ಬೆಂಗಳೂರು : ಚಿತ್ರದುರ್ಗಾ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ದೋಷಾರೋಪ ನಿಗದಿಯನ್ನು ನ್ಯಾಯಾಲಯ ನವೆಂಬರ್ 3ಕ್ಕೆ ಮುಂದೂಡಿದೆ.
ಶುಕ್ರವಾರ ದರ್ಶನ್ ಹಾಗೂ ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಆದರೆ ಕೆಲವೇ ನಿಮಿಷಕ್ಕೆ ವಿಚಾರಣೆ ಮುಗಿಯಿತು.
ಅಲ್ಲದೆ ದೋಷಾರೋಪ ನಿಗದಿ ಮಾಡುವ ದಿನದಂದು ಕಡ್ಡಾಯವಾಗಿ ಎಲ್ಲ ಆರೋಪಿಗಳು ಹಾಜರಿರಬೇಕು. ಅಂದು ವಿಚಾರಣೆಗೆ ಹಾಜರಾಗದಿದ್ದರೇ, ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆಯನ್ನು ಸಹಾ ನೀಡಿದೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 6 ಮಂದಿ ಆರೋಪಿಗಳು ಜೈಲಿನಿಂದಲೇ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ನಿಗದಿಯಂತೆ ಎಲ್ಲಾ ಆರೋಪಿಗಳ ದೋಷಾರೋಪ ಶುಕ್ರವಾರ ನಿಗದಿಯಾಗಬೇಕಾಗಿತ್ತು. ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವುದಾಗಿ ಹೇಳಿದ್ದರು.
ಇದನ್ನು ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್‌ಗೆ ತಿಂಗಳಿಗೊಮ್ಮೆ ಹೊದಿಕೆ, ಬಟ್ಟೆ ನೀಡಲು ಕೋರ್ಟ್ ಆದೇಶ
ಆದರೆ, ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಸ್ಪಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಜೈಲಿಗೆ ಹೋಗಿ ಆರೋಪಿ ದರ್ಶನ್ ಅವರೊಂದಿಗೆ ಚರ್ಚೆ ಮಾಡಿ ಅವರು ಖುದ್ದಾಗಿ ಕೋರ್ಟ್ ಗೆ ಹಾಜರುಪಡಿಸಲು ಮತ್ತೊಂದು ದಿನಾಂಕ ನೀಡಿ ಎಂದು ಮನವಿ ಮಾಡಿಕೊಂಡರು. ಇದರಿಂದಾಗಿ ನವಂಬರ್ 3 ರಂದು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸುವುದಾಗಿ ನ್ಯಾಯಾಧೀಶರು ಹೇಳಿದರು.
ಕೊಲೆಯಾದ ಒಂದೂವರೆ ವರ್ಷದ ಬಳಿಕ ಇದೀಗ ದೋಷಾರೋಪ ನಿಗದಿ ಆಗಲಿದೆ. ನವೆಂಬರ್ 3 ರಂದು ದರ್ಶನ್ ಹಾಗೂ ಇತರೆ ಆರೋಪಿಗಳ ಮೇಲೆ ಪೊಲೀಸರು ಮಾಡಿರುವ ಆರೋಪಗಳನ್ನು ಆರೋಪಿಗಳಿಗೆ ಓದಿ ಹೇಳಲಾಗುತ್ತದೆ. ಬಳಿಕ ನ್ಯಾಯಾಧೀಶರು ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರೆಯೇ ಎಂದು ಆರೋಪಿಗಳಿಗೆ ಕೇಳುತ್ತಾರೆ. ಒಂದು ವೇಳೆ ಆರೋಪಿಗಳು ತಮ್ಮ ಮೇಲಿರುವ ಆರೋಪಗಳನ್ನು ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗಲಿದೆ.
ನಟ ದರ್ಶನ್ , ಪವಿತ್ರಾಗೌಡ ವಿರುದ್ಧ ಕೊಲೆ , ಹಲ್ಲೆ, ಕಿಡ್ನ್ಯಾಪ್, ಸಾಕ್ಷ್ಯನಾಶ, ಷಡ್ಯಂತ್ರ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸುವ ಸಾಧ್ಯತೆ ಇದೆ. ಇವುಗಳ ಬಗ್ಗೆ ಮುಂದೆ ಕೋರ್ಟ್ ನಲ್ಲಿ ಪರ – ವಿರೋಧ ವಾದ-ಪ್ರತಿವಾದ ನಡೆಯಲಿದೆ.
