ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾನು ಯಾವತ್ತೂ ಬೆನ್ನಲ್ಲಿ ಚೂರಿ ಹಾಕುವವನಲ್ಲ, ಮುಖಾಮುಖಿ ಹೋರಾಟ ನಡೆಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದು ನಮಿಬ್ಬರ ಗುರಿ ಎಂದರು.
ತಾವು ದೆಹಲಿಗೆ ಹೋಗಿದ್ದಾಗ 8-10 ಮಂದಿ ಶಾಸಕರನ್ನು ಜೊತೆಗೆ ಕರೆದುಕೊಂಡು ಹೋಗಬಹುದಿತ್ತು. ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ಶಾಸಕರನ್ನು ಜೊತೆಗೆ ಕರೆದುಕೊಂಡು ಹೋಗುವುದು ದೊಡ್ಡ ಕೆಲಸವೇನಲ್ಲ. ಪಕ್ಷದ ಅಧ್ಯಕ್ಷರಾಗಿರುವ ತಾವು 140 ಮಂದಿ ಶಾಸಕರಲ್ಲೂ ತಾರತಮ್ಯ ಮಾಡದೇ, ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವನಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಯಾವ ಮಟ್ಟಿನ ಪ್ರಾಮಾಣಿಕತೆ ಎಂಬುದು ನನ್ನ ಆತಸಾಕ್ಷಿ ಮತ್ತು ದೇವರಿಗೆ ಗೊತ್ತಿದೆ. ಕೊನೆಯ ಕ್ಷಣದವರೆಗೂ ಸರ್ಕಾರ ಉಳಿಸಲು ಪ್ರಯತ್ನ ಮಾಡಿದ್ದೇನೆ. ಅದು ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತು. ಕುಮಾರಸ್ವಾಮಿ ನನ್ನ ನಿಷ್ಠೆಯ ಬಗ್ಗೆ ಒಪ್ಪದೇ ಇರಬಹುದು. ಅದು ಬೇರೆ ವಿಚಾರ. ಅವರು ಏನೂ ಬೇಕಾದರೂ ಮಾತನಾಡಿಕೊಳ್ಳಲಿ, ನಾನು ಯಾವತ್ತೂ ಬೆನ್ನಿಗೆ ಚೂರಿ ಹಾಕುವವನಲ್ಲ. ಎದುರಿಗೆ ಹೋರಾಟ ಮಾಡುತ್ತೇನೆ, ನನ್ನ ಬದುಕು ಇದೇ ರೀತಿ ಇರುತ್ತದೆ ಎಂದು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕರ್ನಾಟಕದ ಸೂಪರ್ ಸಿಎಂ ಎಂಬ ಬಿಜೆಪಿಯವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷವಾಗಿರುವ ಬಿಜೆಪಿ ತಾನು ಬದುಕಿದ್ದೇನೆ ಎಂದು ತೋರಿಸಿಕೊಳ್ಳಬೇಕು. ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದರು.
ಇತ್ತೀಚಿನ ಬೆಳವಣಿಗೆಗಳಲ್ಲಿ ಸ್ವಾಮೀಜಿಗಳ ಮಧ್ಯ ಪ್ರವೇಶಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಈ ಹಿಂದೆ ಒಕ್ಕಲಿಗ ಸಮುದಾಯಕ್ಕಾಗಿ ಎರಡನೇ ಮಠ ಹೇಗೆ ಆಯಿತು. ಸ್ವಾಮೀಜಿ ಇಲ್ಲದೇ ಹೋಗಿದ್ದರೆ ದೇವೇಗೌಡರು ಮುಖ್ಯಮಂತ್ರಿಯಾಗುತ್ತಿದ್ದರೇ? ಆ ವೇಳೆ ಸ್ವಾಮೀಜಿ ರಸ್ತೆಗೆ ಇಳಿಯಲಿಲ್ಲವೇ? ಸದಾನಂದಗೌಡರಿಗೆ ತೊಂದರೆಯಾದಾಗ ಸ್ವಾಮೀಜಿ ಸುಮನೆ ಇದ್ದರೇ? ಎಂದು ಪ್ರಶ್ನಿಸಿದರು.
ಇದನ್ನು ಓದಿ: ರಿಷಬ್ ಶೆಟ್ಟಿ ಹೊಗಳುವ ಭರದಲ್ಲಿ ಕಾಂತಾರ ದೈವಕ್ಕೆ ರಣವೀರ್ ಸಿಂಗ್ ಅಪಮಾನ ಆರೋಪ
ಕೆಲವು ಸಂದರ್ಭಗಳ ಕೆಲವರು ಮಾತನಾಡುತ್ತಾರೆ. ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೇರೆ ಸ್ವಾಮೀಜಿಗಳು ಮಾತನಾಡಿದ್ದಾರೆ. ಅದಕ್ಕೆ ನಾವು ಬೇಜಾರು ಮಾಡಿಕೊಳ್ಳಲು ಸಾಧ್ಯವೇ? ತಾವು ಯಾವ ಸ್ವಾಮೀಜಿಯವರ ಬೆಂಬಲವನ್ನೂ ಕೇಳಲಿಲ್ಲ ಎಂದರು.
