ಮಂಗಳೂರು: ಇಲ್ಲಿನ ಶಕ್ತಿ ದೇವತೆಯ ಮುಂದೆ ಪ್ರಾಣಿ ಬಲಿ ಕೊಟ್ಟು, ಅದರ ರಕ್ತವನ್ನು ಮುಡಾ ಕೇಸ್‌ನ ದೂರುದಾರರದ ಸ್ನೇಹಮಯಿ ಕೃಷ್ಣ ಹಾಗೂ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರ ಫೋಟೋಗಳಿಗೆ ಅರ್ಪಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣ ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ಫೋನ್‌ನಲ್ಲಿ ವೀಡಿಯೋ ಚಿತ್ರೀಕರಣವಾಗಿದೆ ಎಂದು ತಿಳಿದು ಬಂದಿದೆ.
ಕಳೆದ ದಿನಗಳ ಹಿಂದೆಷ್ಟೆ ಮಸಾಜ್ ಪಾರ್ಲರ್ ಒಂದಕ್ಕೆ ಅಕ್ರಮವಾಗಿ ನುಗಿ ಗಲಾಟೆ ನಡೆಸಿದ್ದ ಆರೋಪದ ಮೇಲೆ ಪ್ರಸಾದ್ ಅತ್ತಾವರ್ ಬಂಧನವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಬಂಧಿತ ಆರೋಪಿಯ ಮೊಬೈಲ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆದಿದ್ದಾರೆ. ಆ ವೇಳೆ ಶಕ್ತಿ ದೇವತೆಗೆ ಪ್ರಾಣಿ ಬಲಿ ನೀಡಿ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರ ಫೋಟೋಗಳನ್ನಿಟ್ಟು ರಕ್ತಾಭಿಷೇಕ ಮಾಡಿರುವ ಸ್ಫೋಟಕ ಅಂಸ ಬೆಳಕಿಗೆ ಬಂದಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಇಬ್ಬರ ಫೋಟೋಗಳಿಗೆ ರಕ್ತಾಭಿಷೇಕ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಮಡದಿಗೆ ಮಂಜೂರಾಗಿರುವ ಮುಡಾ ನಿವೇಶನಗಳ ವಿರುದ್ಧದ ಹೋರಾಟದಲ್ಲಿ ಈ ಇಬ್ಬರಿಗೂ ಬಲ ತುಂಬುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಹೈದರಾಬಾದ್ : ಅಮೆರಿಕ-ಇರಾನ್ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಜಾಗತಿಕ ತೈಲ…
ಶುಭಾ ಖಟಾವಕರ ಮ್ಹೆತ್ರಸ್ 72,000 ಕೋಟಿ ರೂ.ಗಳಿಂದ 90,000 ಕೋಟಿ ರೂ.ವೆಚ್ಚದ ಯೋಜನೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ…
ರಾಜಕಾರಣಿಗಳು ಕೊನೆಗೂ ಕೇಳಿಕೊಳ್ಳಬೇಕಿರುವುದು ನೀವು ಯಾರೋ ಒಬ್ಬರ ಬದುಕು ಚಂದವಾಗಲು ಕಾರಣವಾದಿರಾ ಎಂಬ ಪ್ರಶ್ನೆ ಮಾತ್ರವೇ. ಅದೊಂದೇ ಸತ್ಯ. ಉಳಿದದ್ದೆಲ್ಲ…
ಸಂಗಾತಿಯ ಹಂಗಿಲ್ಲದೆ ಅಮ್ಮನಾದ ಖ್ಯಾತ ಚಿತ್ರತಾರೆ ಭಾವನಾ ರಾಮಣ್ಣ ಜೊತೆ ಮಾತುಕತೆ ನಿಮ್ಮ ವೃತ್ತಿಪರ ಒತ್ತಡಗಳ ನಡುವೆ…
ಮಡಿಕೇರಿ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ನಗರಸಭೆಯಲ್ಲಿ ಖಾಯಂ ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದು,…
ಎಚ್.ಡಿ.ಕೋಟೆ: ಅರೆ ಮಲೆನಾಡು ಎಂದೇ ಹೆಸರಾದ ತಾಲ್ಲೂಕಿನಲ್ಲಿ ತಡವಾಗಿ ಮಳೆ ಪ್ರಾರಂಭವಾದರೂ ಕಳೆದ ಒಂದು ವಾರದಿಂದ ಬೀಳುತ್ತಿರುವ ಉತ್ತಮ ಮಳೆಯಿಂದ…