ಬೆಂಗಳೂರು: ಮಧ್ಯಪ್ರದೇಶ ಮಹಾರಾಷ್ಟ್ರದ ದೌಂಡ್ – ಮನ್ಮಾಡ್ ವಿಭಾಗದ ಜೋಡಿ ಮಾರ್ಗಕ್ಕೆ ಸಂಬಂಧಿಸಿದಂತೆ ಬೇಲಾಪುರ್, ಚಿತಾಲಿ ಮತ್ತು ಪುತುಂಬಾ ನಿಲ್ದಾಣಗಳ ಮಾರ್ಗದಲ್ಲಿ ಇಂಜಿನಿಯರಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆ ಕರ್ನಾಟಕದಿಂದ ಉತ್ತರ ಭಾರತದತ್ತ ಸಂಚರಿಸುವ ಕೆಲ ರೈಲುಗಳನ್ನು ರದ್ದುಗೊಳಿಸಿ ಮತ್ತು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಧ್ಯೆ ರೈಲ್ವೆ ವಲಯವು ತಿಳಿಸಿದೆ.
ಯಾವ ರೈಲು ರದ್ದು?
ಮಾರ್ಚ್ 27 ರಂದು ಮೈಸೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16217 ಮೈಸೂರು – ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ.
ಮಾರ್ಚ್ 28 ರಂದು ಸಾಯಿನಗರ ಶಿರಡಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16218 ಸಾಯಿನಗರ ಶಿರಡಿ – ಮೈಸೂರು ಸಾಪ್ತಾಹಿಕ
ಯಾವ ರೈಲುಗಳ ಮಾರ್ಗ ಬದಲಾವಣೆ?
ಮಾರ್ಚ್ 26 ಮತ್ತು 27 ರಂದು ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12627 ಕೆ.ಎಸ್.ಆರ್ ಬೆಂಗಳೂರು – ನವದೆಹಲಿ ಕರ್ನಾಟಕ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಬದಲಾದ ಮಾರ್ಗ ಪುಣೆ, ಲೋನಾವಾಲ, ವಸಾಯಿ ರೋಡ, ವಡೋದರಾ ಜಂ., ರತ್ಲಾಮ್ ಜಂ. ಮತ್ತು ಸಂತ ಹಿರ್ದರಾಮ್ ನಗರ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ಮಾರ್ಚ್ 26 ರಂದು ಹಜರತ್ ನಿಜಾಮುದ್ದೀನ್ನಿಂದ ಹೊರಡುವ ರೈಲು ಸಂಖ್ಯೆ 20658 ಹಜರತ್ ನಿಜಾಮುದ್ದೀನ್ – ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಬದಲಾದ ಮಾರ್ಗ ಸಂತ ಹಿರ್ದರಾಮ್ ನಗರ, ರತ್ಲಾಮ್ ಜಂ., ವಡೋದರ ಜಂ., ವಸಾಯಿ ರೋಡ, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ಮಾರ್ಚ್ 26 ಮತ್ತು 27 ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ – ವಾಸ್ಕೋ-ಡ-ಗಾಮಾ ಗೋವಾ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಬದಲಾದ ಮಾರ್ಗ ಮನ್ಮಾಡ್ ಜಂಕ್ಷನ್, ಇಗತ್ಪುರಿ, ಪನ್ವೆಲ್, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಚಲಿಸಲಿದೆ.
ಮಾರ್ಚ್ 26 ಮತ್ತು 27 ರಂದು ನವದೆಹಲಿಯಿಂದ ಹೊರಡುವ ರೈಲು ಸಂಖ್ಯೆ 12628 ನವದೆಹಲಿ – ಕೆಎಸ್ಆರ್ ಬೆಂಗಳೂರು ಕರ್ನಾಟಕ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಬದಲಾದ ಮಾರ್ಗ ಸಂತ ಹಿರ್ದರಾಮ್ ನಗರ, ರತ್ಲಾಮ್ ಜಂ., ವಡೋದರ ಜಂ., ವಸಾಯಿ ರೋಡ, ಲೋನಾವಾಲ ಮತ್ತು ಪುಣೆ ನಿಲ್ದಾಣಗಳ ಮೂಲಕ ಚಲಿಸುತ್ತದೆ.
ಕೊಂಡವೀಡು ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಜೋಡಣೆ
ಮಾರ್ಚ್ 20 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17211 ಮಚಲಿಪಟ್ಟಣಂ – ಯಶವಂತಪುರ ಹಾಗೂ ಮಾರ್ಚ್ 21 ರಿಂದ ಅನ್ವಯವಾಗುವಂತೆ ರೈಲು ಸಂಖ್ಯೆ 17212 ಯಶವಂತಪುರ – ಮಚಲಿಪಟ್ಟಣಂ ಕೊಂಡವೀಡು ಎಕ್ಸ್ ಪ್ರೆಸ್ ರೈಲುಗಳಿಗೆ 1 ಎಸಿ ತ್ರಿ ಟೈಯರ್ ಬೋಗಿಯನ್ನು ಶಾಶ್ವತ ಆಧಾರದ ಮೇಲೆ ಜೋಡಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯವು ಮಾಹಿತಿ ನೀಡಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ಮೈಸೂರು – ಸಾಯಿನಗರ ಶಿರಡಿ ಸಾಪ್ತಾಹಿಕ ರೈಲು ರದ್ದು! ಉತ್ತರ ಭಾರತ ಮಾರ್ಗದ ಹಲವು ರೈಲುಗಳ ಮಾರ್ಗ ಬದಲಾವಣೆ
Previous Articleಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸಂಪೂರ್ಣ ಜಲಾವೃತ