ರಾಜ್ಯ

ರೈತ ಪಂಚೆ ಹಾಕಿದ್ದಕ್ಕೆ ಎಂಟ್ರಿ ನಿರಾಕರಣೆ ಪ್ರಕರಣ: ಜನತೆ ಬಳಿ ಕ್ಷಮೆ ಕೇಳಿದ ಜಿಟಿ ವಲ್ಡ್‌ ಮಾಲ್‌

ಬೆಂಗಳೂರು: ಪಂಚೆ ತೊಟ್ಟಿದ್ದಕ್ಕೆ ಬೆಂಗಳೂರಿನ ಜಿ.ಟಿ.ಮಾಲ್‌ನಲ್ಲಿ ರೈತನಿಗೆ ಎಂಟ್ರಿ ನಿರಾಕರಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿ.ಟಿ.ಮಾಲ್‌ ಜನತೆ ಬಳಿ ಕ್ಷಮೆ ಕೇಳಿದೆ.

ಮಾಲ್‌ಗೆ ಸಿನಿಮಾ ನೋಡಲು ಯುವಕನೊಬ್ಬ ತನ್ನ ತಂದೆ ಜೊತೆಗೆ ಬಂದಿದ್ದ. ಆದರೆ ಪಂಚೆ ಹಾಕಿದ ಕಾರಣಕ್ಕಾಗಿ ರೈತ ಮಾಲ್ ಒಳಗೆ ಹೋಗಲು ನಿರಾಕರಣೆ ಮಾಡಲಾಗಿತ್ತು.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಸಾರ್ವಜನಿಕ ವಲಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಎಚ್ಚೆತ್ತ ಜಿ.ಟಿ.ಮಾಲ್‌, ಜನತೆಯ ಬಳಿ ಕ್ಷಮೆ ಕೇಳಿದೆ.

ಈ ಘಟನೆಗೆ ನಮ್ಮ ಸಿಬ್ಬಂದಿಯ ತಪ್ಪು ತಿಳುವಳಿಕೆ ಕಾರಣವಾಗಿರುತ್ತದೆ. ಇದರಿಂದ ಅವಮಾನ ಆದ ವ್ಯಕ್ತಿಗೆ ನಾವು ಕ್ಷಮೆಯಾಚಿಸುತ್ತೇವೆ. ಈ ರೀತಿಯ ಘಟನೆಗಳು ಮತ್ತೆ ಸಂಭವಿಸದಂತೆ ಜವಾಬ್ದಾರಿ ವಹಿಸುತ್ತೇವೆ. ನಮ್ಮ ಮಾಲ್‌ಗೆ ಎಲ್ಲರಿಗೂ ಸುಸ್ವಾಗತ ಎಂದು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಚಾಮರಾಜನಗರ: ನಂಜೆದೇವಪುರ ಸುತ್ತಮುತ್ತ ಹುಲಿಗಳಿಗಾಗಿ ಶೋಧ ಕಾರ್ಯ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ನಂಜೆದೇವಪುರ ಗ್ರಾಮದ ಸುತ್ತಮುತ್ತ ಹುಲಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿಸಲಾಗಿದೆ. ಚಾಮರಾಜನಗರ ತಾಲ್ಲೂಕಿನ…

44 mins ago

ಕ್ರಿಕೆಟ್‌ ಪ್ರೇಮಿಗಳಿಗೆ ಶಾಕ್:‌ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳಿನ ಪಂದ್ಯಕ್ಕೆ ಅನುಮತಿ ನಿರಾಕರಣೆ

ಬೆಂಗಳೂರು: ಕ್ರಿಕೆಟ್‌ ಪ್ರೇಮಿಗಳಿಗೆ ಶಾಕ್‌ ಎಂಬಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳಿನ ಪಂದ್ಯಕ್ಕೆ ಅವಕಾಶ ಇಲ್ಲ ಎಂದು ತಿಳಿದುಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ…

55 mins ago

ಅಪಘಾತದಲ್ಲಿ ಗಾಯಗೊಂಡವನಿಂದ 80 ಸಾವಿರ ದೋಚಿದ್ದ ಇಬ್ಬರು ಅರೆಸ್ಟ್‌

ಮೈಸೂರು: ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯಿಂದ 80 ಸಾವಿರ ರೂ ದೋಚಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ರಮೇಶ್‌ ಹಾಗೂ…

1 hour ago

ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಸಾವು

ಮಂಡ್ಯ: ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.…

2 hours ago

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ವಾರ್‌: ಕಿಚ್ಚ ಸುದೀಪ್‌ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ವಾರ್‌ ಬಗ್ಗೆ ನಟ ಕಿಚ್ಚ ಸುದೀಪ್‌ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯುದ್ಧಕ್ಕೆ ಸಿದ್ಧ ಮಾತಿಗೆ…

2 hours ago

ಓದುಗರ ಪತ್ರ: ಮರಗಳ ಕೊಂಬೆಗಳನ್ನು ಕತ್ತರಿಸಿ

ಮೈಸೂರಿನ ಸುಭಾಷ್ ನಗರದ ೪ನೇ ಮುಖ್ಯರಸ್ತೆಯಲ್ಲಿರುವ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದು, ಗಾಳಿ ಅಥವಾ ಮಳೆಯ ಸಮಯದಲ್ಲಿ ಶಾರ್ಟ್…

2 hours ago