ಯುಪಿಐ ಬಂದಾಗಿನಿಂದ ಹಲವಾರು ಮಂದಿ ತಾವು ಪ್ರತಿನಿತ್ಯ ಪ್ರಯಾಣಿಸುವ ಬಸ್‌ಗಳಲ್ಲಿಯೂ ಟಿಕೆಟ್ ಪಡೆದುಕೊಳ್ಳಲು ಯುಪಿಐ ಪಾವತಿಯನ್ನು ಸ್ವೀಕರಿಸಿದರೆ ಉತ್ತಮವಾಗಿರುತ್ತಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸುವರೂ ಸಹ ಚಿಲ್ಲರೆ ಕಿರಿಕಿರಿಯಾದಾಗಲೆಲ್ಲಾ ಆನ್‌ಲೈನ್ ಪೇಮೆಂಟ್ ಇದ್ದಿದ್ದರೆ ಎಷ್ಟು ಚೆಂದ ಎಂದುಕೊಂಡಿದ್ದುಂಟು.
ಇದೀಗ ಇಂತಹ ಹಲವರ ಅಭಿಪ್ರಾಯ ಹಾಗೂ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ರಾಜ್ಯ ಸಚಿವ ರಾಮಲಿಂಗರೆಡ್ಡಿ ಈ ಕುರಿತು ಮಾಧ್ಯಮದವರ ಜತೆ ಮಾಹಿತಿ ಹಂಚಿಕೊಂಡಿದ್ದು, ಶೀಘ್ರದಲ್ಲಿಯೇ ಕ್ಯಾಶ್‌ಲೆಸ್ ಪ್ರಯಾಣ ಮಾಡಬಹುದು, ಅದರ ಕುರಿತ ಕೆಲಸಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಮೂರು ತಿಂಗಳಲ್ಲಿ ಕ್ಯಾಶ್‌ಲೆಸ್ ಶುರುವಾಗಲಿದೆ. ತಾಂತ್ರಿಕ ಕೆಲಸಗಳು ಜರುಗುತ್ತಿದ್ದು, ಜನರಿಗೆ ಇರುವ ಚಿಲ್ಲರೆ ಸಮಸ್ಯೆಗಳು ಕಡಿಮೆಯಾಗಲಿದೆ. ಈಗಾಗಲೇ ವಾಯುವ್ಯದಲ್ಲಿ ಕ್ಯಾಶ್‌ಲೆಸ್ ಇದ್ದು ಇಲ್ಲಿಯೂ ಬರಲಿದೆ ಎಂದು ರಾಮಲಿಂಗರೆಡ್ಡಿ ತಿಳಿಸಿದರು.
ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…
ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…
ಮಂಡ್ಯ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು. ಮಂಡ್ಯ ತಾಲ್ಲೂಕಿನ…
ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…
ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…
ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…