ಬೆಂಗಳೂರು : 5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರ ಗೊತ್ತಿರುವುದು ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮಾತ್ರ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸಿಎಂ ಆಗಿ ನಾನೇ 5 ವರ್ಷ ಮುಂದುವೆಯುತ್ತೇಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮಗೆ ಯಾರಿಗೂ ಗೊತ್ತಿಲ್ಲ ದೆಹಲಿಯಲ್ಲಿ ಸರ್ಕಾರ ರಚನೆಯಾದಾಗ ಏನೂ ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ಅದು ಗೊತ್ತಿರೋದು ಸಿಎಂ ಹಾಗೂ ಡಿಸಿಎಂಗೆ ಮಾತ್ರ. ಅವರಿಗೆ ಮಾತ್ರ. ಆ ವಿಚಾರದಲ್ಲಿ ನಾವು ಹೇಳಿಕೆ ಕೊಡೋದು ಸರಿ ಕಾಣಿಸಲ್ಲ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳು ಬಂದು ಹೋಗಿದ್ದಾರೆ. ಬಹುಶಃ ಅವರಿಗೆ ಗೊತ್ತಿರುತ್ತೆ ಎಂದರು.
ಯಾವುದು ಸತ್ಯ ಯಾವುದು ಅಸತ್ಯ ಅಂತಾ ನಾನು ಜಡ್ಜ್ ಮಾಡೊಕ್ಕೆ ಆಗುತ್ತಾ?. ಅವರು ಹೇಳಿದ್ದಾರೆ ಏನೋ ಅರ್ಥ ಇರಬೇಕು. ನಾನು ವೈಯಕ್ತಿಕವಾಗಿ ಜಡ್ಜ್ಮೆಂಟ್ ಮಾಡೋಕ್ಕೆ ಆಗಲ್ಲ ಎಂದರು.
ಸಿಎಂ ಹೇಳಿಕೆ ರಾಜಕೀಯ ಬಣಕ್ಕೆ ಕಾರಣವಾಗುತ್ತಾ ಎಂಬ ವಿಚಾರದ ಕುರಿತು ಮಾತನಾಡಿ, ಏನೂ ಆಗಲ್ಲ ಅದರ ಬಗ್ಗೆ ಹೆಚ್ಚು ಚರ್ಚೆ ಮಾಡೋದು ಬೇಡ ಅನ್ನೊದು ನನ್ನ ಅನಿಸಿಕೆ. ನಾನಂತೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಕ್ಕೆ ಹೋಗಲ್ಲ ಎಂದು ಹೇಳಿದರು.
ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…
ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…
ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್ ಮಾಡಿ ಬಹಳ…
ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…
ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…
ಮೈಸೂರು : ‘ಹಳೆಯ ಮೈಸೂರು ರಕ್ಷಣೆಯ ನಿಟ್ಟಿನಲ್ಲಿ ಕಾಲಕಾಲಕ್ಕೆ ಸೂಕ್ತ ಕ್ರಮ ವಹಿಸಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು.…