ಮೈಸೂರಿನಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಪತ್ತೆ; ವಿದೇಶಿ ವಿದ್ಯಾರ್ಥಿನಿಗೆ ಒಮಿಕ್ರಾನ್ ದೃಢ

ಮೈಸೂರು: ನಗರದಲ್ಲಿ ಮತ್ತೊಂದು ಒಮಿಕ್ರಾನ್ ಪ್ರಕರಣ ಪತ್ತೆ ಆಗಿದೆ. ಮೈಸೂರು ವಿಶ್ವವಿದ್ಯಾಲಯದ ವಿದೇಶಿ ವಿದ್ಯಾರ್ಥಿನಿಗೆ ಒಮಿಕ್ರಾನ್ ದೃಢಪಟ್ಟಿದೆ. ತಾಂಜೇನಿಯಾ ದೇಶದಿಂದ ಬಂದಿದ್ದ ವಿದ್ಯಾರ್ಥಿನಿಗೆ ಸೋಂಕು ಕಂಡುಬಂದಿದೆ. ಡಿಸೆಂಬರ್ 20 ರಂದು ಆಗಮಿಸಿದ್ದ ಸೋಂಕಿತ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗೂ ಕೊವಿಡ್19 ಒಮಿಕ್ರಾನ್ ಪ್ರಕರಣ ಎಂದು ದೃಢವಾಗಿದೆ.

ಜಿಲ್ಲಾಡಳಿತ ಸೋಂಕಿತೆಯ ಸಂಪರ್ಕಿತರನ್ನ ಪತ್ತೆ ಹಚ್ಚುತ್ತಿದೆ. ಸೋಂಕಿತೆಯನ್ನು ಪ್ರತ್ಯೇಕವಾಗಿರಿಸಿ ಜಿಲ್ಲಾಡಳಿತ ಚಿಕಿತ್ಸೆ ನೀಡುತ್ತಿದೆ. ಈ ಮೂಲಕ, ಕರ್ನಾಟಕ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 39 ಕ್ಕೆ ಏರಿಕೆ ಆಗಿದೆ.

× Chat with us