ಮಂಡ್ಯ: ಎನ್‌ಸಿಸಿ ಸಾಮೂಹಿಕ ವಾರ್ಷಿಕ ತರಬೇತಿ ಶಿಬಿರ

ಮಂಡ್ಯ: ಎನ್‌ಸಿಸಿ ಸಾಮೂಹಿಕ ವಾರ್ಷಿಕ ತರಬೇತಿ ಶಿಬಿರವನ್ನು ಅ.21ರಿಂದ 30ರ ವರೆಗೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಾಂತಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಈ ಶಿಬಿರ ತಾಣದಲ್ಲಿ 400 ಎನ್‌ಸಿಸಿ ಕ್ಯಾಡೆಟ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿುಂರು ಭಾಗವಹಿಸಿರುತ್ತಾರೆ. ಕೋವಿಡ್-19 ವಾಸ್ಕ್ ಧರಿಸುವುದು, ವ್ಯಾಕ್ಸಿನ್, ಸಾರ್ವಜನಿಕ ಅಂತರ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ.

ಈ ಶಿಬಿರವು ಕ್ಯಾಂಪ್ ಕಮಾಡೆಂಟ್, ಕಮಾಂಡಿಂಗ್ ಆಫೀಸರ್ ಕರ್ನಲ್ ಮನೀಷ್ ಪ್ರಸಾದ್ ಮತ್ತು ಡೆಪ್ಯುಟಿ ಕವಾಂಡೆಂಟ್ ಕರ್ನಲ್ ಕೀರ್ತಿ ಸಿಂಗ್ ಭಿಸ್ತ ಅವರ ನೇತೃತ್ವದಲ್ಲಿ ಎನ್‌ಸಿಸಿ ಕ್ಯಾಡೆಟ್‌ಗಳಿಗೆ ಡ್ರಿಲ್, ಶಸ್ತ್ರಾಸ್ತ್ರ ತರಬೇತಿ ಮತ್ತು ನಾಯಕತ್ವ ಗುಣದ ಬಗ್ಗೆ ತರಬೇತಿ ನೀಡಲಾಗುತ್ತದೆ.

× Chat with us