ಆಂಧ್ರಪ್ರದೇಶ: ಕಲಿಯುಗದ ಅಂತ್ಯವನ್ನು ಸೂಚಿಸುವ ಒಂದು ನಂದಿ ವಿಗ್ರಹ ಇದೆ ಅಂದ್ರೆ ನೀವು ನಂಬ್ತೀರಾ.?. ಹೌದು ಇಂತಹ ನಂದಿ ವಿಗ್ರಹ ಆಂಧ್ರಪ್ರದೇಶದ ಯಾಗಂಟಿಯಲ್ಲಿದೆ.
90 ವರ್ಷಗಳ ಹಿಂದೆ ಈ ನಂದಿ ಇರುವ ಜಾಗದಲ್ಲಿ ಸುತ್ತಲೂ ನಾಲ್ಕು ಕಂಬಗಳ ಮಧ್ಯೆ ಜನರು ಪ್ರದಕ್ಷಿಣೆ ಹಾಕುವಷ್ಟು ಜಾಗವಿತ್ತಂತೆ. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಈಗ ಆ ನಂದಿ ವಿಗ್ರಹ ಸುತ್ತಲಿನ ನಾಲ್ಕು ಕಂಬಗಳಿಗೆ ಅಂಟಿಕೊಂಡಿದೆ. ಹೀಗಾಗಿ ಜನರು ಈಗ ನಂದಿ ವಿಗ್ರಹವನ್ನು ಪ್ರದಕ್ಷಿಣೆ ಹಾಕಲು ಸಾಧ್ಯವಿಲ್ಲ.
ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ಮಾಡಿರುವ ಸಂಶೋಧನೆಯಿಂದ ಈ ಕಲ್ಲಿನ ವಿಗ್ರಹ ಬೆಳೆಯುತ್ತಿದೆ ಎಂದು ದೃಢೀಕರಿಸಿದೆ. ಒಮ್ಮೆ ಈ ನಂದಿ ವಿಗ್ರಹಕ್ಕೆ ಜೀವ ಬಂದರೆ ಕಲಿಯುಗ ಅಂತ್ಯವಾಗುತ್ತದೆ ಎಂದು ಪೋತನೂರು ವೀರಬ್ರಹ್ಮೇಂದ್ರರು ತಮ್ಮ ಕಾಲಜ್ಞಾನದಲ್ಲಿ ಹೇಳಿದ್ದಾರೆ. ಈ ಕಲ್ಲು 20 ವರ್ಷಕ್ಕೆ ಒಂದು ಇಂಚಿನಷ್ಟು ಬೆಳೆಯುತ್ತಿದೆ ಎಂದು ದಾಖಲೆ ಸಮೇತ ಪ್ರೂವ್ ಆಗಿದೆ. ಒಮ್ಮೆ ಜನರು ಹೇಳುತ್ತಿರುವಂತೆ, ಕಾಲಜ್ಞಾನದಲ್ಲಿ ಉಲ್ಲೇಖವಾಗಿರುವಂತೆ ಈ ನಂದಿ ವಿಗ್ರಹಕ್ಕೆ ಜೀವ ಬಂದರೆ ಏನು ಗತಿ ಎಂದು ಕೆಲವರು ಚಿಂತಾಕ್ರಾಂತರಾಗಿದ್ದಾರೆ ಎನ್ನಲಾಗಿದೆ.
ಯಾಗಂಟಿ ಸ್ಥಳೀಯ ಜನರು ಈ ದೇವಸ್ಥಾನಕ್ಕೆ ಬಂದಾಗ ಈ ನಂದಿ ವಿಗ್ರಹವನ್ನು ತಪ್ಪದೇ ಸ್ವತಃ ತಮ್ಮ ಕಣ್ಣಿಂದು ನೋಡುತ್ತಾರೆ ಎನ್ನಲಾಗಿದೆ. ಕಾರಣ ಮೊದಲು ತಾವು ನೋಡಬೇಕು ಎನ್ನುವುದು ಒಂದು ಸಂಗತಿಯಾದರೆ, ಮೊದಲು ತಿಳಿದುಕೊಂಡರೆ ಕೆಲವು ಸಂಗತಿಗಳನ್ನು ಬೇರೆಯವರಿಗಿಂತ ಮೊದಲು ನಾವೇ ಅರಿತುಕೊಳ್ಳಬಹುದು ಎಂಬುದು ಇನ್ನೊಂದು ಸಂಗತಿಯಾಗಿದೆ.
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…