಕ್ಕೆ ವಿರೋಧಿಸಲಿಲ್ಲ. ಭುವನೇಶ್ವರಿಗೆ ಬಗ್ಗೆ ಅಪಸ್ವರ ಇದ್ದ ಕಾರಣಕ್ಕೆ ವಿರೋಧಿಸಿದ್ದು. ಅದೇ ಕಾರಣಕ್ಕೆ ನಾನು ಕೋರ್ಟ್​​ ಗೆ ಹೋಗಿದ್ದು . ಸೆಕ್ಯಲರಿಂ ಚೌಕಟ್ಟಿನಲ್ಲಿ ತಂದು ಕೋರ್ಟ್ ಅರ್ಜಿ ವಜಾ ಮಾಡಿದೆ. ಸಂವಿಧಾನದ ಪುಸ್ತಕದಲ್ಲೂ ಪುರಾಣ ಕಥೆಗಳು ಇವೆ. ಅದನ್ನು ಮುಂದೆ ಪ್ರಶ್ನೆ ಮಾಡಿದಾಗ ಏನ್ ಹೇಳುತ್ತೀರಿ. ನ್ಯಾಯಾಂಗದ ವಿಶ್ವಾಸರ್ಹತೆ ಪ್ರಶ್ನೆ ಮಾಡುತ್ತಿಲ್ಲ. ನಾನು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿಯೇ ಮಾತನಾಡುತ್ತಿದ್ದೇನೆ ಎಂದರು.
===

ಆಂದೋಲನ ಡೆಸ್ಕ್

Recent Posts

ಸಫಾರಿಗೆ ಮೊಬೈಲ್‌ ನಿಷೇಧ ; ಪ್ರವಾಸಿಗರ ಬೇಸರ

ವನ್ಯಜೀವಿ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಅವಕಾಶ ಇಲ್ಲದೆ ಪರಿತಾಪ; ನಿಷೇಧಕ್ಕೆ ಕೆಲವರ ಸಹಮತ • ಚಿರಂಜೀವಿ ಸಿ. ಹುಲ್ಲಹಳ್ಳಿ…

9 mins ago

ಓದುಗರ ಪತ್ರ | ಮೆಜೆಸ್ಟಿಕ್ ಸುಸ್ಥಿರ ನಗರದ ಹೊಸ ದಿಕ್ಕೂಚಿಯಾಗಲಿ

ಬೆಂಗಳೂರಿನ ಹೃದಯಭಾಗದ 32 ಎಕರೆ ವಿಸ್ತೀರ್ಣದಲ್ಲಿ ಪ್ರಾಜೆಕ್ಟ್ ಮೆಜೆಸ್ಟಿಕ್ ಅಡಿಯಲ್ಲಿ ಸಿಂಗಾಪುರ ಮಾದರಿಯ ಇಂಟರ್ ಮಾಡೆಲ್ ಟ್ರಾನ್ಸಿಟ್ ಹಬ್ ನಿರ್ಮಿಸುವ…

54 mins ago

ಓದುಗರ ಪತ್ರ | ಮೆಜೆಸ್ಟಿಕ್ ಸುಸ್ಥಿರ ನಗರದ ಹೊಸ ದಿಕ್ಕೂಚಿಯಾಗಲಿ

ಬೆಂಗಳೂರಿನ ಹೃದಯಭಾಗದ 32 ಎಕರೆ ವಿಸ್ತೀರ್ಣದಲ್ಲಿ ಪ್ರಾಜೆಕ್ಟ್ ಮೆಜೆಸ್ಟಿಕ್ ಅಡಿಯಲ್ಲಿ ಸಿಂಗಾಪುರ ಮಾದರಿಯ ಇಂಟರ್ ಮಾಡೆಲ್ ಟ್ರಾನ್ಸಿಟ್ ಹಬ್ ನಿರ್ಮಿಸುವ…

58 mins ago

ಓದುಗರ ಪತ್ರ | ಕೆ. ಜಿ. ಕೊಪ್ಪಲಿನಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿ

ಮೈಸೂರಿನ ಕನ್ನೇಗೌಡನ ಕೊಪ್ಪಲು (ಕೆ. ಜಿ. ಕೊಪ್ಪಲು) ಮತ್ತು ಜಯನಗರಕ್ಕೆ ಸೇರಿದ ಶತಮಾನಗಳಷ್ಟು ಹಳೆಯದಾದ, ಸಾರ್ವಜನಿಕ ಸ್ಮಶಾನದ ಸುಮಾರು ಹತ್ತು…

1 hour ago

ಓದುಗರ ಪತ್ರ | ಸ್ವಯಂ ಘೋಷಿತ ವಿಶ್ವನಾಯಕನ ದ್ವಂದ್ವ ನೀತಿ

ಕೆಲವು ದಿನಗಳ ಹಿಂದೆ ತಾನು ಇತರ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾ, ಅದಕ್ಕಾಗಿ ತಮಗೆ ನೊಬೆಲ್ ಶಾಂತಿ…

1 hour ago

ಓದುಗರ ಪತ್ರ | ಸ್ಪೇನ್ ದೇಶದ ನಿಲುವು ಅನುಕರಣೀಯ

ಇಸ್ರೇಲ್-ಅಮೆರಿಕ ಜತೆಗೂಡಿ ಇರಾನ್ ವಿರುದ್ಧ ಸಮರ ಸಾರಿ 12ದಿನಗಳು ಕಳೆದಿದ್ದು, ಈ ಯುದ್ಧದಿಂದಾಗಿ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.…

1 hour ago