ತಾವು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿರಬಹುದು. ಆದರೆ ಎಲ್ಲಾ ಜಾತಿಗಳನ್ನು ಪ್ರೀತಿಸುತ್ತೇನೆ. ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು, ಶ್ರೀ ಶೈಲದ ಶ್ರೀಗಳು ನನ್ನ ಪರವಾಗಿ ಮಾತನಾಡಿದ್ದಾರೆ. ಜೈನ ಸಮುದಾಯದ ಸ್ವಾಮೀಜಿ ಕೂಡ ಬಹಿರಂಗವಾಗಿಯೇ ನನಗೆ ಆಶೀರ್ವಾದ ಮಾಡಿದರು. ಧರ್ಮಸ್ಥಳದಲ್ಲೂ ನನ್ನ ಬಗ್ಗೆ ಮಾತನಾಡಿದ್ದಾರೆ. ಅವರಿಗೆಲ್ಲಾ ನನ್ನ ಮೇಲೆ ಪ್ರೀತಿ, ವಿಶ್ವಾಸ, ಗೌರವ ಇದೆ. ಅದನ್ನು ಬೇಡ ಎನ್ನಲು ಸಾಧ್ಯವೇ? ಎಂದರು.
ಕುಮಾರಸ್ವಾಮಿ ವಿಶ್ವ ಮಾನವರು. ಬಹಳ ದೊಡ್ಡವರು. ಅವರಿಗೆ ಯಾರ ಆಶೀರ್ವಾದವೂ ಬೇಡ, ಯಾವ ಮಠ, ಒಕ್ಕಲಿಗರ ಸಂಘ ಹಾಗೂ ಜಾತಿಯನ್ನು ಬಳಸಿಕೊಂಡಿಲ್ಲ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಮತ್ತೆ ಮಾತನಾಡುತ್ತೇವೆ. ದೆಹಲಿಯಲ್ಲೇ ಸರ್ವಪಕ್ಷ ಸಭೆ ಕರೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅದರಲ್ಲಿ ಎಲ್ಲಾ ಸಂಸದರೂ ಭಾಗವಹಿಸಬೇಕು.ಸರ್ವ ಪಕ್ಷ ಸಭೆಯನ್ನು ನಾನು ನಡೆಸುವುದು ಸರಿಯಲ್ಲ. ಹೀಗಾಗಿ ಮುಖ್ಯಮಂತ್ರಿ ಅವರೇ ಅಧ್ಯಕ್ಷತೆ ವಹಿಸಬೇಕು. ಕೆಲವು ವಿಷಯಗಳ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಸರ್ವಪಕ್ಷ ಸಭೆಯಲ್ಲಿ ಕಂದಾಯ, ಕೃಷಿ, ಸಚಿವರು ಮತ್ತಿತರರು ಭಾಗವಹಿಸಬೇಕಿದೆ ಎಂದರು.
ತಂದೆ-ಮಕ್ಕಳ ಭೇಟಿಯಲ್ಲೂ ರಾಜಕೀಯ:
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವ ಪ್ರಿಯಾಂಕ ಖರ್ಗೆ ಭೇಟಿ ಮಾಡಿರುವುದರಲ್ಲಿ ರಾಜಕೀಯ ಹುಡುಕುವುದು ಸರಿಯಲ್ಲ. ಅಪ್ಪ-ಮಕ್ಕಳು ಭೇಟಿ ಮಾಡುವಾಗ ರಾಜಕೀಯ ಇರುತ್ತದೆಯೇ? ಅರ್ಜಿ ಹಾಕಿಕೊಂಡು ಭೇಟಿಯಾಗಬೇಕೇ? ಎಂದು ಆಕ್ಷೇಪಿಸಿದರು. ಕಾಂಗ್ರೆಸ್‍ನಲ್ಲಿ ತಂದೆ ಮಕ್ಕಳು, ಅಣ್ಣ-ತಮಂದಿರು ಭೇಟಿಯಾದಾಗಲೂ ಅದರಲ್ಲಿ ರಾಜಕೀಯ ಹುಡುಕಲಾಗುತ್ತದೆ. ಅದೇ ಬೇರೆ ಪಕ್ಷದ ಬಗ್ಗೆ ಏನೇ ಆದರೂ ಅದನ್ನು ಪರಿಗಣಿಸುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಮ್ಮ ಮನೆಗೆ ಊಟಕ್ಕೆ ಕರೆದಿದ್ದೇನೆ. ಸಮಯವನ್ನು ನಿಮಗೆ ಹೇಳಿದರೆ, ಕುತೂಹಲ ಇರುವುದಿಲ್ಲ ಎಂದರು.
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…
ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ…
ಬೆಂಗಳೂರು: ಜನವರಿ.22ರಿಂದ ಜನವರಿ.31ರವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಬಗೆದಷ್ಟೂ ಪುರಾತನ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಇದೀಗ ಚೌಕಿಮಠ ಕುಟುಂಬದ ವಾಸದ ಮನೆಯೊಳಗೆ ಅಪರೂಪದ…
ಹನೂರು: ಜಮೀನಿನಲ್ಲಿ ಬೆಳೆದಿರುವ ತರಕಾರಿ ಬೆಳೆಗಳನ್ನು ಕಾಡಾನೆಗಳ ಹಿಂಡು ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ದಾಳಿ ನಡೆಸಿ ಬೆಳೆ…