ಬೆಂಗಳೂರು: ಓಲಾ ಊಬರ್ ಕಂಪನಿಗಳಿಗೆ ಸಡ್ಡು ಹೊಡೆಯಲು ಆಟೋ ಚಾಲಕರು ಮುಂದಾಗಿದ್ದು, ಆಟೋ ಯೂನಿಯನ್ ನಿಂದ ನೂತನ ಆ್ಯಪ್ ರಚಿಸಿದ್ದಾರೆ. ಒಂದು ಕಡೆ ಆಟೋ ಚಾಲಕರಿಗೆ ವಂಚನೆಯಾಗುತ್ತಿದ್ದು, ಮತ್ತೊಂದು ಕಡೆ ಗ್ರಾಹಕರಿಗೂ ಓಲಾ ಊಬರ್ ವಂಚನೆ ಮಾಡುತ್ತಿವೆ ಎನ್ನಲಾಗುತ್ತಿದೆ. ಇದರಿಂದ ಬೇಸತ್ತು ಯಾವುದೇ ಮಧ್ಯವರ್ತಿ ಇಲ್ಲದೆ ನಮ್ಮ ಯಾತ್ರಿ ಅನ್ನೋ ಆಟೋ ಬುಕ್ಕಿಂಗ್ ಆ್ಯಪ್ನ್ನು ಸಿದ್ಧಪಡಿಸಿದ್ದು, ನವೆಂಬರ್ ತಿಂಗಳಲ್ಲಿ ಆಟೋ ಯುನಿಯನ್ ಆ್ಯಪ್ ಬಿಡುಗಡೆ ಮಾಡುತ್ತಿದೆ. ಸರ್ಕಾರ ನಿಗದಿ ಮಾಡಿರುವ ಹಣವಷ್ಟೇ ಚಾರ್ಜ್ ಮಾಡಲು ನಿರ್ಧಾರ ಮಾಡಲಾಗಿದೆ. 2 ಕಿಲೋಮೀಟರ್ಗೆ ಕೇವಲ 30 ರೂಪಾಯಿ. ಬುಕ್ಕಿಂಗ್ ಚಾಚ್೯ 10 ರೂಪಾಯಿ ಸೇರಿ ಒಟ್ಟು 40 ರೂಪಾಯಿಯಲ್ಲಿ ನೀವು ಕರೆದ ಕಡೆ, ನಿಗದಿತ ಕಿಲೋಮೀಟರ್ಗಿಂತ ದೂರ ಸಂಚಾರ ಮಾಡಬಹು. 1ಕಿಲೋಮೀಟರ್ಗೆ 15 ರೂಪಾಯಿ ನಿಗದಿಯಾಗಿದ್ದು, ಆಟೋ ಯುನಿಯನ್ ಬಿಡುಗಡೆಯಾಗುತ್ತಿರುವ ಬಗ್ಗೆ ಆಟೋ ಚಾಲರಿಂದಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಒಲಾ- ಒಬರ್ ಕಂಪನಿಗಳು ಮಾಡುತ್ತಿರುವ ತಪ್ಪಿಗೆ ಆಟೋ ಚಾಲಕರಿಗೆ ಕೆಟ್ಟ ಹೆಸರಿದೆ. ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ ಅಂತ ಗ್ರಾಹಕರು ದೂರುತ್ತಾರೆ. ಇದೀಗಾ ನಮ್ಮದೇ ಯುನಿಯನ್ ಇಂದ ಆ್ಯಪ್ ಬಿಡುಗಡೆ ಮಾಡುತ್ತಿರುವುದು ಖಷಿ ಇದೆ. ಆಟೋ ಚಾಲಕರ ಸಮಸ್ಯೆ ಏನು ಅಂತ ಯುನಿಯನ್ಗೆ ಗೊತ್ತಿದೆ. ನಮ್ಮ ಯಾತ್ರಿ ಆ್ಯಪ್ಗೆ ಸಪೋರ್ಟ್ ಮಾಡುತ್ತೇವೆ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ.