ದೇಶಾದ್ಯಂತ ಸಡಗರ – ಸಂಭ್ರಮದ ಸಂಕ್ರಾಂತಿ ಆಚರಣೆ

ಮೈಸೂರು: ಕೋವಿಡ್‌ ಕರಾಳ ಛಾಯೆ ನಡುವೆ ಮಕರ ಸಂಕ್ರಾಂತಿ ಸಂಭ್ರಮ. ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಮಕರ ಸಂಕ್ರಾಂತಿ ಸುಗ್ಗಿ ಸಂಭ್ರಮದ ಸಂಕೇತ.

ದೇಶದ ಜನತೆಗೆ ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ. ಕೋವಿಡ್‌ ಪಿಡುಗು ದೂರವಾಗಿ ಎಲ್ಲರ ಬಾಳಲ್ಲೂ ನೆಮ್ಮದಿ ನೆಲೆಸಲಿ ಎಂದು ಗಣ್ಯರ ಶುಭ ಹಾರೈಕೆ.

ವಿವಿಧ ರಾಜ್ಯಗಳಲ್ಲಿ ಸಂಕ್ರಾಂತಿಯನ್ನು ವಿವಿಧ ಹೆಸರುಗಳು, ಧಾರ್ಮಿಕ ವಿಧಿ-ವಿಧಾನಗಳಿಂದ ಆಚರಣೆ. ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಸಂಕ್ರಾಂತಿ, ಮಕರ ಸಂಕ್ರಾಂತಿ ಬಹು ಜನಪ್ರಿಯ ಹಬ್ಬ. ತಮಿಳುನಾಡಿನಲ್ಲಿ ಪೊಂಗಲ್‌, ಗುಜರಾತ್‌ನಲ್ಲಿ ಉತ್ತರಾಯಣ ಎಂದೇ ಪ್ರಸಿದ್ದಿ. ಉತ್ತರ ಪ್ರದೇಶದಲ್ಲಿ ಮಾಘಿ, ಅಸ್ಸಾಂನಲ್ಲಿ ಮಾಘ ಬಹು ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ನೇಪಾಳ, ಬರ್ಮಾ, ಕಾಂಬೋಡಿಯಾ, ಥೈಲೆಂಡ್‌ಗಳಲ್ಲೂ ಸಂಕ್ರಾಂತಿ ಆಚರಿಸುವ ಸಂಪ್ರದಾಯವಿದೆ.

ಭಾರತದ ಹಲವು ಭಾಗಗಳಲ್ಲಿ ಮುಂಜಾನೆಯಿಂದಲೇ ಭಕ್ತ ಸಮೂಹದಿಂದ ಸಂಕ್ರಾಂತಿ ಸಡಗರ. ಮೈಸೂರಿನಲ್ಲಿ ಕೋವಿಡ್‌ ನಡುವೆಯೂ ಜನರಿಂದ ಸಂಕ್ರಾಂತಿ ಅಚರಣೆ. ಬಂಧುಮಿತ್ರರಿಂದ ಎಳ್ಳು-ಬೆಲ್ಲ ಬೀರಿ ಪರಸ್ಪರ ಶುಭಾಶಯಗಳ ವಿನಿಯಮ. ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿಯನ್ನು ಸುಗ್ಗಿ ಸಂಕೇತವಾಗಿ ಆಚರಿಸಲಾಗುತ್ತದೆ.

ಕೋವಿಡ್ ಪಿಡುಗನ್ನು ನಿರ್ಮೂಲನೆ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಿ ಸಂಕ್ರಾಂತಿ ಆಚರಿಸೋಣ.

× Chat with us