ಮಡಿಕೇರಿ: ಮಡಿಕೇರಿ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೆ.27ರಿಂದ ಅ.5ರವರಗೆ ಆಯೋಜಿಸಿರುವ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಚಾಲನೆ ಸಿಗಲಿದೆ ಎಂದು ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಾತನಾಡಿದ ಅವರು, ಸೆ.27ರಂದು ಸಂಜೆ 6.30 ಗಂಟೆಗೆ ಕುಶಾಲನಗರದ ಕುಂದನ ನೃತ್ಯಾಲಯದ ವತಿಯಿಂದ ‘ನೃತ್ಯ ವೈವಿಧ್ಯೆ’, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಖ್ಯಾತಿಯ ಚೈತಾಲಿ ಚಿಲಾತರವರಿಂದ ‘ನೃತ್ಯ’, ರವಿ ಭೂತನಕಾಡು ಮತ್ತು ತಂಡದವರಿಂದ ‘ಗಾನ ವೈವಿಧ್ಯ’, ನಾಟ್ಯ ಮಯೂರಿ ನೃತ್ಯ ಶಾಲೆ ವಿರಾಜಪೇಟೆ ತಂಡದಿಂದ ‘ನೃತ್ಯ ವೈವಿಧ್ಯೆ’, ಬಿ.ಎ.ಗಣೇಶ್ ಶಾಂತಳ್ಳಿ ತಂಡದಿಂದ ‘ಸುಗಮಸಂಗೀತ’ ನಡೆಯಲಿದೆ ಎಂದು ತಿಳಿಸಿದರು.
ಸೆ.28 ರಂದು ಸಂಜೆ 6.30ಗಂಟೆಗೆ ಟೀಂ ಆ್ಯಟಿಟ್ಯೂಡ್ ಮಡಿಕೇರಿ ತಂಡದಿಂದ ಫ್ಯೂಶನ್ ಡ್ಯಾನ್ಸ್, ಸ್ನೇಹ ಮಧುಕರ್ ಶೇಟ್ ಮತ್ತು ತಂಡದಿಂದ ಸಂಗೀತ ಸುಧೆ, ಜಗನ್ಮೋಹನ ನಾಟ್ಯಾಲಯ ವಿರಾಜಪೇಟೆ ತಂಡದಿಂದ ’ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ನಡೆಯಲಿದೆ.
ಸೆ.29ರಂದು ಸಂಜೆ 6.30ಗಂಟೆಗೆ ವಿವಿಧ ತಂಡಗಳಿಂದ ‘ಸಂಗೀತ ನೃತ್ಯ ವೈವಿಧ್ಯ’, ಗೀತಗಾಯನ, ಸಂಗೀತ ರಸಮಂಜರಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅ.1ರಂದು ಯುವ ಕಲೋತ್ಸವ ನಡೆಯಲಿದೆ.
ಅ.2ರಂದು ಸಂಜೆ 6.30ಗಂಟೆಗೆ ಜಾನಪದ ದಸರಾ ಸಂಭ್ರಮ ನಡೆಯಲಿದೆ.
ಅ.4ರಂದು ಆಯುಧಪೂಜೆಯಂದು ಹೇಮಂತ್-ಹೇರಂಭ ಸಹೋದರರಿಂದ ವೇಣುವಾದನ, ನೃತ್ಯ ಲಹರಿ ನೃತ್ಯಾಲಯ ಮಂಗಳೂರು ತಂಡದಿಂದ ‘ಪುಣ್ಯಕೋಟಿ ನೃತ್ಯರೂಪಕ’, ಭಾಗಮಂಡಲ ಅಭಿನಯ ಕಲಾಮಿಲನ ತಂಡದಿಂದ ’ನೃತ್ಯ ವೈವಿಧ್ಯ’, ರಿಧಂ ಮೇಕರ್ಸ್ ಮೈಸೂರು ತಂಡದಿಂದ ’ಸಂಗೀತ ರಸಮಂಜರಿ’, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಕೊಟಗುನ ರಾಹುಲ್ರಾವ್ರಿಂದ ನೃತ್ಯ ನಡೆಯಲಿದೆ ಎಂದು ತಿಳಿಸಿದರು.