ಚಿತ್ರದುರ್ಗ:– ಅಪ್ರಾಪ್ತ ಬಾಲಕಿಯರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಿಲುಕಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಯಾವುದೇ ಕ್ಷಣದಲ್ಲಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ದೌರ್ಜನ್ಯಕ್ಕೊಳಗಾದ ಬಾಲಕಿಯರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವುದನ್ನು ತನಿಖಾಧಿಕಾರಿಗಳು ಕಾಯುತ್ತಿದ್ದು, ಮಠದಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜ ಎಂಬುದನ್ನು ಒಪ್ಪಿಕೊಂಡರೆ ತಕ್ಷಣವೇ ಬಂಧಿಸುವ ಸಾಧ್ಯತೆ ಇದೆ.
ಸೋಮವಾರ ನಡೆದ ಮಿಂಚಿನ ವಿದ್ಯಮಾನಗಳಲ್ಲಿ ಮುರುಘಾ ಶರಣರು ಬಂಧನದ ಭೀತಿಯಿಂದ ಪಾರಾಗಲು ಮಹಾರಾಷ್ಟ್ರದಿಂದ ಅಜ್ಞಾತ ಸ್ಥಳಕ್ಕೆ
ಪರಾರಿಯಾಗುವ ವಿಫಲ ಪ್ರಯತ್ನ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಸೋಮವಾರ ಮಧ್ಯರಾತ್ರಿ ಚಿತ್ರದುರ್ಗ ಮಠದಿಂದ ಯಾರಿಗೂ ಗೊತ್ತಾಗದಂತೆ ಕಾರಿನ ಚಾಲಕ ಹಾಗೂ ಆಪ್ತ ಸಹಾಯಕನ ಮೂಲಕ ಹೊರಟ್ಟಿದ್ದರು. ಇವರ ಚಲನವಲನಗಳ ಬಗ್ಗೆ ನಿಗಾವಹಿಸಿದ್ದ ಚಿತ್ರದುರ್ಗ
ಪೊಲೀಸರು ಹಾವೇರಿ ಜಿಲ್ಲೆಯ ಬಂಕಾಪುರದ
ರಾಷ್ಟ್ರೀಯ ಹೆದ್ದಾರಿ ಬಳಿ ಕಾರನ್ನು ತಡೆದು ಮಠಕ್ಕೆ ವಾಪಸ್ ಕರೆತಂದರು.
ಇದನ್ನು ಮರೆಮಾಚಲು ಶ್ರೀಗಳು ನಾನು ಎಲ್ಲಿಗೂ ಹೋಗಿಲ್ಲ. ಕಾರ್ಯಕ್ರಮದ ನಿಮಿತ್ತ ಹಾವೇರಿಗೆ ಬಂದಿದ್ದೆ. ಪೊಲೀಸರ ಭದ್ರತೆಯಲ್ಲಿ ಮಠಕ್ಕೆ ಹಿಂತಿರುಗಿದ್ದೇನೆ. ನಾನು ಪಲಾಯನ ಮಾಡುವುದಿಲ್ಲ ಎಂದು ಭಕ್ತರ ಮುಂದೆ ಸಮರ್ಥಿಸಿಕೊಂಡರು.
ಹೊರರಾಜ್ಯಕ್ಕೆ ತೆರಳುವುದು ಗೊತ್ತಗುತ್ತಿದ್ದಂತೆ ಪೊಲೀಸರು ಕಾರನ್ನು ತಡೆದು ಮಠಕ್ಕೆ ಮರಳಬೇಕು.ಇಲ್ಲದಿದ್ದರೆ , ಪೋಕ್ಸೋ ಕಾಯ್ದೆಯಡಿ ಬಂಧಸಬೇಕಾಗುತ್ತದೆ ಎಂದು ಶ್ರೀಗಿಗೆ ಮನವರಿಕೆ ಮಾಡಿಕೊಟ್ಟರು.
ಸೋಮವಾರ ಮುರುಘಮಠದ ಶಿವಮೂರ್ತಿ ಸ್ವಾಮೀಜಿಯವರು ಚಿತ್ರದುರ್ಗದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾಗ ಬಂಧನಕ್ಕೆ ಒಳಗಾದರು ಎಂದು ಮೊದಲು ಮಾಧ್ಯಮಗಳು ವರದಿ ಮಾಡಿದ್ದವು. ಪೊಲೀಸರು ಹಾವೇರಿ ಜಿಲ್ಲೆ ಬಂಕಾಪುರದ ಬಳಿ ಸ್ವಾಮಿಯನ್ನು ವಶಕ್ಕೆ ಪಡೆದಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ ಈ ಕುರಿತು ಹಾವೇರಿ ಜಿಲ್ಲಾ ವರಿಷ್ಧಾಧಿಕಾರಿ ಸ್ಪಷ್ಟೀಕರಣ ನೀಡಿದ್ದು, ಯಾವುದೇ ಹೈಪ್ರೊಫೈಲ್ ಬಂಧನ ನಡೆಸಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ:
ಚಿತ್ರದುರ್ಗದ ಶ್ರೀಮಠದ ಆಡಳಿತ ವ್ಯಾಪ್ತಿಗೆ ಬರುವ ವಸತಿನಿಲಯದಲ್ಲಿ ಇರುವ ವಿದ್ಯಾರ್ಥಿನಿಯರ ಮೇಲೆ ಶಿವಮೂರ್ತಿ ಶರಣರು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿದೆ.
ಮುರುಘಾಮಠ ಶಿವಮೂರ್ತಿ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಎಫ್ಐಆರ್ ಹಾಕಲಾಗಿತ್ತು. ಚಂದ್ರಶೇಖರ್ ಎಂಬುವವರು ದೂರನ್ನು ನೀಡಿದ್ದಾರೆ.
ಮುರುಘಾ ಮಠದ ಡಾ. ಶಿವಮೂರ್ತಿ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಸಿರುವ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ ಬೆನ್ನಲ್ಲೇ ಇಬ್ಬರು ಬಾಲಕಿಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆದೊಯ್ಯಲಾಗಿತ್ತು. ಚಿತ್ರದುರ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಇಬ್ಬರು ಶಾಲಾ ಬಾಲಕಿಯರನ್ನು ಒಪ್ಪಿಸಲಾಗಿತ್ತು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleನೆಲದ ಕಾನೂನು ಗೌರವಿಸುವೆ, ಪಲಾಯನ ಮಾಡಲಾರೆ: ಮುರುಘಾ ಶ್ರೀ
Next Article ಸೆ.12 ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಆರಂಭ