ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್ ಅಂಜನಾದ್ರಿಗೆ ಭೇಟಿ. ಪತ್ನಿ ತ್ರಿಷಿಕಾರೊಂದಿಗೆ ಆಗಮಿಸಿದ ಯಧುವೀರ ಒಡೆಯರ್. 575 ಮೆಟ್ಟಿಲು ಹತ್ತಿ ಆಂಜನೇಯನ ದರ್ಶನ ಪಡೆದ ದಂಪತಿ, ಕುಟುಂಬದ ಇನ್ನಿಬ್ಬರು ಸದಸ್ಯರೂ ಭಾಗಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಭೇಟಿ, ಆಂಜನೇಯನ ಸಮ್ಮುಖದಲ್ಲಿ ಸ್ವಲ್ಪ ಸಮಯ ಕಳೆದ ಯದುವೀರ ದಂಪತಿ. ಈ ಹಿಂದೆಯೂ ಅನೇಕ ಗಣ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಂಜನೇದ್ರಿ ಬೆಟ್ಟ ಭಾರೀ ವಿವಾದ ಸೃಷ್ಟಿಸಿತ್ತು. ಆಂಜನೇಯನ ಜನ್ಮಸ್ಥಳದ ವಿಚಾರವಾಗಿ ಈ ವಿವಾದ ಭುಗಿಲೆದ್ದಿತ್ತು ಎಂಬುವುದು ಉಲ್ಲೇಖನೀಯ. ಈ ಹಿಂದೆ ತಿರುಪತಿಯ ಅಂಜನಾದ್ರಿಯಲ್ಲಿ ಆಂಜನೇಯನ ಜನ್ಮವಾಗಿದೆ ಎಂದು ಟಿಟಿಡಿ ಕ್ಯಾತೆ ತಗೆದಿತ್ತು. ಹೀಗಿರುವಾಗಲೇ ಅತ್ತ ಮಹಾರಾಷ್ಟ್ರ ಕಿರಿಕ್ ತೆಗೆದಿದ್ದು, ಅಂಜನೇರಿ ಆಂಜನೇಯನ ಜನ್ಮಸ್ಥಳ ಎಂದು ವಾದಿಸಿತ್ತು. ಈ ನಡುವೆ ನಮ್ಮವರು ಮಾತ್ರ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಪ್ರತಿಪಾದಿಸಿದ್ದರು.