ಚೆಸ್ಕಾಂ ಅಧಿಕಾರಿ ವಿರುದ್ಧ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗರಂ!

ಮೈಸೂರು: ಚೆಸ್ಕಾಂ ಅಧಿಕಾರಿ ವಿರುದ್ಧ ಶಾಸಕ ಡಾ.ಯತೀಂದ್ರ ಗರಂ ಆಗಿದ್ದಾರೆ. ಬಾಯಿ ಮುಚ್ಚಿಕೊಳ್ಳಿ, ಅಧಿಕ ಪ್ರಸಂಗ ಮಾಡಬೇಡ. ಏನ್ ರೀ ನಿಮ್ಮ ಹೆಸರು ಎಂದು ಏರು ಧ್ವನಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನೀವು ಸರ್ಕಾರಿ ನೌಕರರಾಗುವುದಕ್ಕೆ ಅನ್ಫಿಟ್ ಎಂದು ಕಿಡಿಕಾರಿರುವ ಶಾಸಕ, ನೀವು ಇರುವುದು ಜನರ ಸಮಸ್ಯೆಯನ್ನು ಆಲಿಸುವುದಕ್ಕೆ. ವಿದ್ಯುತ್ ಸಂಪರ್ಕ ಕಡಿತ ಮಾಡುವುದಕ್ಕೆ ಅಲ್ಲ ಅಂತ ಗರಂ ಆಗಿದ್ದಾರೆ. ಏರು ಧ್ವನಿಯಲ್ಲಿ ಚೆಸ್ಕಾಂ ಅಧಿಕಾರಿಗೆ ಡಾ.ಯತೀಂದ್ರ ತರಾಟೆ ತೆಗೆದುಕೊಂಡಿರುವ ಘಟನೆ ವರುಣಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವರುಣಾ ಕ್ಷೇತ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆ ಅಧಿಕಾರಿ ವಿರುದ್ಧ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನೀವು ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಬಿಲ್ ವಸೂಲಿ ಮಾಡಿ. ಜನರು 500 ರೂಪಾಯಿ ಬಿಲ್ ಕೊಟ್ಟರೂ ತೆಗೆದುಕೊಳ್ಳಿ. ಜನರ ಬಳಿ ಕಂತು ಲೆಕ್ಕದಲ್ಲಿ ಹಣ ಪಡೆಯಿರಿ. ಆದರೆ ವಿದ್ಯುತ್ ಸಂಪರ್ಕ ಕಡಿತ ಮಾಡದಂತೆ ತಾಕೀತು ಮಾಡಿದ್ದಾರೆ.

× Chat with us