ರಾಜ್ಯ

ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್‌ಮ್ಯಾನ್‌ ಅರೆಸ್ಟ್:‌ ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮಾಸ್ಕ್‌ಮ್ಯಾನ್‌ನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಸ್ಕ್‌ಮ್ಯಾನ್‌ ಬಂಧನವಾಗಿದೆ ಎಂದು ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೇರೆ ಯಾವುದೇ ವಿಚಾರ ಹೇಳಲಾಗುವುದಿಲ್ಲ. ವರದಿ ಬಂದ ಬಳಿಕವೇ ಎಲ್ಲವೂ ಗೊತ್ತಾಗಲಿದೆ. ವರದಿ ಬರುವ ಮನ್ನ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ತನಿಖೆ ನಡೆಯುವಾಗ ನಾವು ಹೇಳಿಕೆ ಕೊಡುವುದಿಲ್ಲ. ಗೊಂದಲ ಸೃಷ್ಟಿ ಮಾಡುವಂತಿಲ್ಲ. ಯಾವುದಾದರೂ ಜಾಲ ಇದೆಯೇ ಇಲ್ಲವೇ ಷಡ್ಯಂತ್ರ ನಡೆದಿದೆಯೇ? ಎಲ್ಲವೂ ಎಸ್‌ಐಟಿ ತನಿಖೆ ಮೂಲಕವೇ ಬಯಲಾಗಬೇಕಿದೆ. ತನಿಖೆ ವರದಿ ಬಂದ ಬಳಿಕವೇ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಎಂಡಿಎ ಬಜೆಟ್‌ | ಮೈಸೂರು ಅಭಿವೃದ್ಧಿಗೆ ಒತ್ತು ; 799.90 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ

ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ತೀವ್ರ…

12 mins ago

ಮೈಸೂರು | 24 ಅಪರಾಧ ಪ್ರಕರಣ ಭೇಧಿಸಿದ ಪೊಲೀಸರು ; 20ಕ್ಕೂ ಹೆಚ್ಚು ಆರೋಪಿಗಳು ವಶಕ್ಕೆ

ಮೈಸೂರು : ಮನೆಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿದ್ದ 24 ಅಪರಾಧ ಪ್ರಕರಣಗಳನ್ನು…

56 mins ago

ʻಪಂಚ ಗ್ಯಾರಂಟಿʼಯಿಂದ ಮಹಿಳಾ ಸಬಲೀಕರಣ ಸಾಧ್ಯ : ಅರುಣ್ ಕುಮಾರ್

ಮೈಸೂರು : ರಾಜ್ಯ ಸರ್ಕಾರದ ʻಪಂಚ ಗ್ಯಾರಂಟಿʼ ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ…

1 hour ago

ಬೆಟ್ಟಳ್ಳಿ ಮಾರಮ್ಮನ ಜಾತ್ರೆ ; ಹನೂರಲ್ಲಿ 2 ದಿನ ಮದ್ಯ ಮಾರಾಟ ನಿಷೇಧ

ಹನೂರು : ಪಟ್ಟಣದಲ್ಲಿ ನಡೆಯಲಿರುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಕಾಲ ಹನೂರು…

1 hour ago

ಕೆ.ಆರ್.ಆಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ICU ಘಟಕ ಸ್ಥಾಪಿಸಿ : ಎಂಎಲ್‌ಸಿ ಕೆ.ಶಿವಕುಮಾರ್ ಮನವಿ

ಬೆಂಗಳೂರು : ಮಂಡ್ಯ, ಚಾಮರಾಜನಗರ, ಹೊಳೆನರಸೀಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ತುರ್ತು ಸೇವೆಗಳ ಅನುಕೂಲಕ್ಕಾಗಿ ಆಸ್ಪತ್ರೆಯಲ್ಲಿ…

2 hours ago

ಈವರೆಗೂ ಇರಾನ್‌ನಿಂದ 67 ಸಾವಿರ ಭಾರತೀಯರನ್ನು ಕರೆ ತಂದಿದ್ದೇವೆ: ಸಚಿವ ಜೈಶಂಕರ್‌

ನವದೆಹಲಿ: ಇರಾನ್-‌ಇಸ್ರೇಲ್‌ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಿಲುಕಿದ್ದ 67 ಸಾವಿರ ಭಾರತೀಯರನ್ನು ಕರೆ ತಂದಿದ್ದೇವೆ ಎಂದು ವಿದೇಶಾಂಗ ಸಚಿವ ಜೈಶಂಕರ್‌…

4 hours ago