ಬೆಂಗಳೂರು.: ಪ್ರೌಢಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಪಟ್ಟಂತೆ ರಾತ್ರಿ ಬಂಧನಕ್ಕೆ ಒಳಗಾದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ಮುರುಘಾ ಮಠ ಪ್ರಗತಿಪರ ಚಿಂತನೆಯ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಇತಿಹಾಸವುಳ್ಳ ಮಠ. ಆದರೆ ಈಗ ಮಠದ ಸ್ವಾಮೀಜಿಗಳ ಮೇಲೆ ಲೈಂಗಿಕ ಶೋಷಣೆಯ ಗಂಭೀರ ಆರೋಪ ಬಂದಿದೆ, ಅದು ಅಪ್ರಾಪ್ತ ಬಾಲಕಿಯರಿಂದ. ಸೂಕ್ತ ಕಾನೂನಾತ್ಮಕ ತನಿಖೆಯಾಗಿ ಸಂತ್ರಸ್ತೆಯರಿಗೆ ನ್ಯಾಯ ದೊರಕುವಂತಾಗಲಿ. ಎಂದು ಟ್ವೀಟ್ ಮಾಡಿದ್ದಾರೆ.