ರಾಜ್ಯ

ಮುನಿಯಪ್ಪ ಸಿಎಂ ಆದರೆ ಸಂತೋಷ ಪಡುತ್ತೇನೆ: ಸಚಿವ ಪರಮೇಶ್ವರ್‌

ಬೆಂಗಳೂರು: ಕೆ.ಎಚ್.ಮುನಿಯಪ್ಪ ಮುಖ್ಯಮಂತ್ರಿ ಆದರೆ ನಾನು ಸಂತೋಷ ಪಡುತ್ತೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಮುನಿಯಪ್ಪ ಹಿರಿಯರಿದ್ದಾರೆ. ಅವರು ಸಮರ್ಥರು. ತುಳಿತಕ್ಕೆ ಒಳಗಾಗಿರೋ ಸಮುದಾಯದಿಂದ ಬಂದವರು. ಮುನಿಯಪ್ಪ ಅವರು ಸಿಎಂ ಆದರೆ ತಪ್ಪೇನು ಎಂದು ಪ್ರಶ್ನೆ ಮಾಡಿದರು.

ಇದನ್ನು ಓದಿ: ಈಗಿನ ಪರಿಸ್ಥಿತಿಗೆ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ: ಯತೀಂದ್ರ ಸಿದ್ದರಾಮಯ್ಯ

ಮುನಿಯಪ್ಪ ಸಿಎಂ ಆದರೆ ನಾನು ಸಂತೋಷ ಪಡುತ್ತೇನೆ. ಆದರೆ ಸಿಎಂ ಆಯ್ಕೆ ಬಗ್ಗೆ ಹೈಕಮಾಂಡ್‌ನವರೇ ತೀರ್ಮಾನಿಸಬೇಕು. ಪ್ರಸ್ತುತ ಬಿಹಾರ ಚುನಾವಣೆಗೆ ಹೈಕಮಾಂಡ್‌ ತುಂಬಾ ಬ್ಯುಸಿ ಇದೆ ಎಂದರು.

ಇನ್ನು ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಬಗ್ಗೆ ಮಾತುಗಳು ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನವೆಂಬರ್‌ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತೋ ಅದರ ಬಗ್ಗೆಯೂ ನನಗೆ ಗೊತ್ತಿಲ್ಲ. ಏನೇ ಇದ್ದರೂ ಹೈಕಮಾಂಡ್‌ ನಿರ್ಧಾರವೇ ಅಂತಿಮ. ನಾವು ನಿತ್ಯ ಇಲ್ಲಿ ಮಾತನಾಡುವುದರಿಂದ ಗೊಂದಲ ಆಗುತ್ತದೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಸಂಸದ ಯದುವೀರ್ ಒಡೆಯರ್ ಹುಟ್ಟುಹಬ್ಬದಂದು ‘ರಂಗೋಲಿ’ ಶುಭಾಶಯ

ಮೈಸೂರು: ಇಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಅರಮನೆಯ…

2 mins ago

ಮಾರ್ಚ್.‌28ರಂದು ಐಪಿಎಲ್‌ ಉದ್ಘಾಟನಾ ಪಂದ್ಯ: ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್‌ ಬುಕ್ಕಿಂಗ್‌

ಬೆಂಗಳೂರು: ಮಾರ್ಚ್.‌28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಬಗ್ಗೆ ಮಾತನಾಡಿದ ಕಮಿಷನರ್‌ ಸೀಮಂತ್‌ ಕುಮಾರ್‌…

8 mins ago

ಇಂದು ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ

ಬೆಂಗಳೂರು: 11 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಇಂದು ಸಂಜೆ ತಿಗಳರಪೇಟೆಯ…

1 hour ago

ವಿಧಾನಮಂಡಲ ಅಧಿವೇಶನ ಒಂದು ದಿನ ಮೊಟಕು.?

ಬೆಂಗಳೂರು: ವಿಧಾನಮಂಡಲ ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾರ್ಚ್.‌27ರವರೆಗೆ ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನ ಮಾರ್ಚ್.‌26ರಂದು ಕೊನೆಗೊಳ್ಳಲಿದೆ.…

1 hour ago

ಕೊಲಂಬಿಯಾದಲ್ಲಿ 125 ಸೈನಿಕರಿದ್ದ ಮಿಲಿಟರಿ ವಿಮಾನ ಪತನ: 66 ಮಂದಿ ದುರ್ಮರಣ

ಬೊಗೋಟಾ: 125 ಜನರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಟೇಕಾಫ್‌ ಕೆಲ ಸಮಯದಲ್ಲಿ ಪತನಗೊಂಡು 66 ಜನರು ಸಾವನ್ನಪ್ಪಿರುವ ಘಟನೆ ಕೊಲಂಬಿಯಾದಲ್ಲಿ…

2 hours ago

ಓದುಗರ ಪತ್ರ: ಕಲ್ಲಾಗದಿರು ಮಳೆಯೇ!

ಬಾ ಮಳೆಯೇ ಬಾ.. ನೊಂದು - ಬೆಂದು ಬಸವಳಿದ ರೈತನ ಬಾಳಿಗೆ ಹೂವಾಗಿ ಬಾ ಕಾದ ಭೂತಾಯ ಒಡಲಿಂಗೆ ಹನಿ…

3 hours ago