ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಕೆ ಹಿನ್ನೆಲೆ ಪುರಸಭೆಯ ಮುಖ್ಯಾಧಿಕಾರಿ ಕುಮಾರ್ ಪರಿಶೀಲನೆ

ಕೆ.ಆರ್.ಪೇಟೆ: ಪಟ್ಟಣದ ವಿವಿಧ ಹೋಟೆಲ್ ಗಳು ಹಾಗೂ ಕ್ಯಾಂಟೀನ್ ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕುಮಾರ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಟ್ಟಣದ ತಾಲ್ಲೂಕು ಪಂಚಾಯಿತಿ ವೃತ್ತದಲ್ಲಿರುವ ಫುಟ್ ಪಾತ್ ಕ್ಯಾಂಟೀನ್, ಹೊಸಹೊಳಲು ರಸ್ತೆಯ ಕ್ಯಾಂಟೀನ್ ನಲ್ಲಿ ಕಾಟನ್ ಬಟ್ಟೆಗೆ ಬದಲಾಗಿ ಪ್ಲಾಸ್ಟಿಕ್ ಬಳಸಿ ಇಡ್ಲಿ ಮಾಡುತ್ತಿರುವುದನ್ನು ಕಂಡು ಪ್ಲಾಸ್ಟಿಕ್ ನಲ್ಲಿ ಇಡ್ಲಿ ಬೇಯಿಸಿದರೆ ಗ್ರಾಹಕರಿಗೆ ಕ್ಯಾನ್ಸರ್ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಇಡ್ಲಿ ಬೇಯಿಸಲು ಕಾಟನ್ ಬಟ್ಟೆಯನ್ನು ಬಳಸಬೇಕು. ಪಾರ್ಸಲ್ ಕಟ್ಟಲು 40ಮೈಕ್ರಾನ್ ಗಿಂತ ಕಡಿಮೆ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಹೋಟೆಲ್ ನಲ್ಲಿ ಸ್ವಚ್ಚತೆ,ಕಾಪಾಡಿಕೊಳ್ಳಬೇಕು. ಗ್ರಾಹಕರಿಗೆ ಶುದ್ದ ಕುಡಿಯುವ. ನೀರು ಕೊಡಬೇಕು. ಹಾಗೂ ಬಿಸಿ ನೀರು ನೀಡಬೇಕು. ತಾಜಾ ಆಹಾರವನ್ನು ಗ್ರಾಹಕರಿಗೆ ನೀಡಬೇಕು ಸ್ವಚ್ಚತೆ ಕಾಪಾಡಿಕೊಳ್ಳದೇ ಇದ್ದರೆ ಅಂತಹ ಹೋಟೆಲ್ ಗಳು ಮತ್ತು ಕ್ಯಾಂಟೀನ್ ಗಳನ್ನು ಬಂದ್ ಮಾಡಿಸಬೇಕಾಗುತ್ತದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಕುಮಾರ್ ಅವರು ಎಚ್ಚರಿಕೆ ನೀಡಿದರು.

ಪುಟ್ ಪಾತ್ ಒತ್ತು ವರಿ‌ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡಬಾರದು. ಪಾದಚಾರಿಗಳಿಗೆ ತೊಂದರೆಯಾಗದಂತೆ ಫುಟ್ ಪಾತ್ ವ್ಯಾಪಾರಿಗಳು ವ್ಯವಹಾರ ನಡೆಸಬೇಕು. ಪಟ್ಟಣದ ಸ್ವಚ್ಚತೆಗೆ ಹಾಗೂ ಸುಂದರ ನಗರ ನಿರ್ಮಾಣಕ್ಕೆ ಎಲ್ಲಾ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಕಸ ಹಾಕಬಾರದು. ಕಸದ ವಾಹನಕ್ಕೆ ಕಸವನ್ನು ಹಸಿ ಕಸ, ಒಣ ಕಸ ಬೇರ್ಪಡಿಸಿ ನೀಡಬೇಕು. ಪ್ಲಾಸ್ಟಿಕ್ ನಿಂದ ಕೂಡಿದ ಪ್ಲಾಸ್ಟಿಕ್ ಕಸವನ್ನು ಯಾವುದೇ ಕಾರಣಕ್ಕೂ ಹಾಕಬಾರದು ಎಂದು ಮುಖ್ಯಾಧಿಕಾರಿಗಳು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಹಲವು ನೌಕರರು ಉಪಸ್ಥಿತರಿದ್ದರು.

× Chat with us