ಬೆಂಗಳೂರು: ಮೈಸೂರು – ಬೆಳಗಾವಿ ನಡುವೆ ನಿತ್ಯ ಸಂಚಾರ ನಡೆಸುವ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸಲಾಗಿದೆ. ಇಂದಿನಿಂದ (ಜನವರಿ 1) ಈ ರೈಲು 45 ನಿಮಿಷ ವೇಗವಾಗಿ ಚಲಿಸಿ ಬೆಳಗಾವಿ ತಲುಪಲಿದೆ.
ರೈಲು ಸಂಖ್ಯೆ 17301 ಮೈಸೂರು ಬೆಳಗಾವಿ ಎಕ್ಸ್‌ಪ್ರೆಸ್ ಈ ಹಿಂದೆ ಮೈಸೂರಿನಿಂದ ಬೆಳಗಾವಿಗೆ ಪ್ರಯಾಣಿಸಲು 12 ಗಂಟೆ ತೆಗೆದುಕೊಳ್ಳುತ್ತದೆ. ಸದ್ಯ 11 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮೈಸೂರಿನಿಂದ ಹಾವೇರಿವರೆಗೂ ರೈಲು ವೇಳಾಪಟ್ಟಿ ಬದಲಾವಣೆಯಾಗಿದ್ದು, ಹುಬ್ಬಳ್ಳಿ ಮತ್ತು ಧಾರವಾಡ ರೈಲು ನಿಲ್ದಾಣಗಳಲ್ಲಿ ರೈಲಿನ ಆಗಮನ/ನಿರ್ಗಮನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.
ಮೈಸೂರು ರೈಲು ನಿಲ್ದಾಣದಿಂದ ರಾತ್ರಿ 9:30 ಕ್ಕೆ ಹೊರಟು ಮರುದಿನ ಬೆಳಿಗ್ಗೆ 8:45 ಕ್ಕೆ ಬೆಳಗಾವಿ ರೈಲು ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಮಾರ್ಗಮಧ್ಯೆ ಬೆಳಿಗ್ಗೆ 5:10 ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುತ್ತದೆ. ಇನ್ನು ಮಾರ್ಗ ಮಧ್ಯ ಉಳಿದ ನಿಲ್ದಾಣಗಳಲ್ಲಿ 15 ರಿಂದ 20 ನಿಮಿಷ ಸಮಯ ವ್ಯತ್ಯಾಸವಾಗಿದೆ. ಉಳಿದಂತೆ ಬೆಳಗಾವಿ – ಮೈಸೂರು ಎಕ್ಸ್‌ಪ್ರೆಸ್ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಇಲ್ಲ.
ಮೈಸೂರು – ಬೆಳಗಾವಿ ಎಕ್ಸ್‌ಪ್ರೆಸ್ ವೇಳಾಪಟ್ಟಿ
ಮೈಸೂರು – 9.30ಕ್ಕೆ ನಿರ್ಗಮನ.
ಕೆಆರ್‌ನಗರ – 10.04
ಹೊಳೆನರಸೀಪುರ – 10.56
ಹಾನಸ – 11.30
ಅರಸೀಕೆರೆ – 12.08
ಕಡೂರು – 12.49
ಬೀರೂರು – 12.57
ಚಿಕ್ಕಜಾಜೂರು – 1.44
ದಾವಣಗೆರೆ – 2.20
ಹರಿಹರ – 2.36
ರಾಣೆಬೆನ್ನೂರು – 2.58
ಬ್ಯಾಡಗಿ – 3.19
ಹಾವೇರಿ – 3.35
ಯಲವಿಗಿ -4.05 (ಬೆಳಿಗ್ಗೆ)
ಹುಬ್ಬಳ್ಳಿ – 5.10
ಧಾರವಾಡ – 5.48
ಅಳ್ನಾವರ – 6.29
ಲೋಂಡಾ – 7.12
ಖಾನಾಪೂರ – 7.38
ಬೆಳಗಾವಿ – 8.45
136 ವರ್ಷಗಳಿಂದ ರೈಲು ಸೇವೆ: ”ಬೆಳಗಾವಿಯಲ್ಲಿ ರೈಲು ಸಂಚಾರ 1887ರಲ್ಲಿಆರಂಭಗೊಂಡಿದೆ. ಲೋಂಡಾ- ಬೆಳಗಾವಿ ಮಾರ್ಗದಲ್ಲಿ1887ರ ಮಾರ್ಚ್ 21ರಂದು ಹಾಗೂ ಬೆಳಗಾವಿ- ಮಿರಜ್ ಮಾರ್ಗದಲ್ಲಿಅದೇ ವರ್ಷ ಡಿ.22 ರಂದು ಮೊದಲ ರೈಲು ಸಂಚಾರ ನಡೆಸಿದೆ. ಈ ಭಾಗದಲ್ಲಿ136 ವರ್ಷಗಳಿಂದ ರೈಲು ಸೇವೆ ಇರುವುದು ವಿಶೇಷ. ದಿ.ಸುರೇಶ ಅಂಗಡಿ ಅವರು ಕೇಂದ್ರ ಸಚಿವರಾಗಿದ್ದ ವೇಳೆ ಬೆಳಗಾವಿ ರೈಲ್ವೇ ನಿಲ್ದಾಣಕ್ಕೆ 210 ಕೋಟಿ ರೂ.ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸಿದ್ದರು,” ಎಂದು ಸಂಸದೆ ಮಂಗಲ ಅಂಗಡಿ ಹೇಳಿದರು.
ಮೈಸೂರು: ದೇಶದೊಳಗೆ ಅಕ್ರಮವಾಗಿ ನುಸುಳುವವರ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕದಲ್ಲಿಯೂ ಬಾಂಗ್ಲಾದೇಶದ ಪ್ರಜೆಗಳು ಉದ್ಧಟತನ ತೋರುತ್ತಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ…
ಬೆಂಗಳೂರು: ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ…
ಮೈಸೂರು: ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಮಾರಾಟ ತಡೆಯಲು…
ನಂಜನಗೂಡು: ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ. ನಗರದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14…
ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಹುಲಿಯನ್ನು ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಕಳೆದ…
ಮೈಸೂರಿನ ಜಯನಗರದಲ್ಲಿರುವ ಇಸ್ಕಾನ್ ದೇವಾಲಯದ ಪಕ್ಕದಲ್ಲಿದ್ದ ಕಸದ ರಾಶಿಯನ್ನು ಮೈಸೂರು ಮಹಾನಗರಪಾಲಿಕೆಯಿಂದ ಮಂಗಳವಾರ ತೆರವುಗೊಳಿಸಲಾಗಿದೆ. ಆಂದೋಲನ ದಿನಪತ್ರಿಕೆಯ ಓದುಗರ ಪತ್ರ…