ಕೇಳಿಸ್ತಾ ಇದ್ಯಾ
ಇದಕ್ಕೂ ಮುನ್ನಾ ವಿಚಾರಣೆ ವೇಳೆ ನಾವು ಮಾತನಾಡೋದು ಕೇಳಿಸ್ತಾ ಇದ್ಯಾ. ಚಾರ್ಜ್‍ಫ್ರೇಮ್ ಮಾಡುತ್ತೀವಿ ಕೇಳ್ತಾ ಇದೆ ಅಲ್ವಾ ಎಂದು ನ್ಯಾಯಾಧೀಶರು ಕೇಳಿದರು. ಈ ವೇಳೆ ಆರೋಪಿಗಳ ಹೆಸರು ಕೂಗಿ ಹಾಜರಾತಿ ಪಡೆಯಲಾಯಿತು. 16 ಮತ್ತು 17ನೇ ಆರೋಪಿಗಳು ಗೈರಾಗಿದ್ದರು. ಕುಟುಂಬದಲ್ಲಿ ಸಮಸ್ಯೆ ಇದೆ. ಹೀಗಾಗಿ ಹಾಜರಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಭೌತಿಕವಾಗಿ ಆಗಿ ಹಾಜರಾಗಲು ಅವಕಾಶ ಮಾಡಿಕೊಡಿ. ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಪಷ್ಟನೆ ಇರುವುದಿಲ್ಲ ಎಂದು ದರ್ಶನ್ ಪರ ವಕೀಲ ಸುನಿಲ್ ಮನವಿ ಮಾಡಿಕೊಂಡರು. ಇದೇ ವೇಳೆ, ಆರೋಪಿಗಳ ಭೇಟಿ ಮಾಡಲು ವಕೀಲರಿಗೆ ಅವಕಾಶ ನೀಡಲು ಮನವಿ ಮಾಡಲಾಯಿತು. ಶನಿವಾರ ಜೈಲಿನಲ್ಲಿ ಆರೋಪಿಗಳ ಭೇಟಿಗೆ ನ್ಯಾಯಾಲಯ ಅವಕಾಶ ನೀಡಿತು.
ಇದನ್ನು ಓದಿ: ದರ್ಶನ್ ಕುದುರೆಗಳು ಮಾರಾಟಕ್ಕಿವೆ: ಸೋಷಿಯಲ್ ಮೀಡಿಯಾದಲ್ಲಿ ಬೋರ್ಡ್ ವಿಡಿಯೋ ವೈರಲ್
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಈ ಒಂದು ಪ್ರಕರಣ ದರ್ಶನ್ ಜೀವನದ ದೊಡ್ಡ ಕಪ್ಪು ಚುಕ್ಕೆ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಸಾಕ್ಷ್ಯಧಾರಗಳ ಮೇಲೆ ದರ್ಶನ್ ಭವಿಷ್ಯ ನಿರ್ಧಾರವಾಗಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ (33) ಅವರ ಕೊಲೆಯು 2024ರ ಜೂನ್‍ನಲ್ಲಿ ನಡೆದಿದ್ದು, ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡಾ ಅವರಿಗೆ ಸಂದೇಶಗಳನ್ನು ಕಳುಹಿಸಿದ್ದಕ್ಕೆ ತಿರುಗುಬಾಣವಾಗಿ ಇದು ಉಂಟಾಯಿತು ಎಂದು ಪೊಲೀಸ್ ತಿಳಿಸಿದ್ದಾರೆ. ದರ್ಶನ್ ಅವರು ನಾಗೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಆರ್.ಆರ್. ನಗರದ ಒಂದು ಶೆಡ್‍ಗೆ ಕರೆತಂದು, ಬೆಲ್ಟ್, ಎಲೆಕ್ಟ್ರಿಕ್ ಶಾಕ್ (ಮೆಗ್ಗರ್ ಯಂತ್ರದ ಮೂಲಕ) ನೀಡಿ ಕೊಂದಿದ್ದಾರೆ ಎಂದು ಚಾರ್ಜ್‍ಷೀಟ್‍ನಲ್ಲಿ ಉಲ್ಲೇಖಿಸಲಾಗಿದೆ.
ಸ್ನೇಹಮಹಿ ಕೃಷ್ಣ ಪತ್ರ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್. ಹಿತೇಂದ್ರಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದಾರೆ.
ಪ್ರಕರಣದಲ್ಲಿ ಸರ್ವಾಧಿಕಾರಿಗಳಂತೆ ನಡೆದುಕೊಂಡಿರುವ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೂಡ ಅರೋಪಿ ಮಾಡಬೇಕು. ಹಲವಾರು ಅಪರಾಧ ಕೃತ್ಯಗಳನ್ನು ಎಸಗಿರುವ, ಸುಳ್ಳು ದೋಷಾರೋಪಣ ಪತ್ರ ಸಲ್ಲಿಸಿರುವ ಉಪ ಪೊಲೀಸ್ ನಿರೀಕ್ಷಕ ವಿನಯ್, ಸಹಾಯಕ ಪೊಲೀಸ್ ಆಯುಕ್ತ ಮತ್ತು ಸದರಿ ಪ್ರಕರಣದ ತನಿಖಾಧಿಕಾರಿ ಚಂದನ್ ಕುಮಾರ್ ಇಬ್ಬರನ್ನು ಕೂಡ ಈ ಪ್ರಕರಣದಲ್ಲಿ ಆರೋಪಿ ಮಾಡಬೇಕು. ಪ್ರಕರಣದ ಮುಂದುವರಿದ ತನಿಖೆಯನ್ನ ಸಿ.ಐ.ಡಿಗೆ ನೀಡಿ ಎಂದು ಒತ್ತಾಯಿಸಿದ್ದಾರೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…