ನೆಲಮಂಗಲ : ನೈಸ್ ರಸ್ತೆಯ ಟೋಲ್ ಶುಲ್ಕ ಹೆಚ್ಚಳವನ್ನು ಸದ್ಯಕ್ಕೆ ಸ್ಥಗಿತ ಮಾಡಲಾಗಿದೆ. ಬರುವ ಜುಲೈ ತಿಂಗಳಿನಿ<ಮದ ನೈಸ್ ರಸ್ತೆಯ ಟೋಲ್ ಶುಲ್ಕವನ್ನು ಹೆಚ್ಚಳವನ್ನು ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರಿಗಿನ ನೈಸ್ ಟೋಲ್ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆಯ ಟೋಲ್ ಗೆ ಅನುಗುಣವಾಗಿ ಟೋಲ್ ಶುಲ್ಕ ಹೆಚ್ಚಿಳ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು.
ಆದರೆ ಇದೀಗ ಎದುರಾಗಿರುವ ಕೆಲವು ತಾಂತ್ರಿಕ ಸಮಸ್ಯೆ ಕಾರಣದಿಂದ ಶುಲ್ಕ ಏರಿಕೆಯನ್ನ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಮುಂದಿನ ವಾರದಲ್ಲಿ ಟೋಲ್ ಶುಲ್ಕ ಏರಿಕೆ ಮಾಡುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ಶುಲ್ಕ ಹೆಚ್ಚಳವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
ಟೋಲ್ ಶುಲ್ಕ ಮೊದಲಿನಂತೆಯೇ ಹೀಗಿದೆ.
- ಹೊಸೂರು ಟು ಬನ್ನೇರುಘಟ್ಟ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 125, ಟ್ರಕ್: 85, ಎಲ್ಸಿವಿ: 45, ಎಂಎವಿ: 90 ರೂ.
- ಬನ್ನೇರುಘಟ್ಟ ಟು ಕನಕಪುರ ರಸ್ತೆ: ದ್ವಿಚಕ್ರ: 12, ಕಾರು: 35, ಬಸ್: 100, ಟ್ರಕ್: 65, ಎಲ್ಸಿವಿ: 35, ಎಂಎವಿ: 70 ರೂ.
- ಕನಕಪುರ ರಸ್ತೆ ಟು CLOVER LEAF: ದ್ವಿಚಕ್ರ: 8, ಕಾರು: 25, ಬಸ್: 65, ಟ್ರಕ್: 40, ಎಲ್ಸಿವಿ: 25, ಎಂಎವಿ: 40 ರೂ.
- ವರ್ ಲೀಫ್ ಟು ಮೈಸೂರು ರಸ್ತೆ: ದ್ವಿಚಕ್ರ: 8, ಕಾರು: 20, ಬಸ್: 55, ಟ್ರಕ್: 35, ಎಲ್ಸಿವಿ: 25, ಎಂಎವಿ: 40 ರೂ.
- ಮೈಸೂರು ರಸ್ತೆ ಟು ಮಾಗಡಿ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 135, ಟ್ರಕ್: 90, ಎಲ್ಸಿವಿ: 55, ಎಂಎವಿ: 95 ರೂ.
- ಮಾಗಡಿ ರಸ್ತೆ ಟು ತುಮಕೂರು ರಸ್ತೆ: ದ್ವಿಚಕ್ರ: 12, ಕಾರು: 40, ಬಸ್: 105, ಟ್ರಕ್: 70, ಎಲ್ಸಿವಿ: 40, ಎಂಎವಿ: 75 ರೂ.
- ಲಿಂಕ್ ರಸ್ತೆ: ದ್ವಿಚಕ್ರ: 18, ಕಾರು: 50, ಬಸ್: 130, ಟ್ರಕ್: 90, ಎಲ್ಸಿವಿ: 50, ಎಂಎವಿ: 105 ರೂ.
ಎಂದು ಮಾಹಿತಿಯನ್ನು ನೀಡಿದೆ.