ವೃದ್ಧ ದಂಪತಿಯನ್ನ ಕೊಚ್ಚಿ ಕೊಲೆಗೈದ ದುಷ್ಕರ್ಮಿ

ಮೈಸೂರು: ಮಗನ ಮೇಲಿನ ಸಿಟ್ಟಿಗೆ ಆತನ ತಂದೆ-ತಾಯಿಯನ್ನ ದುಷ್ಕರ್ಮಿಯೊಬ್ಬ ಕೊಚ್ಚಿ ಕೊಲೆಗೈದಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈರಯ್ಯ ಅಲಿಯಾಸ್ ಕುಂಡ ಕೊಲೆ ಮಾಡಿದ ಆರೋಪಿ. ಎದುರು ಮನೆಯ ವಾಸವಿದ್ಧ ನಿಂಗಮ್ಮ(50) ಮತ್ತು ಮಾದಯ್ಯ(60) ಕೊಲೆಯಾದವರು. ಈರಯ್ಯ ಕುಡಿದ ಅಮಲಿನಲ್ಲಿ ಗರ್ಭಿಣಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕೈನಲ್ಲಿ ಲಾಂಗ್ ಹಿಡಿದು ಸಿಕ್ಕಸಿಕ್ಕವರ ಮೇಲೆ ಬೀಸಿ ಗಂಭೀರ ಹಲ್ಲೆ ನಡೆಸಿದ್ದು ಈ ವೇಳೆ ವೃದ್ಧ ದಂಪತಿಯನ್ನ ಹತ್ಯೆಗೈದಿದ್ದಾನೆ.

ಮೊದಲನೇ ಪತ್ನಿಯನ್ನು ಕೊಂದು ಜೈಲು ಸೇರಿ ನಂತರ ಹೊರ ಬಂದಿದ್ದ ಈರಯ್ಯ, ಕುಡಿದ ಅಮಲಿನಲ್ಲಿ 2ನೇ ಗರ್ಭಿಣಿ ಪತ್ನಿ ಮಹದೇವಮ್ಮರನ್ನ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಪತ್ನಿ ಮಹದೇವಮ್ಮಳ ತಾಯಿ ಮತ್ತು ತಂದೆಗೂ ಗಂಭೀರ ಹಲ್ಲೆ ನಡೆಸಿದ್ದಾನೆ.ಹಲ್ಲೆಯಾದ ಹಿನ್ನೆಲೆ ಗೌರಮ್ಮ, ಸುರೇಶ ಅಲಿಯಾಸ್ ಕೂಸು, ಮತ್ತೊಬ್ಬ ಮಹದೇವಮ್ಮ ಸ್ಥಿತಿ ಗಂಭೀರವಾಗಿದೆ.

ಇನ್ನು ಕೊಲೆಪಾತಕ ಈರಯ್ಯನನ್ನ ನಂಜನಗೂಡಿನ ಪೋಲಿಸರು ಬಂಧಿಸಿದ್ದಾರೆ. ಮೈಸೂರು ಎಸ್ಪಿ ಆರ್.ಚೇತನ್, ಡಿವೈಎಸ್ಪಿ ಗೋವಿಂದರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

× Chat with us